ವಿಶ್ವ ಬಾಕ್ಸಿಂಗ್: ಫೈನಲ್‌ಗೆ ಲಗ್ಗೆ ಇರಿಸಿದ ಅಮಿತ್
ವಿಶ್ವ ಬಾಕ್ಸಿಂಗ್ ಕೂಟದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲಿಗ
Team Udayavani, Sep 20, 2019, 8:15 PM IST
ಎಕಟೆರಿನ್‌ಬರ್ಗ್ (ರಷ್ಯಾ): ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಅಮಿತ್ ಪಂಘಲ್ ಈಗ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗುವತ್ತ ದಿಟ್ಟ ಹೆಜ್ಜೆ ಇರಿಸಿದ್ದಾರೆ. ಈ ಮೂಲಕ ಭಾರತೀಯ ಬಾಕ್ಸಿಂಗ್‌ನಲ್ಲಿ ನೂತನ ಇತಿಹಾಸ ನಿರ್ಮಿಸಲು ಮುಂದಾಗಿದ್ದಾರೆ.
ಇಲ್ಲಿ ನಡೆಯುತ್ತಿರುವ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 52 ಕೆ.ಜಿ ವಿಭಾಗದಲ್ಲಿ ಅಮಿತ್ ಪಂಘಲ್ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ವಿಶ್ವ ಬಾಕ್ಸಿಂಗ್ ಇತಿಹಾಸದಲ್ಲಿ ಭಾರತದ ಸ್ಪರ್ಧಿಯೊಬ್ಬರು ಪ್ರಶಸ್ತಿ ಸುತ್ತಿಗೆ ಏರಿದ ಮೊದಲ ನಿದರ್ಶನ ಇದಾಗಿದ್ದು, ದೇಶದ ಕ್ರೀಡಾಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಆದರೆ 63 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಮನೀಷ್ ಕೌಶಿಕ್ ಇಲ್ಲಿ ಪರಾಭವಗೊಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಸೆಮಿಯಲ್ಲಿ 3-2 ಗೆಲುವು
ಶುಕ್ರವಾರದ ಸೆಮಿಫೈನಲ್ ಹಣಾಹಣಿಯಲ್ಲಿ 2ನೇ ಶ್ರೇಯಾಂಕದ ಅಮಿತ್ ಪಂಘಲ್ 3-2 ಅಂತರದಿಂದ ಕಜಾಕಸ್ಥಾನದ ಸಾಕೆನ್ ಬಿಬೊಸ್ಸಿನೋವ್ ಅವರನ್ನು ಹಿಮ್ಮೆಟ್ಟಿಸಿದರು.
ಶನಿವಾರ ನಡೆಯುವ ಚಿನ್ನದ ಕಾಳಗದಲ್ಲಿ ಅಮಿತ್ ಪಂಘಲ್ ಉಜ್ಬೆಕಿಸ್ಥಾನದ ಶಖೋಬಿದಿನ್ ಜೊçರೋವ್ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಅವರು ಫ್ರಾನ್ಸ್‌ನ ಬಿಲಾಲ್ ಬೆನ್ನಮ ಅವರನ್ನು ಮಣಿಸಿದರು. ಜೊçರೋವ್ ರಿಯೋ ಒಲಿಂಪಿಕ್ ಚಾಂಪಿಯನ್ ಆಗಿದ್ದಾರೆ.
ಆದರೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಮನೀಷ್ ಕೌಶಿಕ್ ಅವರನ್ನು ಕ್ಯೂಬಾದ ಬಲಾಡ್ಯ ಎದುರಾಳಿ, ಕಳೆದ ಸಲದ ಬಂಗಾರ ವಿಜೇತ ಆ್ಯಂಡಿ ಗೋಮೆಜ್ ಕ್ರುಝ್ 5-0 ಅಂತರದಿಂದ ಮಣಿಸಿದರು.
ಚಿನ್ನವೋ? ಬೆಳ್ಳಿಯೋ?
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಭಾರತ ಈವರೆಗೆ ಕಂಚಿಗಿಂತ ಮಿಗಿಲಾದ ಪದಕ ಗೆದ್ದದ್ದಿಲ್ಲ. ಈ ಪದಕಗಳ ಸಂಖ್ಯೆ ಶುಕ್ರವಾರ ಐದಕ್ಕೇರಿತು. 2009ರಲ್ಲಿ ವಿಜೇಂದರ್ ಸಿಂಗ್, 2011ರಲ್ಲಿ ವಿಕಾಸ್ ಕೃಷ್ಣನ್, 2015ರಲ್ಲಿ ಶಿವ ಥಾಪ ಮತ್ತು 2017ರಲ್ಲಿ ಗೌರವ್ ಬಿಧುರಿ ಕಂಚಿನ ಸಾಧನೆ ಮಾಡಿದ್ದರು. ಈ ಯಾದಿಗೆ ಹೊಸತಾಗಿ ಸೇರಿದವರು ಶುಕ್ರವಾರದ ಸೆಮಿಯಲ್ಲಿ ಸೋತ ಮನೀಷ್ ಕೌಶಿಕ್.
ಈಗ ಅಮಿತ್ ಪಂಘಲ್ ಮುಂದೆ ಕಂಚಿಗೂ ಮಿಗಿಲಾದ ಪದಕ ಗೆಲ್ಲುವ ಅವಕಾಶ ಎದುರಾಗಿದೆ. ಬೆಳ್ಳಿಯಂತೂ ಖಾತ್ರಿಯಾಗಿದ್ದು, ಇದು ಚಿನ್ನವಾಗಿ ಹೊಳೆಯಲಿ ಎಂಬುದು ಕ್ರೀಡಾಭಿಮಾನಿಗಳ ಹಾರೈಕೆ.
ಪಂಘಲ್ ಪ್ರಚಂಡ ಫಾರ್ಮ್
ಪ್ರಚಂಡ ಫಾರ್ಮ್ನಲ್ಲಿರುವ ಅಮಿತ್ ಪಂಘಲ್ 2017ರ ಆವೃತ್ತಿಯಲ್ಲಿ ಮೊದಲ ಸಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಣಕ್ಕಿಳಿದು ಕ್ವಾರ್ಟರ್ ಫೈನಲ್ ತನಕ ಸಾಗಿದ್ದರು. ಬಳಿಕ ಬಲ್ಗೇರಿಯಾದ “ಸ್ಟ್ರಾಂಜಾ ಮೆಮೋರಿಯಲ್’ ಟೂರ್ನಿ ಹಾಗೂ 2018ರ ಏಷ್ಯಾಡ್‌ನಲ್ಲಿ ಚಿನ್ನದ ಪದಕ ಗೆದ್ದು ಮೆರೆದರು. ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಬಂಗಾರಕ್ಕೆ ಕೊರಳೊಡ್ಡಿದ್ದರು. ಈ ಬಂಗಾರ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಒಲಿದೀತೇ ಎಂಬುದು ಶನಿವಾರದ ಕುತೂಹಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.