ಕ್ರೊವೇಶಿಯ-ಮೊರೊಕ್ಕೊ: ಮೂರನೇ ಸ್ಥಾನಕ್ಕಾಗಿ ಹೋರಾಟ
Team Udayavani, Dec 16, 2022, 6:23 AM IST
ದೋಹಾ: ಕ್ರೊವೇಶಿಯ ಮತ್ತು ಮೊರೊಕ್ಕೊ ಕತಾರ್‌ನಲ್ಲಿ ಎರಡನೇ ಬಾರಿ ಮುಖಾಮುಖಿಯಾಗುತ್ತಿದೆ. ಸೆಮಿಫೈನಲ್ ಹೋರಾಟದಲ್ಲಿ ಬಲಿಷ್ಠ ಆರ್ಜೆಂಟೀನಾ ಮತ್ತು ಫ್ರಾನ್ಸ್ ವಿರುದ್ಧ ಸೋತಿರುವ ಕ್ರೊವೇಶಿಯ ಮತ್ತು ಮೊರೊಕ್ಕೊ ಶನಿವಾರ ಮೂರನೇ ಸ್ಥಾನಕ್ಕಾಗಿ ನಡೆಯುವ ಹೋರಾಟದಲ್ಲಿ ಆಡಲಿದೆ. ಈ ಎರಡು ತಂಡಗಳು ಬಣ ಹಂತ ದಲ್ಲಿ ಮುಖಾಮುಖಿಯಾಗಿದ್ದು ಯಾವುದೇ ಗೋಲು ದಾಖಲಿಸದೇ ಡ್ರಾ ಮಾಡಿಕೊಂಡಿದ್ದವು.
2018ರ ರನ್ನರ್ ಅಪ್ ಕ್ರೊವೇ ಶಿಯ ಮೂರನೇ ಸ್ಥಾನದೊಂದಿಗೆ ಕತಾರ್‌ನಿಂದ ನಿರ್ಗಮಿಸಲು ಬಯಸಿದೆ. ಮೂರನೇ ಪಡೆಯಲು ನಾವು ಶಕ್ತಿಮೀರಿ ಪ್ರಯತ್ನಿಸಲಿದ್ದೇವೆ ಎಂದು ಕ್ರೊವೇಶಿಯದ ಮಿಡ್‌ಫಿàಲ್ಡರ್ ಲೊವ್ರೊ ಮಜೆರ್ ಹೇಳಿದ್ದಾರೆ.
ಮುಂದಿನ ವಿಶ್ವಕಪ್ ವೇಳೆ ತಂಡದ ಹೆಚ್ಚಿನ ಆಟಗಾರರು ನಿವೃತ್ತಿಯಾಗುವ ಸಾಧ್ಯತೆಯಿದೆ. ಹೀಗಾಗಿ ಶನಿವಾರದ ಪಂದ್ಯದಲ್ಲಿ ನಾವು ಶ್ರೇಷ್ಠ ನಿರ್ವಹಣೆಯೊಂದಿಗೆ ಹೋರಾಡುವುದು ಅತ್ಯಗತ್ಯ. ಈ ವಿಶ್ವಕಪ್‌ನಲ್ಲಿ ಎಲ್ಲ ಆಟಗಾರರು ಉತ್ತಮ ನಿರ್ವಹಣೆ ನೀಡಿದ್ದಾರೆ. ಮೂರನೇ ಸ್ಥಾನ ಪಡೆಯಲು ನಾವೀಗ ಪ್ರಯತ್ನಿಸಬೇಕಾಗಿದೆ ಎಂದು ಕೋಚ್ ಜ್ಲಾಟ್ಕೊ ಡ್ಯಾಲಿಕ್ ಹೇಳಿದ್ದಾರೆ.
ಮಾನಸಿಕವಾಗಿಯೂ ಇದೊಂದು ಅತ್ಯಂತ ಕಠಿನ ಕ್ಷಣ. ಶನಿವಾರದ ಪಂದ್ಯಕ್ಕಾಗಿ ನಾವು ಇಷ್ಟರವರೆಗೆ ಆಡದ ಆಟಗಾರರಿಗೆ ಅವಕಾಶ ನೀಡಲು ನಿರ್ಧರಿಸಿದ್ದೇವೆ. ಮೂರನೇ ಸ್ಥಾನ ಪಡೆಯಲು ಪ್ರಯತ್ನಿಸಲಿದ್ದೇವೆ ಎಂದು ಮೊರೊಕ್ಕೊದ ರೆಗ್ರಗುಯಿ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.