World Cup Final; ಪರಮ ದುಬಾರಿಯಾಗಿದೆ ಅಹಮದಾಬಾದ್ ನಗರ: ಒಂದು ಹೋಟೆಲ್ ರೂಮ್’ಗೆ 2 ಲಕ್ಷ ರೂ
Team Udayavani, Nov 18, 2023, 1:27 PM IST
ಅಹಮದಾಬಾದ್: ಭಾನುವಾರ ವಿಶ್ವಕಪ್ ಫೈನಲ್ ನಡೆಯುವ ಹಿನ್ನೆಲೆಯಲ್ಲಿ ಇಡೀ ಅಹಮದಾಬಾದ್ ಪರಮ ದುಬಾರಿಯಾಗಿ ಪರಿಣಮಿಸಿದೆ. ಹೋಟೆಲ್ ಕೊಠಡಿ ದರ, ವಿಮಾನ ಟಿಕೆಟ್ ದರ ಎಲ್ಲವೂ ಗಾಬರಿ ಹುಟ್ಟಿಸುವಂತಿವೆ. ತ್ರಿತಾರಾ, ಪಂಚತಾರಾ ಹೋಟೆಲ್ಗಳಲ್ಲಿ ಒಂದು ರಾತ್ರಿಗೆ 2 ಲಕ್ಷ ರೂ. ವರೆಗೆ ಕೊಠಡಿ ದರ ಏರಿದೆ.
ಇನ್ನು ದಿನಕ್ಕೆ 3, 4 ಸಾವಿರ ರೂ. ಹಣ ಹೇಳುತ್ತಿದ್ದ ಮಾಮೂಲಿ ಹೋಟೆಲ್ಗಳ ಕೊಠಡಿ ದರ 20,000 ರೂ.ಗೆ ಮುಟ್ಟಿದೆ. ಆಸ್ಟ್ರೇಲಿಯ, ದ.ಆಫ್ರಿಕಾ, ದುಬೈ ಸೇರಿದಂತೆ ಹೊರಗಿನಿಂದ ಕನಿಷ್ಠ 40,000 ಮಂದಿ ಅಹ್ಮದಾಬಾದ್ಗೆ ಬರುವ ನಿರೀಕ್ಷೆಯಿದೆ. ಆದರೆ ತಾರಾ ಹೋಟೆಲ್ಗಳಲ್ಲಿ ಲಭ್ಯವಿರುವುದು ಕೇವಲ 5000 ಕೊಠಡಿಗಳು! ಈ ಹಿನ್ನೆಲೆಯಲ್ಲಿ ಬೆಲೆ ಗಗನಕ್ಕೇರಿದೆ.
ಇನ್ನು ವಿಮಾನದರದ ವಿಷಯ. ಚೆನ್ನೈನಿಂದ ಅಹ್ಮದಾಬಾದ್ಗೆ ಮಾಮೂಲಿ ಟಿಕೆಟ್ ದರ 5000 ರೂ. ಇದೀಗ 16,000 ರೂ.ಗಳಿಂದ 25,000 ರೂ.ಗಳಿಗೆ ಮುಟ್ಟಿದೆ. ಅಭಿಮಾನಿಗಳಿಗೆ ಅಹ್ಮದಾಬಾದ್ ತಲುಪುವುದು ದೊಡ್ಡ ಸಾಹಸವಾಗಿ ಬಿಟ್ಟಿದೆ. ಟ್ರೈನ್ನಲ್ಲಿ ಹೋದರೆ ತಡವಾಗುತ್ತೆ, ಬಸ್ ಕೂಡ ದೂರ. ವಿಮಾನದಲ್ಲಿ ಎಲ್ಲವೂ ಸುಲಭ, ಆದರೆ ಹಣ ಕಕ್ಕುವುದು ಕಷ್ಟ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್ಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.