ವಿಶ್ವಕಪ್ ಕ್ವಾರ್ಟರ್ ಫೈನಲ್: ಬ್ರಝಿಲ್-ಕ್ರೊವೇಶಿಯ ಭರ್ಜರಿ ಮೇಲಾಟ
Team Udayavani, Dec 9, 2022, 11:09 PM IST
ಅಲ್ ರಯಾನ್: ಐದು ಬಾರಿಯ ಚಾಂಪಿಯನ್ ಬ್ರಝಿಲ್ ಮತ್ತು 2018ರ ರನ್ನರ್ ಅಪ್ ಕ್ರೊವೇಶಿಯ ನಡುವಿನ ಶುಕ್ರವಾರ ರಾತ್ರಿಯ ಮೊದಲ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯ ಜಿದ್ದಾಜಿದ್ದಿ ಕದನಕ್ಕೆ ಸಾಕ್ಷಿಯಾಯಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳಿಂದ ಗೋಲು ದಾಖಲಾಗ ದಿದ್ದುದರಿಂದ ಪಂದ್ಯ ಹೆಚ್ಚು ಅವಧಿಗೆ ವಿಸ್ತರಿಸಲ್ಪಟ್ಟಿತು.
ನೇಮರ್ ಕಣದಲ್ಲಿದ್ದುರಿಂದ ಬ್ರಝಿಲ್ ಹೆಚ್ಚಿನ ಉತ್ಸಾಹದಲ್ಲಿತ್ತು. ಹೀಗಾಗಿ ಮೊದಲಾರ್ಧದಲ್ಲಿ ಬ್ರಝಿಲ್ ಹೆಚ್ಚು ಆಕ್ರಮಣಕಾರಿಯಾಗಿ ಆಡಿತು. ಆದರೆ ಈ ಆಕ್ರಮಣವನ್ನು ಕ್ರೊವೇಶಿಯ ಅಷ್ಟೇ ಯಶಸ್ವಿಯಾಗಿ ತಡೆಯಿತು. ಮುಖ್ಯವಾಗಿ ಕ್ರೊವೇಶಿಯಾದ ಗೋಲ್‌ಕೀಪರ್ ಲಿವಾಕೊವಿಕ್ ಗೋಡೆಯಂತೆ ನಿಂತು “ಸಾಂಬಾ’ವನ್ನು ಸಂಭ್ರಮಿಸದಂತೆ ಮಾಡಿದರು. ಕೊನೆಯ ತನಕ ಕ್ರೊವೇಶಿಯ ತನ್ನ ಪಟ್ಟು ಸಡಿಲಿಸಲಿಲ್ಲ.
ಕ್ರೊವೇಶಿಯದ ಪ್ರಿ ಕ್ವಾರ್ಟರ್ ಫೈನಲ್ ಕೂಡ ಗೋಲ್‌ಲೆಸ್ ಆಗಿತ್ತು. ಬಳಿಕ ಅದು ಪೆನಾಲ್ಟಿ ಶೂಟೌಟ್‌ನಲ್ಲಿ ಜಪಾನ್ ವಿರುದ್ಧ 3-1 ಅಂತರದ ಜಯ ಸಾಧಿಸಿತ್ತು. ಇನ್ನೊಂದೆಡೆ ಬ್ರಝಿಲ್ 4-1 ಅಂತರದಿಂದ ದಕ್ಷಿಣ ಕೊರಿಯಾದ ಸದ್ದಡಗಿಸಿತ್ತು.
ಇದು ಬ್ರಝಿಲ್-ಕ್ರೊವೇಶಿಯ ನಡುವಿನ 4ನೇ ಮುಖಾಮುಖಿ. ಇದರಲ್ಲಿ ಕ್ರೊವೇಶಿಯ ಒಮ್ಮೆಯೂ ಗೆದ್ದಿಲ್ಲ. ಬ್ರಝಿಲ್ ಮೂರರಲ್ಲಿ ಜಯಿಸಿದೆ. ಒಂದು ಪಂದ್ಯ ಡ್ರಾಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.