World Cup 2023: ಡಿಜಿಟಲ್ ವೀಕ್ಷಣೆಯಿಂದ ಜಾಗತಿಕ ದಾಖಲೆ ಬರೆದ ಭಾರತ- ಪಾಕ್ ಪಂದ್ಯ
Team Udayavani, Oct 15, 2023, 10:35 AM IST
ಅಹಮದಾಬಾದ್: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನ ಅತ್ಯಂತ ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಶನಿವಾರ ಅಹಮದಾಬಾದ್ ನಲ್ಲಿ ನಡೆಯಿತು. ಆಲ್ ರೌಂಡ್ ಪ್ರದರ್ಶನ ನೀಡಿದ ಭಾರತ ತಂಡವು ಸುಲಭ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 42.5 ಓವರ್ ನಲ್ಲಿ 191 ರನ್ ಗಳಿಸಿದರೆ, ಭಾರತ ಕೇವಲ 30.3 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಭಾರತ-ಪಾಕ್ ಪಂದ್ಯದಲ್ಲಿ ವಿಶೇಷ ಜಾಗತಿಕ ದಾಖಲೆಯೊಂದು ಸೃಷ್ಟಿಯಾಯಿತು. ಡಿಜಿಟಲ್ ನೇರಪ್ರಸಾರದಲ್ಲಿ 3.5 ಕೋಟಿ ಮಂದಿ ಪಂದ್ಯ ವೀಕ್ಷಿಸಿದರು. ಈ ಮೂಲಕ ವಿಶ್ವದಲ್ಲೇ ಗರಿಷ್ಠ ವೀಕ್ಷಣೆ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ದಾಖಲಾಯಿತು. ಇದಕ್ಕೂ ಮೊದಲು ದಾಖಲೆ ನಿರ್ಮಿಸಿದ್ದು ಐಪಿಎಲ್ ಪಂದ್ಯ! ಈ ವರ್ಷ ಚೆನ್ನೈ ಕಿಂಗ್ಸ್- ಗುಜರಾತ್ ಟೈಟಾನ್ಸ್ ನಡುವೆ ನಡೆದ 16ನೇ ಐಪಿಎಲ್ ಫೈನಲ್‌ನಲ್ಲಿ 3.2 ಕೋಟಿ ಮಂದಿ ಪಂದ್ಯ ನೋಡಿದ್ದರು.
ಕೊಹ್ಲಿ ಜೆರ್ಸಿ ಬದಲಾದ ಪ್ರಸಂಗ!
ಪಾಕಿಸ್ತಾನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಬೇರೊಂದು ಜೆರ್ಸಿ ಧರಿಸಿಕೊಂಡು ಬಂದ ಘಟನೆಯೊಂದು ಸಂಭವಿಸಿತು. ಭುಜದ ಮೇಲೆ ತ್ರಿವರ್ಣ ಪಟ್ಟಿ ಇರುವ ಜೆರ್ಸಿಯನ್ನು ಧರಿಸುವ ಬದಲು ಕೊಹ್ಲಿ ಮೂರು ಬಿಳಿ ಪಟ್ಟಿ ಇರುವ ಜೆರ್ಸಿಯನ್ನು ಧರಿಸಿ ಬಂದಿದ್ದರು. ಇದು ಕೂಡಲೇ ಮಾಧ್ಯಮದವರ ಹಾಗೂ ಕ್ರಿಕೆಟ್ ವೀಕ್ಷಕರ ಗಮನಕ್ಕೆ ಬಂತು. ಚಿತ್ರಗಳೂ ವೈರಲ್ 2. ಇದನ್ನು ಗಮನಿಸಿದ ಕೊಹ್ಲಿ ಕೂಡಲೇ ಮೈದಾನ ತೊರೆದು ತ್ರಿವರ್ಣ ಪಟ್ಟಿಯ ಜೆರ್ಸಿ ಹಾಕಿಕೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.