World Cup 23; ಅಕ್ಷರ್ ಪಟೇಲ್ ಬದಲು ಬೇರೆ ಸ್ಪಿನ್ನರ್ ಆಯ್ಕೆ? ಸುಳಿವು ನೀಡಿದ ನಾಯಕ ರೋಹಿತ್
Team Udayavani, Sep 18, 2023, 2:53 PM IST
ಕೊಲಂಬೊ: ಏಷ್ಯಾ ಕಪ್ ಕೂಟವನ್ನು ಗೆದ್ದು ಬೀಗಿರುವ ಭಾರತ ತಂಡವು ಮುಂದಿನ ವಿಶ್ವಕಪ್ ಮೇಲೆ ಕಣ್ಣಿರಿಸಿದೆ. ಅಕ್ಟೋಬರ್ 5ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ ಗೆ ಟೀಂ ಇಂಡಿಯಾ ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಭಾರತದಲ್ಲೇ ನಡೆಯಲಿರುವ ಕೂಟಕ್ಕೆ ಈಗಾಗಲೇ ಸ್ಕ್ವಾಡ್ ಕೂಡಾ ಅನೌನ್ಸ್ ಅಗಿದೆ.
ಇದೀಗ ನಾಯಕ ರೋಹಿತ್ ಶರ್ಮಾ ಅವರು ಈಗಾಗಲೇ ಘೋಷಣೆಯಾಗಿರುವ ತಂಡದಲ್ಲಿ ಬದಲಾವಣೆ ಮಾಡುವ ಕುರಿತು ಮಾತನಾಡಿದ್ದಾರೆ. ಏಷ್ಯಾ ಕಪ್ ಕೂಟದ ಸೂಪರ್ ಫೋರ್ ಹಂತದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರು ಗಾಯಗೊಂಡಿರುವುದು ಇದಕ್ಕೆ ಕಾರಣ.
ಅಕ್ಷರ್ ಪಟೇಲ್ ಅವರ ಗಾಯದ ಪ್ರಮಾಣದ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ವಿಶ್ವಕಪ್ ಗೆ ಅವರ ಲಭ್ಯತೆಯ ಬಗ್ಗೆಯೂ ಸ್ಪಷ್ಟತೆ ಸಿಕ್ಕಿಲ್ಲ. ಇದರ ನಡುವೆ ನಾಯಕ ರೋಹಿತ್ ಅವರು ತಂಡಕ್ಕೆ ರವಿಚಂದ್ರನ್ ಅಶ್ವಿನ್ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ:Chaitra Kundapura ರೀತಿ ಮೋಸ ಮಾಡುವವರು ಎಲ್ಲಾ ಪಕ್ಷಗಳಲ್ಲೂ ಇರುತ್ತಾರೆ: ಅರವಿಂದ ಬೆಲ್ಲದ್
“ಸ್ಪಿನ್ನರ್-ಆಲ್ ರೌಂಡರ್ ಆಗಿ ಅಶ್ವಿನ್ ಆಯ್ಕೆಯ ಸಾಲಿನಲ್ಲಿದ್ದಾರೆ. ನಾನು ಅವರೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿದ್ದೇನೆ. ಕೊನೆಯ ಕ್ಷಣದಲ್ಲಿ ಅಕ್ಷರ್‌ಗೆ ಗಾಯವಾಗಿದೆ. ವಾಷಿಂಗ್ಟನ್ ಸುಂದರ್ ಲಭ್ಯವಿದ್ದುದರಿಂದ ಅವರು ಬಂದು ನಮಗಾಗಿ ಆಡಿದರು” ಎಂದು ಫೈನಲ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಹೇಳಿದರು.
ವಾಷಿಂಗ್ಟನ್ ಸುಂದರ್ ಅವರನ್ನು ಫೈನಲ್ ಪಂದ್ಯದ ತಂಡಕ್ಕೆ ಸೇರಿಸಿಕೊಳ್ಳುವ ನಿರ್ಧಾರದ ಕುರಿತು ಮಾತನಾಡಿದ ರೋಹಿತ್, “ಅವರು (ವಾಷಿಂಗ್ಟನ್) ಏಷ್ಯನ್ ಗೇಮ್ಸ್ ಕ್ಯಾಂಪ್ ನ (ಬೆಂಗಳೂರಿನಲ್ಲಿ) ಭಾಗವಾಗಿರುವುದರಿಂದ ಅವರು ಆಡಲು ಫಿಟ್ ಆಗಿದ್ದರು. ಹಾಗಾಗಿ ಅವರನ್ನು ಸೇರಿಸಿಕೊಳ್ಳಲಾಯಿತು. ಆಟಗಾರರ ಪಾತ್ರಗಳ ಬಗ್ಗೆ ನಾನು ತುಂಬಾ ಸ್ಪಷ್ಟವಾಗಿ ಹೇಳಿದ್ದೇನೆ ” ಎಂದು ಅವರು ಹೇಳಿದರು.
ವಿಶ್ವಕಪ್ ಕೂಟವು ಅಕ್ಟೋಬರ್ 5ರಿಂದ ಆರಂಭವಾಗಲಿದೆ. ಎಲ್ಲಾ ಭಾಗವಹಿಸುವ ದೇಶಗಳು ಸೆಪ್ಟೆಂಬರ್ 28ರೊಳಗೆ ತಮ್ಮ ಅಂತಿಮ ತಂಡವನ್ನು ಐಸಿಸಿಗೆ ನೀಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.