World Cup 2023; ‘ಮುನಿಸೇತಕೆ ಗೆಳೆಯ…’: ವಿರಾಟ್ ಬಗ್ಗೆ ನವೀನ್ ಉಲ್ ಹಕ್ ಹೇಳಿದ್ದೇನು?
Team Udayavani, Oct 12, 2023, 1:33 PM IST
ಹೊಸದಿಲ್ಲಿ: ಭಾರತ ಮತ್ತು ಅಫ್ಘಾನಿಸ್ಥಾನ ನಡುವಿನ ಏಕದಿನ ವಿಶ್ವಕಪ್ ಪಂದ್ಯವು ಬುಧವಾರ ಹೊಸದಿಲ್ಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದಿದೆ. ಪಂದ್ಯದಲ್ಲಿ ಭಾರತ ತಂಡವು ಎಂಟು ವಿಕೆಟ್ ಗಳ ಅಂತರದ ಸುಲಭ ಗೆಲುವು ಸಾಧಿಸಿದೆ.
ಈ ಪಂದ್ಯವು ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಮುಖಾಮುಖಿಯ ಕಾರಣದಿಂದ ಬಹಳಷ್ಟು ಹೈಪ್ ಪಡೆದಿತ್ತು. ಕಳೆದ ಐಪಿಎಲ್ ನಲ್ಲಿ ಆರ್ ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯದ ವೇಳೆ ವಿರಾಟ್ ಮತ್ತು ನವೀನ್ ಮೈದಾನದಲ್ಲಿ ಜಗಳವಾಡಿದ್ದರು. ಅದಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಮೊದಲ ಮುಖಾಮುಖಿಯಾಗಿತ್ತು.
ಅಲ್ಲದೆ ನವೀನ್ ಹೊದಲ್ಲೆಲ್ಲಾ ವಿರಾಟ್ ಅಭಿಮಾನಿಗಳು ಕೊಹ್ಲಿ ಹೆಸರು ಕೂಗಿ ಕಿಚಾಯಿಸುತ್ತಿದ್ದರು. ಹೊಸದಿಲ್ಲಿಯ ಪಂದ್ಯದಲ್ಲಿಯೂ ಇದು ಪುನರಾವರ್ತನೆಯಾಗಿತ್ತು. ಅಲ್ಲದೆ ವಿರಾಟ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಬೌಲಿಂಗ್ ಮಾಡಲು ಬಂದು ನವೀನ್ ಗೆ ಮತ್ತೆ ಅಭಿಮಾನಿಗಳು ಜೋರಾಗಿ ಕಿಚಾಯಿಸಿದರು.
ಆದರೆ ಈ ವೇಳೆ ಮಧ್ಯ ಪ್ರವೇಶಿಸಿದ ವಿರಾಟ್ ಸ್ಟ್ಯಾಂಡ್ ನತ್ತ ನೋಡಿ ಸುಮ್ಮನಿರುವಂತೆ ಅಭಿಮಾನಿಗಳಿಗೆ ಸೂಚಿಸಿದರು. ಬಳಿಕ ಕೊಹ್ಲಿ ಬಳಿ ಬಂದ ನವೀನ್ ಕೈಕುಲಿಕಿದರು. ಬಳಿಕ ಪರಸ್ಪರ ತಬ್ಬಿಕೊಂಡು ಈ ಜಗಳ ಇಲ್ಲಿಗೆ ಸಾಕು ಎನ್ನುವಂತೆ ಮಾತನಾಡಿದರು. ಈ ವಿಡಿಯೋ ಸಖತ್ ವೈರಲ್ ಆಗಿದೆ.
Naveen Ul Haq said, “Virat Kohli is a very good player. We both shook hands, whatever happened on the field, stays inside the field only. We both shook hands and said let’s finish this” #ViratKohli𓃵 #NaveenUlHaq #INDvAFG #INDvsPAK #TrainAccident #CWC23 #Isarael #WorldCup2023 pic.twitter.com/UJYVdgkSKa
— Ujjwal🇮🇳 (@U23337) October 12, 2023
ಪಂದ್ಯದ ಬಳಿಕ ಮಾತನಾಡಿದ ನವೀನ್ ಉಲ್ ಹಕ್, “ಅವರು ಒಳ್ಳೆಯ ವ್ಯಕ್ತಿ, ಉತ್ತಮ ಆಟಗಾರ ಮತ್ತು ನಾವು ಕೈಕುಲುಕಿದೆವು. ನಮ್ಮ ನಡುವೆ ಮೈದಾನದ ಹೊರಗೆ ಏನೂ ಇರಲಿಲ್ಲ. ಜನರು ಅದನ್ನು ದೊಡ್ಡದು ಮಾಡುತ್ತಾರೆ. ನಾವು ಇದನ್ನು ಮುಗಿಸುವ ಎಂದು ಅವರು ಹೇಳಿದರು ಮತ್ತು ನಾನು ಹೌದು ನಾವು ಅದನ್ನು ಮುಗಿಸಿದ್ದೇವೆ ಎಂದು ಹೇಳಿದೆ. ನಾವು ಕೈಕುಲುಕಿದೆವು ಮತ್ತು ತಬ್ಬಿಕೊಂಡೆವು” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.