World Cup 2023: ಭಾರತಕ್ಕೆ 11,367 ಕೋಟಿ ರೂ. ಲಾಭ
Team Udayavani, Sep 12, 2024, 8:30 AM IST
ಹೊಸದಿಲ್ಲಿ: ಕಳೆದ ವರ್ಷ ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ನಿಂದ ಒಟ್ಟು 11,367 ಕೋಟಿ ರೂ. ಆರ್ಥಿಕ ಲಾಭವಾಗಿದೆ ಎಂದು ಐಸಿಸಿ ವರದಿಯಲ್ಲಿ ತಿಳಿಸಲಾಗಿದೆ.
ಪ್ರವಾಸೋದ್ಯಮ, ಹೊಟೇಲ್, ಸಾರಿಗೆ, ಆಸ್ಪತ್ರೆ ಸೇರಿ ಭಾರತದ ವಿವಿಧ ವಲಯಗಳಲ್ಲಿ ಹಣ ಹರಿದಿದ್ದರಿಂದ ದೇಶದಲ್ಲಿ ಈ ಮಟ್ಟದ ಆರ್ಥಿಕ ಲಾಭವಾಗಿದೆ ಎನ್ನುವುದು ವರದಿಯ ಸಾರಾಂಶ.
ಐಸಿಸಿ ವಿಶ್ವಕಪ್ ಕಾರಣಕ್ಕೆ ಭಾರತದಲ್ಲಿ ಪ್ರವಾ ಸೋ ದ್ಯಮಕ್ಕೆ ಉತ್ತೇಜನ ಸಿಕ್ಕಿದೆ. ವಿದೇಶಿ ಮತ್ತು ದೇಶೀಯ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಭಾರತದ ಬೇರೆ ಬೇರೆ ನಗರಗಳಿಗೆ ಭೇಟಿ ನೀಡಿ ದ್ದಾರೆ. ಇದರಿಂದ ಸ್ಥಳೀಯವಾಗಿ ಹಲವಾರು ರೀತಿಯ ವಹಿವಾಟು ನಡೆದಿದೆ ಎಂದು ಐಸಿಸಿ ಹೇಳಿದೆ.
ಮುಂಬಯಿ, ಹೊಸದಿಲ್ಲಿ, ಬೆಂಗಳೂರು, ಅಹ್ಮದಾ ಬಾದ್, ಕೋಲ್ಕತಾ, ಚೆನ್ನೈ, ಲಕ್ನೋ, ಪುಣೆ, ಧರ್ಮಶಾಲಾ, ಹೈದರಾಬಾದ್ಗಳಲ್ಲಿ ಹೊಟೇಲ್, ರೆಸ್ಟೋರೆಂಟ್, ಸಾರಿಗೆಗೆ ಉತ್ತೇಜನ ಸಿಕ್ಕಿದೆ. ಈ ಕ್ಷೇತ್ರದಲ್ಲೇ ಒಟ್ಟು 7,233 ಕೋಟಿ ರೂ. ವಹಿವಾಟು ನಡೆದಿದೆ.
48,000 ಉದ್ಯೋಗ ಸೃಷ್ಟಿ
ಐಸಿಸಿ ಕೂಟದಿಂದ ಭಾರತದ ವಿವಿಧ ಕ್ಷೇತ್ರ ಗಳಲ್ಲಿ 48,000 ಪೂರ್ಣಕಾಲಿಕ, ಅರೆಕಾಲಿಕ ಉದ್ಯೋಗ ಗಳು ಸೃಷ್ಟಿಯಾಗಿವೆ. ಈ ಕೂಟದ ಆಯೋಜನೆಗೆ ಹಲವು ಕಂಪೆನಿಗಳು ಕೈಜೋಡಿಸಿದ್ದರಿಂದ, ಆತಿಥ್ಯ ಮತ್ತು ಸೇವಾ ಕ್ಷೇತ್ರಗಳು ಸಕ್ರಿಯವಾಗಿದ್ದರಿಂದ ಇಂತಹ ಬೆಳ ವಣಿಗೆ ಯಾಗಿದೆ ಎಂದು ಐಸಿಸಿ ಹೇಳಿದೆ.
ವಿದೇಶೀಯರಿಗೆ ಹೆಚ್ಚಿದ ಆಸಕ್ತಿ
ಈ ಕೂಟದಿಂದ ಭಾರತದ ಪ್ರವಾಸೋದ್ಯಮಕ್ಕೆ ಶಾಶ್ವತ ಲಾಭವಾಗಿದೆ ಎಂದು ಐಸಿಸಿ ಹೇಳಿದೆ. ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗಳಲ್ಲಿ ಶೇ.59 ಮಂದಿ ಇನ್ನೊಮ್ಮೆ ದೇಶಕ್ಕೆ ಬರುವ ಇಂಗಿತ ತೋರಿ ದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.