World cup cricket ವಿಶೇಷ; ಬನ್ನಿ ವಿಶ್ವ ಕ್ರಿಕೆಟಿಗರೇ…ಭಾರತದ ಆತಿಥ್ಯ ಸ್ವೀಕರಿಸಿ
10 ದೇಶ, 10 ಮೈದಾನ.... 48 ಪಂದ್ಯಗಳ ವಿವರಗಳು ಇಲ್ಲಿವೆ
Team Udayavani, Oct 3, 2023, 6:15 AM IST
ಅತಿಥಿ ದೇವೋಭವ ಎಂಬ ಸತ್ಪರಂಪರೆಯ ಭಾರತ ಮತ್ತೂಂದು ವಿಶ್ವಕಪ್ ಆತಿಥ್ಯಕ್ಕೆ ಸಜ್ಜಾಗಿ ನಿಂತಿದೆ. 13ನೇ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಅ. 5ರಿಂದ ದೇಶದ ಉದ್ದಗಲಕ್ಕೂ ತನ್ನ ಪ್ರಭೆಯನ್ನು ಬೀರಲಿದೆ. ವಿಶ್ವ ಕ್ರಿಕೆಟ್‌ನ ಸಾಮ್ರಾಟನಾಗಲು 10 ತಂಡಗಳು ಬ್ಯಾಟ್-ಬಾಲ್ ಹಿಡಿದು ಕದನಕ್ಕೆ ಅಣಿಯಾಗಿವೆ. ಚಾಂಪಿಯನ್ ಯಾರು ಎಂಬ ಕುರಿತು ಈಗಾಗಗಲೇ ಚರ್ಚೆ ಬಿರುಸುಗೊಂಡಿದೆ. ನ. 19ರಂದು ಅಹ್ಮದಾಬಾದ್‌ನಲ್ಲಿ ವಿಜೇತ ತಂಡವೊಂದು ಕ್ರಿಕೆಟ್ ಜಗತ್ತನ್ನು ಆಳಲು ಪ್ರಮಾಣವಚನ ಸ್ವೀಕರಿಸಲಿದೆ. ಅಲ್ಲಿಯ ತನಕ ಕ್ರಿಕೆಟ್ ಕೌತುಕ, ನಿರೀಕ್ಷೆಗಳಿಗೆ ಕೊನೆ ಎಂಬುದಿಲ್ಲ!
ಇದು ಭಾರತದಲ್ಲಿ ನಡೆಯಲಿರುವ 4ನೇ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ. ಕ್ರಿಕೆಟ್ ಜನಕರೆಂಬ ಖ್ಯಾತಿಯ ಇಂಗ್ಲೆಂಡನ್ನು ಹೊರತುಪಡಿಸಿದರೆ ಭಾರತವೇ ಅತ್ಯಧಿಕ ಸಲ ಈ ಜಾಗತಿಕ ಕ್ರಿಕೆಟ್ ಕೂಟದ ಆತಿಥ್ಯ ವಹಿಸಿರುವುದು ಹೆಮ್ಮೆಯ ಸಂಗತಿ. ಇಂಗ್ಲೆಂಡ್ 5 ಸಲ ವಿಶ್ವಕಪ್ ನಡೆಸಿಕೊಟ್ಟಿದೆ. ಎರಡು ಸಲ ಆಸ್ಟ್ರೇಲಿಯ, ಒಮ್ಮೆ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಸಂಘಟಿಸಿವೆ.
ಭಾರತ ಮೊದಲ ಸಲ ವಿಶ್ವಕಪ್ ಆಯೋಜಿಸಿದ್ದು 1987ರಲ್ಲಿ. ಕ್ರಿಕೆಟ್ ವಿಶ್ವವ್ಯಾಪಿಯಾಗಬೇಕು ಮತ್ತು ಎಲ್ಲರಿಗೂ ಆತಿಥ್ಯ ಸಿಗಬೇಕೆಂಬ ಐಸಿಸಿ ಯೋಜನೆಯ ಮೊದಲ ಫಲಾನುಭವಿಯೇ ಭಾರತ. ಜತೆಗೆ ಪಾಕಿಸ್ಥಾನ ಕೂಡ ಕೈ ಜೋಡಿಸಿತು. “ರಾಜಕೀಯ ವೈರಿ’ಗಳೆರಡು ವಿಶ್ವಕಪ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟದ್ದು ವಿಸ್ಮಯವೇ ಸರಿ!
ಭಾರತ ಮತ್ತೂಮ್ಮೆ ಈ ಕ್ರಿಕೆಟ್ ಮಹಾಕುಂಭವನ್ನು ನಡೆಸಿಕೊಟ್ಟದ್ದು 1996ರಲ್ಲಿ. ಜತೆಯಲ್ಲಿ ಪಾಕಿಸ್ಥಾನ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯವಿತ್ತು. ಕೊನೆಯ ಸಲ ಭಾರತದಲ್ಲಿ ವಿಶ್ವಕಪ್ ನಡೆದದ್ದು 2011ರಲ್ಲಿ. ಆಗ ಜಂಟಿ ಆತಿಥ್ಯ ವಹಿಸಿದ ದೇಶಗಳೆಂದರೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ.
ಭಾರತದ ಒಂಟಿ ಸಾರಥ್ಯ
ಈ ಬಾರಿ ಭಾರತ ಏಕಾಂಗಿಯಾಗಿ ವಿಶ್ವಕಪ್ ನಡೆಸಲು ಮುಂದಾಗಿದೆ. ಅಕ್ಕಪಕ್ಕದ ಯಾವ ದೇಶವನ್ನೂ ಕರೆದುಕೊಂಡಿಲ್ಲ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ಕೂಡ ಭಾರತದಲ್ಲೇ ಬಂದು ಪಂದ್ಯಗಳನ್ನು ಆಡಲಿದೆ. ವಿಶ್ವಕಪ್ ಇತಿಹಾಸದಲ್ಲಿ ಇಡೀ ಕೂಟವನ್ನು ಒಂದೇ ರಾಷ್ಟ್ರ ನಡೆಸಿಕೊಡುತ್ತಿರುವ ಕೇವಲ 4ನೇ ನಿದರ್ಶನ ಇದಾಗಿದೆ. 1975 ಮತ್ತು 1979ರ ಮೊದಲೆರಡು ಪಂದ್ಯಾವಳಿಗಳು ಇಂಗ್ಲೆಂಡ್‌ನಲ್ಲಿ ಜರಗಿದ್ದವು. 1983ರ ಕೂಟವನ್ನೂ ಇದೇ ಸಾಲಿಗೆ ಸೇರಿಸಬಹುದಿತ್ತಾದರೂ ಅಂದು ಇಂಗ್ಲೆಂಡ್ ಜತೆಗೆ ವೇಲ…Õನಲ್ಲೂ ಕೆಲವು ಪಂದ್ಯಗಳನ್ನು ಆಡಲಾಗಿತ್ತು.
ಇಂಗ್ಲೆಂಡ್ ಹೊರತುಪಡಿಸಿದರೆ ಏಕಾಂಗಿ ಸಾರಥ್ಯ ಹೊತ್ತದ್ದು ವೆಸ್ಟ್ ಇಂಡೀಸ್. ಅದು 2007ರ ಟೂರ್ನಿ. ಆಗ ನೆರೆಯ ಅಮೆರಿಕ ಕೂಡ ಕೆಲವು ಪಂದ್ಯಗಳ ಬೇಡಿಕೆ ಇರಿಸಿತಾದರೂ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಇದಕ್ಕೆ ಸಮ್ಮತಿಸಲಿಲ್ಲ. ಅಂದಹಾಗೆ ವೆಸ್ಟ್ ಇಂಡೀಸ್ ಎಂಬುದು ಒಂದು ಪ್ರತ್ಯೇಕ ದೇಶವಲ್ಲ, ದ್ವೀಪರಾಷ್ಟ್ರಗಳ ಒಂದು ಸಮೂಹ. ಆದರೆ ಕ್ರಿಕೆಟ್ ವಿಷಯಕ್ಕೆ ಬರುವಾಗ ಈ ಕೆರಿಬಿಯನ್ ಪ್ರದೇಶ ಒಂದು “ದೇಶ’ ಎನಿಸಿಕೊಳ್ಳುವುದು ಜಾಗತಿಕ ಅಚ್ಚರಿ.
ವಿಶ್ವಕಪ್ ಕ್ರಿಕೆಟ್ ಮೈದಾನಗಳು
ಉತ್ತರದ ಧರ್ಮಶಾಲಾದಿಂದ ದಕ್ಷಿಣದ ಚೆನ್ನೈವರೆಗೆ ವಿಶ್ವಕಪ್ ವ್ಯಾಪ್ತಿ ಹಬ್ಬಿದೆ. ನೂತನವಾಗಿ ನಿರ್ಮಿಸಲಾದ 1,32,000 ಆಸನ ವ್ಯವಸ್ಥೆ ಹೊಂದಿರುವ ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ಗೆ ರಾಜಾತಿಥ್ಯ ಲಭಿಸಿದೆ. ಉದ್ಘಾಟನೆ ಮತ್ತು ಫೈನಲ್ ಪಂದ್ಯದ ಆತಿಥ್ಯವೆರಡೂ ಈ ಕ್ರೀಡಾಂಗಣದ ಪಾಲಾಗಿದೆ. ಜತೆಗೆ ಭಾರತ-ಪಾಕಿಸ್ಥಾನ ನಡುವಿನ ಹೈ ವೋಲ್ಟೆàಜ್ ಮುಖಾಮುಖೀ ಕೂಡ!
ಸ್ಟೇಡಿಯಂ- ಹೆಸರು- ಸಾಮರ್ಥ್ಯ- ಪಂದ್ಯ
ಅಹ್ಮದಾಬಾದ್- ನರೇಂದ್ರ ಮೋದಿ ಸ್ಟೇಡಿಯಂ- 1,32,000- 5
ಕೋಲ್ಕತಾ- ಈಡನ್ ಗಾರ್ಡನ್ಸ್- 66,000- 5
ಹೈದರಾಬಾದ್- ರಾಜೀವ್ ಗಾಂಧಿ ಸ್ಟೇಡಿಯಂ- 55,000- 3
ಚೆನ್ನೈ- ಎಂ.ಎ. ಚಿದಂಬರಂ ಸ್ಟೇಡಿಯಂ- 50,000- 5
ಲಕ್ನೋ- ಅಟಲ್ ಬಿಹಾರಿ ವಾಜಪೇಯಿ ಏಕಾನಾ ಸ್ಟೇಡಿಯಂ- 50,000- 5
ಹೊಸದಿಲ್ಲಿ- ಅರುಣ್ ಜೇಟ್ಲಿ ಸ್ಟೇಡಿಯಂ- 42,000- 5
ಬೆಂಗಳೂರು- ಎಂ. ಚಿನ್ನಸ್ವಾಮಿ ಸ್ಟೇಡಿಯಂ- 40,000- 5
ಪುಣೆ- ಎಂ.ಸಿ.ಎ. ಸ್ಟೇಡಿಯಂ- 37,000- 5
ಮುಂಬಯಿ- ವಾಂಖೇಡೆ ಸ್ಟೇಡಿಯಂ- 32,000- 5
ಧರ್ಮಶಾಲಾ- ಎಚ್.ಪಿ.ಸಿ.ಎ ಸ್ಟೇಡಿಯಂ- 23,000- 5
ವಿಶ್ವಕಪ್ ಆತಿಥ್ಯದ ದೇಶಗಳು
1975 ಇಂಗ್ಲೆಂಡ್
1979 ಇಂಗ್ಲೆಂಡ್
1983 ಇಂಗ್ಲೆಂಡ್, ವೇಲ್ಸ್
1987 ಭಾರತ, ಪಾಕಿಸ್ಥಾನ
1992 ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್
1996 ಭಾರತ, ಪಾಕಿಸ್ಥಾನ, ಶ್ರೀಲಂಕಾ
1999 ಇಂಗ್ಲೆಂಡ್, ಸ್ಕಾಟ್ಲೆಂಡ್, ಐರ್ಲೆಂಡ್, ನೆದರ್ಲೆಂಡ್ಸ್, ವೇಲ್ಸ್
2003 ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಕೀನ್ಯಾ
2007 ವೆಸ್ಟ್ ಇಂಡೀಸ್
2011 ಭಾರತ, ಶ್ರೀಲಂಕಾ, ಬಾಂಗ್ಲಾದೇಶ
2015 ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್
2019 ಇಂಗ್ಲೆಂಡ್, ವೇಲ್ಸ್
2023 ಭಾರತ
10 ತಂಡಗಳ ಪಂದ್ಯಾವಳಿ
13ನೇ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಕೇವಲ 10. ದೇಶದ 10 ತಾಣಗಳಲ್ಲಿ ಒಟ್ಟು 48 ಪಂದ್ಯಗಳನ್ನು ಆಡಲಾಗುವುದು.2020-2023ರ ನಡುವಿನ ಸಾಧನೆಯನ್ನು ಮಾನದಂಡವಾಗಿರಿಸಿ ಈ ಬಾರಿಯ ತಂಡಗಳನ್ನು ಐಸಿಸಿ ಅಂತಿಮಗೊಳಿಸಿತು. ನೂತನ ಐಸಿಸಿ ವರ್ಲ್ಡ್ ಕಪ್ ಸೂಪರ್ ಲೀಗ್ ಸೀರಿಸ್ ಇಲ್ಲಿ ನಿರ್ಣಾಯಕ ಪಾತ್ರ ವಹಿಸಿತು. 13 ತಂಡಗಳಲ್ಲಿ 8 ತಂಡಗಳಿಗೆ ನೇರ ಪ್ರವೇಶ ನೀಡಲಾಯಿತು. ಉಳಿದೆರಡು ತಂಡಗಳ ಆಯ್ಕೆಗೆ ವಿಶ್ವಕಪ್ ಅರ್ಹತಾ ಪಂದ್ಯಾವಳಿ ನಡೆಯಿತು. ಇಲ್ಲಿ ಶ್ರೀಲಂಕಾ ಮತ್ತು ನೆದರ್ಲೆಂಡ್ಸ್‌ಗೆ ಅದೃಷ್ಟ ಒಲಿಯಿತು. ಮೊದಲೆರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಹೊರಬಿದ್ದದ್ದು ಮಾತ್ರ ಅತ್ಯಂತ ದುಃಖದ ಸಂಗತಿ.
ರೌಂಡ್ ರಾಬಿನ್ ಮಾದರಿ
ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮತ್ತೆ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯಲಿದೆ. ಅಂದರೆ, ಎಲ್ಲ ತಂಡಗಳು ಉಳಿದೆಲ್ಲ ತಂಡಗಳ ವಿರುದ್ಧ ಆಡುವುದು. ಈ ಮಾದರಿಯನ್ನು ಹಿಂದೆ 1992ರಲ್ಲಿ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ಆತಿಥ್ಯದ ಪಂದ್ಯಾವಳಿಯಲ್ಲಿ ಅಳವಡಿಸಲಾಗಿತ್ತು. ಇಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಗೆದ್ದವರು ಫೈನಲ್‌ಗೆ ಲಗ್ಗೆ ಇಡಲಿದ್ದಾರೆ.
ದಿಲ್ ಜಶ್ನ್ ಬೋಲೆ… ವಿಶ್ವಕಪ್ ಧ್ಯೇಯಗೀತೆ
ವಿಶ್ವಕಪ್ ಧ್ಯೇಯಗೀತೆಯೊಂದನ್ನು ಹೊಂದಿದೆ. “ದಿಲ್ ಜಶ್ನ್ ಬೋಲೆ’ (ಹೃದಯ ಸಂಭ್ರಮದಿಂದ ಹೇಳುತ್ತಿದೆ) ಎಂಬುದು ಇದರ ಶೀರ್ಷಿಕೆ. ಇದನ್ನು ಕಂಪೋಸ್ ಮಾಡಿದವರು ಪ್ರೀತಮ್. ಗೀತೆಯ ರಚನಕಾರರು ಶ್ಲೋಕ್ ಲಾಲ್ ಮತ್ತು ಸಾವೇರಿ ವರ್ಮ. ಹಾಡಿಗೆ ಧ್ವನಿಗೂಡಿಸಿದವರು ಪ್ರೀತಮ್, ನಕಾಶ್ ಅಜೀಜ್, ಶ್ರೀರಾಮಚಂದ್ರ, ಅಮಿತ್ ಮಿಶ್ರಾ, ಜೊನಿಟಾ ಗಾಂಧಿ, ಆಕಾಶ್ ಸಿಂಗ್ ಮತ್ತು ಚರಣ್. ಇದನ್ನು ಸೆ. 20ರಂದು ಬಿಡುಗಡೆ ಮಾಡಲಾಗಿತ್ತು.
ಅಂಪಾಯರ್
ಆಸ್ಟ್ರೇಲಿಯ: ಪಾಲ್ ರೀಫೆಲ್, ರಾಡ್ ಟ್ಯುಕರ್, ಪಾಲ್ ವಿಲ್ಸನ್.
ಇಂಗ್ಲೆಂಡ್: ಮೈಕಲ್ ಗಾಫ್, ರಿಚರ್ಡ್ ಇಲ್ಲಿಂಗ್‌ವರ್ತ್, ರಿಚರ್ಡ್ ಕೆಟಲ್‌ಬರೋ, ಅಲೆಕ್ಸ್ ವಾರ್ಫ್.
ನ್ಯೂಜಿಲ್ಯಾಂಡ್: ಕ್ರಿಸ್ ಗಫಾನಿ, ಕ್ರಿಸ್ ಬ್ರೌನ್.
ದಕ್ಷಿಣ ಆಫ್ರಿಕಾ: ಮರಾçಸ್ ಎರಾಸ್ಮಸ್, ಅಡ್ರಿಯನ್ ಹೋಲ್ಡ್‌ಸ್ಟಾಕ್.
ಭಾರತ: ನಿತಿನ್ ಮೆನನ್.
ಬಾಂಗ್ಲಾದೇಶ: ಶರೀಫುದ್ದೀನ್.
ಪಾಕಿಸ್ಥಾನ: ಅಹಸಾನ್ ರಾಣಾ.
ಶ್ರೀಲಂಕಾ: ಕುಮಾರ ಧರ್ಮಸೇನ.
ವೆಸ್ಟ್ ಇಂಡೀಸ್: ಜೋಯೆಲ್ ವಿಲ್ಸನ್.
ಮ್ಯಾಚ್ ರೆಫ್ರಿ
ಜಾವಗಲ್ ಶ್ರೀನಾಥ್, ಜೆಫ್ ಕ್ರೋವ್, ರಿಚಿ ರಿಚರ್ಡ್‌ಸನ್, ಆ್ಯಂಡಿ ಪೈಕ್ರಾಫ್ಟ್.
ಮಳೆಗಾಲದಲ್ಲೊಂದು ವಿಶ್ವಕಪ್!
ಸಾಮಾನ್ಯವಾಗಿ ಭಾರತದಲ್ಲಿ ಯಾವುದೇ ಕ್ರಿಕೆಟ್ ಪಂದ್ಯಾವಳಿಗೆ ಪ್ರಶಸ್ತ ಕಾಲವೆಂದರೆ ಫೆಬ್ರವರಿಯಿಂದ ಮೇ ತಿಂಗಳು. ಇಲ್ಲವೇ ಡಿಸೆಂಬರ್-ಜನವರಿ ಕೂಡ ಓಕೆ. ಆದರೆ ಈಗ ಐಪಿಎಲ್ ಶೆಡ್ನೂಲ್ ಮುಖ್ಯವಾದ್ದರಿಂದ ಎಪ್ರಿಲ್-ಮೇ ತಿಂಗಳಲ್ಲಿ ಯಾವುದೇ ಪಂದ್ಯಾವಳಿಗೆ ನಮ್ಮ ದೇಶದಲ್ಲಿ ಜಾಗವಿಲ್ಲ. ಐಪಿಎಲ್‌ನಿಂದಾಗಿ ವಿಶ್ವದ ಯಾವುದೇ ಭಾಗದಲ್ಲಿ ಜಾಗತಿಕ ಕ್ರಿಕೆಟ್ ಟೂರ್ನಿ ನಡೆಯದು ಎಂದರೂ ತಪ್ಪಿಲ್ಲ.
ಭಾರತದ ಆತಿಥ್ಯದ 1987ರ ಮೊದಲ ವಿಶ್ವಕಪ್ ಅಕ್ಟೋಬರ್-ನವಂಬರ್‌ನಲ್ಲೇ ನಡೆದಿತ್ತು. ಆಗ ಮಳೆಯಿಂದ ಯಾವುದೇ ಅಡ್ಡಿ ಆಗಿರಲಿಲ್ಲ. 1996 ಮತ್ತು 2011ರ ಕೂಟ ಫೆಬ್ರವರಿ-ಎಪ್ರಿಲ್ ಅವಧಿಯಲ್ಲಿ ನಡೆದಿತ್ತು.
ಈ ಬಾರಿಯೂ ಫೆಬ್ರವರಿ-ಮಾರ್ಚ್ ತಿಂಗಳಲ್ಲೇ ನಡೆಯಬೇಕಿತ್ತು. ಆದರೆ ಕೋವಿಡ್‌ನಿಂದ ಐಸಿಸಿ ಅರ್ಹತಾ ಪಂದ್ಯಾವಳಿಗೆ ಅಡ್ಡಿಯಾಯಿತು ಎಂಬ ಕಾರಣಕ್ಕಾಗಿ ಅಕ್ಟೋಬರ್-ನವಂಬರ್‌ಗೆ ಮುಂದೂಡಲ್ಪಟ್ಟಿದೆ. ಇದು ಅನಿಶ್ಚಿತ ಮಳೆಯ ಕಾಲ. ಭಾರತದ್ದುಕ್ಕೂ ಧೋ ಎಂದು ಮಳೆ ಸುರಿಯುತ್ತಿದೆ. ಮುಂಗಾರು ನಿರ್ಗಮಿಸುತ್ತಿದ್ದರೂ ಹಿಂಗಾರು ಮಳೆಯ ಭೀತಿ ಇದ್ದೇ ಇದೆ. ಈಗಾಗಲೇ 3 ಅಭ್ಯಾಸ ಪಂದ್ಯಗಳಿಗೆ ಮಳೆಯಿಂದ ಅಡಚಣೆಯಾಗಿದೆ. 2 ಪಂದ್ಯಗಳು ಒಂದೂ ಎಸೆತ ಕಾಣದೆ ರದ್ದುಗೊಂಡಿವೆ. ಇನ್ನು ಪ್ರಧಾನ ಸುತ್ತಿನಲ್ಲಿ ಅದೆಷ್ಟು ಪಂದ್ಯಗಳಿಗೆ ವರುಣನ ಉಪದ್ರವ ಇದೆಯೋ ತಿಳಿದಿಲ್ಲ. ಆಗ ಇಡೀ ಪಂದ್ಯಾವಳಿಯ ಆಕರ್ಷಣೆಯೇ ಹೊರಟು ಹೋಗಲಿದೆ. ಹೀಗಾಗದಿರಲಿ.
ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ
ದಿನಾಂಕ- ಪಂದ್ಯ- ಸ್ಥಳ- ಆರಂಭ(ಭಾರತೀಯ ಕಾಲಮಾನ)
ಅ. 5 -ಇಂಗ್ಲೆಂಡ್-ನ್ಯೂಜಿಲ್ಯಾಂಡ್ ಅಹ್ಮದಾಬಾದ್ ಅ. 2.00
ಅ. 6 ಪಾಕಿಸ್ಥಾನ-ನೆದರ್ಲೆಂಡ್ಸ್ ಹೈದರಾಬಾದ್ ಅ. 2.00
ಅ. 7 ಬಾಂಗ್ಲಾದೇಶ-ಅಫ್ಘಾನಿಸ್ಥಾನ ಧರ್ಮಶಾಲಾ ಬೆ. 10.30
ಅ. 7 ದಕ್ಷಿಣ ಆಫ್ರಿಕಾ-ಶ್ರೀಲಂಕಾ ಹೊಸದಿಲ್ಲಿ ಅ. 2.00
ಅ. 8 ಭಾರತ-ಆಸ್ಟ್ರೇಲಿಯ ಚೆನ್ನೈ ಅ. 2.00
ಅ. 9 ನ್ಯೂಜಿಲ್ಯಾಂಡ್-ನೆದರ್ಲೆಂಡ್ಸ್ ಹೈದರಾಬಾದ್ ಅ. 2.00
ಅ. 10 ಇಂಗ್ಲೆಂಡ್-ಬಾಂಗ್ಲಾದೇಶ ಧರ್ಮಶಾಲಾ ಬೆ. 10.30
ಅ. 10 ಪಾಕಿಸ್ಥಾನ-ಶ್ರೀಲಂಕಾ ಹೈದರಾಬಾದ್ ಅ. 2.00
ಅ. 11 ಭಾರತ-ಅಫ್ಘಾನಿಸ್ಥಾನ ಹೊಸದಿಲ್ಲಿ ಅ. 2.00
ಅ. 12 ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ಲಕ್ನೋ ಅ. 2.00
ಅ. 13 ನ್ಯೂಜಿಲ್ಯಾಂಡ್-ಬಾಂಗ್ಲಾದೇಶ ಚೆನ್ನೈ ಅ. 2.00
ಅ. 14 ಭಾರತ-ಪಾಕಿಸ್ಥಾನ ಅಹ್ಮದಾಬಾದ್ ಅ. 2.00
ಅ. 15 ಇಂಗ್ಲೆಂಡ್-ಅಫ್ಘಾನಿಸ್ಥಾನ ಹೊಸದಿಲ್ಲಿ ಅ. 2.00
ಅ. 16 ಆಸ್ಟ್ರೇಲಿಯ-ಶ್ರೀಲಂಕಾ ಲಕ್ನೋ ಅ. 2.00
ಅ. 17 ದಕ್ಷಿಣ ಆಫ್ರಿಕಾ-ನೆದರ್ಲೆಂಡ್ಸ್ ಧರ್ಮಶಾಲಾ ಅ. 2.00
ಅ. 18 ನ್ಯೂಜಿಲ್ಯಾಂಡ್-ಅಫ್ಘಾನಿಸ್ಥಾನ ಚೆನ್ನೈ ಅ. 2.00
ಅ. 19 ಭಾರತ-ಬಾಂಗ್ಲಾದೇಶ ಪುಣೆ ಅ. 2.00
ಅ. 20 ಆಸ್ಟ್ರೇಲಿಯ-ಪಾಕಿಸ್ಥಾನ ಬೆಂಗಳೂರು ಅ. 2.00
ಅ. 21 ಶ್ರೀಲಂಕಾ-ನೆದರ್ಲೆಂಡ್ಸ್ ಲಕ್ನೋ ಬೆ. 10.30
ಅ. 21 ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಮುಂಬಯಿ ಅ. 2.00
ಅ. 22 ಭಾರತ-ನ್ಯೂಜಿಲ್ಯಾಂಡ್ ಧರ್ಮಶಾಲಾ ಅ. 2.00
ಅ. 23 ಪಾಕಿಸ್ಥಾನ-ಅಫ್ಘಾನಿಸ್ಥಾನ ಚೆನ್ನೈ ಅ. 2.00
ಅ. 24 ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ ಮುಂಬಯಿ ಅ. 2.00
ಅ. 25 ಆಸ್ಟ್ರೇಲಿಯ-ನೆದರ್ಲೆಂಡ್ಸ್ ಹೊಸದಿಲ್ಲಿ ಅ. 2.00
ಅ. 26 ಇಂಗ್ಲೆಂಡ್-ಶ್ರೀಲಂಕಾ ಬೆಂಗಳೂರು ಅ. 2.00
ಅ. 27 ಪಾಕಿಸ್ಥಾನ-ದಕ್ಷಿಣ ಆಫ್ರಿಕಾ ಚೆನ್ನೈ ಅ. 2.00
ಅ. 28 ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ಧರ್ಮಶಾಲಾ ಬೆ. 10.30
ಅ. 28 ನೆದರ್ಲೆಂಡ್ಸ್-ಬಾಂಗ್ಲಾದೇಶ ಕೋಲ್ಕತಾ ಅ. 2.00
ಅ. 29 ಭಾರತ-ಇಂಗ್ಲೆಂಡ್ ಲಕ್ನೋ ಅ. 2.00
ಅ. 30 ಆಸ್ಟ್ರೇಲಿಯ-ಶ್ರೀಲಂಕಾ ಪುಣೆ ಅ. 2.00
ಅ. 31 ಪಾಕಿಸ್ಥಾನ-ಬಾಂಗ್ಲಾದೇಶ ಕೋಲ್ಕತಾ ಅ. 2.00
ನ. 1 ನ್ಯೂಜಿಲ್ಯಾಂಡ್-ದಕ್ಷಿಣ ಆಫ್ರಿಕಾ ಪುಣೆ ಅ. 2.00
ನ. 2 ಭಾರತ-ಶ್ರೀಲಂಕಾ ಮುಂಬಯಿ ಅ. 2.00
ನ. 3 ನೆದರ್ಲೆಂಡ್ಸ್-ಅಫ್ಘಾನಿಸ್ಥಾನ ಲಕ್ನೋ ಅ. 2.00
ನ. 4 ನ್ಯೂಜಿಲ್ಯಾಂಡ್-ಪಾಕಿಸ್ಥಾನ ಬೆಂಗಳೂರು ಬೆ. 10.30
ನ. 4 ಇಂಗ್ಲೆಂಡ್-ಆಸ್ಟ್ರೇಲಿಯ ಅಹ್ಮದಾಬಾದ್ ಅ. 2.00
ನ. 5 ಭಾರತ-ದಕ್ಷಿಣ ಆಫ್ರಿಕಾ ಕೋಲ್ಕತಾ ಅ. 2.00
ನ. 6 ಬಾಂಗ್ಲಾದೇಶ-ಶ್ರೀಲಂಕಾ ಹೊಸದಿಲ್ಲಿ ಅ. 2.00
ನ. 7 ಆಸ್ಟ್ರೇಲಿಯ-ಅಫ್ಘಾನಿಸ್ಥಾನ ಮುಂಬಯಿ ಅ. 2.00
ನ. 8 ಇಂಗ್ಲೆಂಡ್-ನೆದರ್ಲೆಂಡ್ಸ್ ಪುಣೆ ಅ. 2.00
ನ. 9 ನ್ಯೂಜಿಲ್ಯಾಂಡ್-ಶ್ರೀಲಂಕಾ ಬೆಂಗಳೂರು ಅ. 2.00
ನ. 10 ದಕ್ಷಿಣ ಆಫ್ರಿಕಾ-ಅಫ್ಘಾನಿಸ್ಥಾನ ಅಹ್ಮದಾಬಾದ್ ಅ. 2.00
ನ. 11 ಆಸ್ಟ್ರೇಲಿಯ-ಬಾಂಗ್ಲಾದೇಶ ಪುಣೆ ಬೆ. 10.30
ನ. 11 ಇಂಗ್ಲೆಂಡ್-ಪಾಕಿಸ್ಥಾನ ಕೋಲ್ಕತಾ ಅ. 2.00
ನ. 12 ಭಾರತ-ನೆದರ್ಲೆಂಡ್ಸ್ ಬೆಂಗಳೂರು ಅ. 2.00
ನ. 15 ಸೆಮಿಫೈನಲ್-1 ಮುಂಬಯಿ ಅ. 2.00
ನ. 16 ಸೆಮಿಫೈನಲ್-2 ಕೋಲ್ಕತಾ ಅ. 2.00
ನ. 19 ಫೈನಲ್ ಅಹ್ಮದಾಬಾದ್ ಅ. 2.00
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.