World Cup 2023; ಗಾಯಗೊಂಡ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ; ಇಂಗ್ಲೆಂಡ್ ಪಂದ್ಯಕ್ಕೆ ಡೌಟ್
Team Udayavani, Oct 29, 2023, 9:25 AM IST
ಲಕ್ನೋ: ಈ ಬಾರಿಯ ಏಕದಿನ ವಿಶ್ವಕಪ್ ಕೂಟದಲ್ಲಿ ಟೀಂ ಇಂಡಿಯಾದ ಪ್ರಮುಖ ಪಂದ್ಯಗಳಲ್ಲಿ ಒಂದಾದ ಇಂಗ್ಲೆಂಡ್ ವಿರುದ್ಧದ ಮುಖಾಮುಖಿ ಇಂದು (ಅ.29) ನಡೆಯಲಿದೆ. ಲಕ್ನೋದ ಎಕನಾ ಸ್ಟೇಡಿಯಂನಲ್ಲಿ ನಡೆಯುವ ಭಾರತ – ಇಂಗ್ಲೆಂಡ್ ನಡುವಿನ ಪಂದ್ಯವು ಈ ಕೂಟದ ಮತ್ತೊಂದು ಥ್ರಿಲ್ಲರ್ ಆಗುವ ಸಾಧ್ಯತೆ ಹೆಚ್ಚಿದೆ.
ಈಗಾಗಲೇ ಹಾರ್ದಿಕ್ ಪಾಂಡ್ಯ ಅವರ ಗಾಯದ ಕಾರಣದಿಂದ ಭಾರತ ತಂಡವು ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಮತ್ತೊಂದು ಗಾಯದ ಸಮಸ್ಯೆ ಎದುರಾಗಿದೆ. ಅದು ನಾಯಕ ರೋಹಿತ್ ಶರ್ಮಾ ಅವರಿಗೆ.
ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ರೋಹಿತ್ ಶರ್ಮಾ ಅವರ ಕೈಗೆ ಚೆಂಡು ಬಡಿದಿದೆ ಎಂದು ವರದಿಯಾಗಿದೆ. ಕೂಡಲೇ ಫಿಸಿಯೋ ಅವರು ಬಂದು ರೋಹಿತ್ ಗೆ ಚಿಕಿತ್ಸೆ ನೀಡಿದ್ದಾರೆ. ರೋಹಿತ್ ಅವರಿಗೆ ಯಾವ ರೀತಿಯ ಗಾಯವಾಗಿದೆ, ಲಕ್ನೋ ಪಂದ್ಯಕ್ಕೆ ಅವರು ಲಭ್ಯರಿದ್ದಾರೆಯೇ ಎಂದು ಇನ್ನಷ್ಟೇ ಖಚಿತವಾಗಬೇಕಿದೆ.
ಇದನ್ನೂ ಓದಿ:Puneeth Rajkumar; ಇಂದು ಅಪ್ಪು ಎರಡನೇ ವರ್ಷದ ಪುಣ್ಯಸ್ಮರಣೆ
ಭಾರತ ಆಡಿದ ಐದೂ ಪಂದ್ಯಗಳನ್ನು ಗೆದ್ದು ತನ್ನ ಛಾತಿಗೆ ತಕ್ಕ ಪ್ರದರ್ಶನ ನೀಡುತ್ತ ಬಂದಿದೆ. ಭಾರತದಲ್ಲಿ ಭಾರತ ತಂಡವನ್ನು ಸೋಲಿಸುವುದು ಕಷ್ಟ ಎಂಬ ಅರಿವು ಎಲ್ಲ ತಂಡಗಳಿಗೂ ಆಗತೊಡಗಿದೆ. ಈ ಒತ್ತಡ ಹಾಗೂ ಸತತ ಸೋಲಿನ ಭಾರವನ್ನು ಹೊತ್ತ ಜಾಸ್ ಬಟ್ಲರ್ ಬಳಗ ಈ ನಿರ್ಣಾಯಕ ಪಂದ್ಯವನ್ನು ಹೇಗೆ ಆಡಲಿದೆ ಎಂಬುದನ್ನು ಕಾಣುವ ಕಾತರ ಎಲ್ಲರದೂ.
ಇಂಗ್ಲೆಂಡ್ 5 ಪಂದ್ಯಗಳಲ್ಲಿ ಗೆದ್ದದ್ದು ಒಂದನ್ನು ಮಾತ್ರ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ. ಅಂದರೆ ನೆದರ್ಲೆಂಡ್ಸ್ ಗಿಂತಲೂ ಕೆಳಗೆ. ಇಂಗ್ಲೆಂಡ್ ದುರಂತವನ್ನು ಇದಕ್ಕಿಂತ ಭಿನ್ನವಾಗಿ ಬಣ್ಣಿಸಲು ಸಾಧ್ಯವಿಲ್ಲ. ಅಕಸ್ಮಾತ್ ಭಾರತವನ್ನು ಮಣಿಸಿದರೂ ಅದು ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳಲಿದೆ ಎಂಬ ಯಾವ ನಿರೀಕ್ಷೆಯೂ ಇಲ್ಲ. ಈಗಿನ ಲೆಕ್ಕಾಚಾರದಂತೆ ಆ ನಾಲ್ಕು ಸ್ಥಾನಗಳು ಫಿಕ್ಸ್ ಆಗಿವೆ. ಸದ್ಯದ ಸ್ಥಿತಿಯಲ್ಲಿ ಐದನೇ ಸ್ಥಾನದಲ್ಲಿರುವ ತಂಡಕ್ಕೂ ನಾಲ್ಕಕ್ಕೇರುವುದು ಕೂಡ ದೊಡ್ಡ ಸವಾಲು. ಇಂಥ ಸ್ಥಿತಿಯಲ್ಲಿ 10ನೇ ಸ್ಥಾನಕ್ಕೆ ಜಾರಿರುವ ಇಂಗ್ಲೆಂಡ್ ಮೇಲೇರಿ ಬರುತ್ತದೆ ಎಂಬ ಯಾವ ನಂಬಿಕೆಯನ್ನೂ ಇರಿಸಿಕೊಳ್ಳುವ ಹಾಗಿಲ್ಲ. ಆದರೂ ಪ್ರತಿಷ್ಠೆಗಾಗಿ ಆಡಬೇಕು, ಸಾಧ್ಯವಾದರೆ ಗೆಲ್ಲಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.