ವಿಶ್ವಕಪ್ ಫುಟ್‌ಬಾಲ್ ಎಂಬ ಮಾಯೆ!
Team Udayavani, Jun 4, 2018, 8:54 AM IST
2018ರ ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಗೆ ರಶ್ಯ ಸಿಂಗರಿಸಿಕೊಂಡು ನಿಂತಿರುವಾಗ ಜಗತ್ತಿನ ಸರ್ವಶ್ರೇಷ್ಠ ಆಟಗಾರರ ಆರಂಭದ ದಿನಗಳು ನೆನಪಾಗುತ್ತವೆ.
17ರ ಹರೆಯದಲ್ಲೇ ಸೂಪರ್‌ಸ್ಟಾರ್
ಸ್ವೀಡನ್‌ನಲ್ಲಿ ನಡೆದ 1958ರ ವಿಶ್ವಕಪ್ ಫುಟ್‌ಬಾಲ್ ತನಕ ಪೀಲೆ ಎಂಬ ಹೆಸರು ಬಹುಶಃ ಜಗತ್ತಿಗೇ ತಿಳಿದಿರಲಿಲ್ಲ. ಆಗ ಪೀಲೆ ಅಂದರೆ “ಎಡ್ಸನ್ ಅರಂಟೆಸ್ ಡು ನೆಸಿಮೆಟು’. ಇದು ಅವರ ನಿಜ ನಾಮಧೇಯ. ಬ್ರಝಿಲ್ ಮೊದಲ ಸಲ ವಿಶ್ವಕಪ್ ಗೆದ್ದು ಸಂಭ್ರಮಿಸಿದ್ದರಲ್ಲಿ ಪೀಲೆ ಅವರದು ಸಿಂಹಪಾಲು. ಸೆಮಿಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಬ್ರಝಿಲ್‌ನದ್ದು 5-2 ವಿಕ್ರಮ. ಇದರಲ್ಲಿ ಪೀಲೆ ಅವರದು ಹ್ಯಾಟ್ರಿಕ್ ಸಾಧನೆ. ಫೈನಲ್‌ನಲ್ಲಿ ಆತಿಥೇಯ ಸ್ವೀಡನ್ ವಿರುದ್ಧವೂ 5-2 ಜಯಭೇರಿ. ಇದರಲ್ಲಿ ಪೀಲೆ ಪಾಲು ಅವಳಿ ಗೋಲು. 17ರ ಹರೆಯದ ಈ ಬ್ರಝಿಲ್ ಫುಟ್ಬಾಲಿಗ ವಿಶ್ವ ಮಟ್ಟದ ಸ್ಟಾರ್ ಆಗಿ ಬೆಳಗಲು ಇನ್ನೇನು ತಾನೆ ಬೇಕಿತ್ತು! ಅತ್ಯಧಿಕ 3 ಸಲ ವಿಶ್ವಕಪ್ ಗೆದ್ದ ತಂಡದ ಸದಸ್ಯನೆಂಬ ಪೀಲೆ ಅವರ ವಿಶ್ವದಾಖಲೆ ಇಂದಿಗೂ ಅಜೇಯವಾಗಿ ಉಳಿದಿದೆ (1958, 1962, 1970).
ಮರಡೋನಾ ಎಂಬ ಮಾಯಾವಿ
ಪೀಲೆ ಅವರಂತೆ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗನಾಗಿ ಮೆರೆದಾಡಿದವರಲ್ಲಿ ಆರ್ಜೆಂಟೀನಾದ ಡೀಗೋ ಮರಡೋನಾ ಅವರದು ಬಹು ದೊಡ್ಡ ಹೆಸರು. 1982ರ ಸ್ಪೇನ್ ವಿಶ್ವಕಪ್‌ನಲ್ಲಿ ಆಡಿದ್ದರೂ ಇದರಲ್ಲಿ ಮರಡೋನಾ ಅವರದು ಫ್ಲಾಪ್ ಶೋ. ಹೀಗಾಗಿ ಈ ಹೆಸರು ವಿಶ್ವಖ್ಯಾತಿಯಾಗಲು ಇನ್ನೂ 4 ವರ್ಷ ಕಾಯಬೇಕಾಯಿತು. ಅದು ಮೆಕ್ಸಿಕೋದಲ್ಲಿ ನಡೆದ ಟೂರ್ನಿ. ಆರ್ಜೆಂಟೀನಾ 2ನೇ ಸಲ ವಿಶ್ವಕಪ್ ಎತ್ತಿ ಮೆರೆದಾಡಿತು. ಇದರ ರೂವಾರಿ ಮರಡೋನಾ. ಅಂದು ಮರಡೋನಾ ತಂಡದ ಸಾರಥಿಯೂ ಆಗಿದ್ದರು. ಇವರ ಒಂದೊಂದು ಗೋಲಿನೊಂದಿಗೂ ಒಂದೊಂದು ಹೆಸರು ಅಚ್ಚೊತ್ತಲ್ಪಟ್ಟಿತು. “ಹ್ಯಾಂಡ್ ಆಫ್ ಗಾಡ್’, “ಗೋಲ್ ಆಫ್ ದಿ ಸೆಂಚುರಿ’ ಇತ್ಯಾದಿ. ಫೈನಲ್‌ನಲ್ಲಿ ಪಶ್ಚಿಮ ಜರ್ಮನಿಯನ್ನು 3-2 ಗೋಲುಗಳಿಂದ ಮಣಿಸಿದ ಆರ್ಜೆಂಟೀನಾ ಕಿರೀಟ ಧರಿಸಿತು. ಮರಡೋನಾ ಒಟ್ಟು 5 ಗೋಲು ಹೊಡೆದು ಮೆರೆದಾಡಿದರು.
ಮೆಸ್ಸಿ -ಆಧುನಿಕ ಫುಟ್‌ಬಾಲಿನ ಕೋಲ್ಮಿಂಚು
ಲಿಯೋನೆಲ್ ಮೆಸ್ಸಿ ಅವರನ್ನು ಆಧುನಿಕ ಫುಟ್‌ಬಾಲಿನ ಕೋಲ್ಮಿಂಚು ಎಂದೇ ಕರೆಯುತ್ತಾರೆ. ಆರ್ಜೆಂಟೀನಾದ ಫಾರ್ವರ್ಡ್ ಆಟಗಾರನಾಗಿರುವ ಮೆಸ್ಸಿ ಈಗ ನಿವೃತ್ತಿಯ ಹಾದಿಯಲ್ಲಿದ್ದಾರೆ. ಮೆಸ್ಸಿ ಕೂಡ ವಿಶ್ವಕಪ್ ಮೂಲಕವೇ ಚಾಲ್ತಿಗೆ ಬಂದ ಆಟಗಾರ. 2006 ಜರ್ಮನಿ ಕೂಟದಲ್ಲಿ ಮೊದಲ ಸಲ ಕಾಣಿಸಿಕೊಂಡ ಮೆಸ್ಸಿ ಒಂದೇ ಗೋಲಿನಿಂದ ಮನೆಮಾತಾದ ಹೀರೋ. ವಿಶ್ವಕಪ್‌ನಲ್ಲಿ ಆರ್ಜೆಂ ಟೀನಾವನ್ನು ಪ್ರತಿನಿಧಿಸಿದ ಅತೀ ಕಿರಿಯನೆಂಬ ದಾಖಲೆ ಮೆಸ್ಸಿ ಹೆಸರಲ್ಲೇ ಇದೆ.
ಅದು ಸರ್ಬಿಯಾ ಆ್ಯಂಡ್ ಮಾಂಟೆನೆಗ್ರೊ ವಿರುದ್ಧದ ಪಂದ್ಯ. ಆರ್ಜೆಂಟೀನಾದ 6-0 ಗೆಲುವಿನಲ್ಲಿ ಮೆಸ್ಸಿ ಕೊನೆಯ ಗೋಲು ಹೊಡೆದು ಇಲ್ಲಿಯೂ “ಕಿರಿಯ’ನೆಂಬ ಹಿರಿಮೆಗೆ ಪಾತ್ರರಾದರು. ಈವರೆಗೆ 15 ವಿಶ್ವಕಪ್ ಪಂದ್ಯಗಳಿಂದ 5 ಗೋಲು ಹೊಡೆದಿದ್ದಾರೆ. ಆದರೆ ಈವರೆಗೆ ಮೆಸ್ಸಿ ತಂಡ ವಿಶ್ವಕಪ್ ಗೆದ್ದಿಲ್ಲ ಎಂಬುದೊಂದು ದುರಂತ! 2014ರ ಫೈನಲಿಸ್ಟ್ ಆರ್ಜೆಂಟೀನಾ ಈ ಬಾರಿ ಮೆಸ್ಸಿ ನಾಯಕತ್ವದಲ್ಲೇ ಕಣಕ್ಕಿಳಿಯಲಿದೆ.
“ವಿಶ್ವಕಪ್ ಫುಟ್‌ಬಾಲ್ ಎಂಬುದೊಂದು ಮಾಯೆ’ ಎಂದವರು ಫುಟ್‌ಬಾಲ್ ಲೆಜೆಂಡ್, ಬ್ರಝಿಲ್‌ನ ಪೀಲೆ. ಕಾರಣ, ಪೀಲೆ ಎಂಬ ಹೆಸರು ಇಂದಿಗೂ ಜಾಗತಿಕ ಕ್ರೀಡಾ ಮಟ್ಟದಲ್ಲಿ ಉಳಿದಿರಬೇಕಾದರೆ ಅದಕ್ಕೆ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯೇ ಕಾರಣ. ಈ ಮಾಯಾ ಲೋಕದಿಂದ ಅವತರಿಸಿ ಬಂದವರು ನಾವೆಲ್ಲ ಎಂದು ಪೀಲೆ ಹೇಳಿದ್ದರಲ್ಲಿ ಖಂಡಿತ ಅಚ್ಚರಿ ಇಲ್ಲ. ಅಲ್ಲಿಯ ತನಕ ಕ್ಲಬ್ ಮಟ್ಟಕ್ಕಷ್ಟೇ ಸೀಮಿತವಾಗಿದ್ದ, ಅಥವಾ ಅನಾಮಧೇಯ ರಾಗಿಯೇ ಉಳಿದಿದ್ದ ಫುಟ್ಬಾಲಿಗರೆಲ್ಲ ವಿಶ್ವಕಪ್‌ನಲ್ಲಿ ಮಿಂಚು ಹರಿಸಿ ಒಮ್ಮಿಂದೊಮ್ಮೆಲೆ ಪ್ರಜ್ವಲಿಸಿದವರಲ್ಲಿ ಪೀಲೆ ಎಂಬ ಹೆಸರಿಗೆ ಅಗ್ರಸ್ಥಾನ. ಈ ಸಾಲಿಗೆ ಸೇರುವ ಕೆಲವೇ ಹೆಸರುಗಳೆಂದರೆ ಡೀಗೋ ಮರಡೋನಾ, ಲಿಯೋನೆಲ್ ಮೆಸ್ಸಿ ಮೊದಲಾದವರು.
ಪೆನಾಲ್ಟಿ ಕಾರ್ನರ್
ವೀಸಾ ಇಲ್ಲದೇ ವಿಶ್ವಕಪ್‌ಗೆ!
ನೀವು ವಿಶ್ವಕಪ್ ಫುಟ್‌ಬಾಲ್ ಪಂದ್ಯ ವೀಕ್ಷಿಸಲು ರಶ್ಯಕ್ಕೆ ಹೋಗಬೇಕೆಂಬ ಆಸೆ ಇದೆಯೇ? ನಿಮಗೆ ಪಂದ್ಯದ ಟಿಕೆಟ್ ಸಿಕ್ಕಿದೆ, ಆದರೆ ವೀಸಾ ಇಲ್ಲವೇ? ಚಿಂತೆ ಬೇಡ. ವಿಶ್ವಕಪ್ ವೀಕ್ಷಣೆಗೆ ರಶ್ಯಕ್ಕೆ ಹೋಗಲು ವೀಸಾದ ಅಗತ್ಯ ಇಲ್ಲ! ವಿಶ್ವಕಪ್ ಟಿಕೆಟ್ ಹೊಂದಿದವರಿಗೆ “ಫ್ಯಾನ್ ಐಡಿ’ ಎಂಬ ವಿಶೇಷ ವ್ಯವಸ್ಥೆಯ ಮೂಲಕ ರಶ್ಯ ಪ್ರವೇಶಿಸಲು ಹಾಗೂ ವಾಪಸಾಗಲು ಅನುಮತಿ ನೀಡಲಾಗುತ್ತದೆ. ಇದಕ್ಕೆ ವೀಸಾದಷ್ಟೇ ಮಹತ್ವವಿದೆ. ಆದರೆ ಟಿಕೆಟ್ ಖರೀದಿಯ ದಾಖಲೆ, ಫಿಫಾ ನೀಡಿದ ಪ್ರವೇಶ ದಾಖಲೆ ಯನ್ನು ನೀವು ಹೊಂದಿರಬೇಕಾದುದು ಆಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.