ವಿಶ್ವಕಪ್ ಶೂಟಿಂಗ್ : ಒಂದಂಕದಿಂದ ಫೈನಲಿಗೇರಲು ಸಂಜೀವ್ ವಿಫಲ
Team Udayavani, Nov 19, 2019, 11:44 PM IST
ಹೊಸದಿಲ್ಲಿ: ಭಾರತದ ಸಂಜೀವ್ ರಜಪೂತ್ ಅವರು ಕೇವಲ ಒಂದಂಕದಿಂದ ಪ್ರತಿಷ್ಠಿತ ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್ಸ್‌ನ ಶೂಟಿಂಗ್‌ನ ಫೈನಲ್ ಹಂತಕ್ಕೇರಲು ವಿಫಲರಾಗಿದ್ದಾರೆ. ವರ್ಷದ ಅಗ್ರ ರ್‍ಯಾಂಕಿನ ರೈಫಲ್ ಮತ್ತು ಪಿಸ್ತೂಲ್ ಶೂಟರ್‌ಗಳು ಈ ಕೂಟದಲ್ಲಿ ಭಾಗವಹಿಸುತ್ತಿದ್ದು ಚೆಕ್ ಗಣರಾಜ್ಯದ ಫಿಲಿಪ್ ನೆಪೆಚಾಲ್ ಮತ್ತು ಬ್ರಿಟನ್‌ನ ಸಿಯೊನೈಡ್ ಮೆಸಿಂತೋಷ್ ಚಿನ್ನ ಗೆಲ್ಲುವ ಮೂಲಕ ದಿನದ ಗೌರವ ಸಂಪಾದಿಸಿದರು.
ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ರಜಪೂತ್ 50 ಮೀ. ರೈಫಲ್ ತ್ರಿ ಪೊಸಿಷನ್‌ನ ಅರ್ಹತಾ ಸುತ್ತಿನಲ್ಲಿ 1153 ಅಂಕ ಗಳಿಸಿ 9ನೇ ಸ್ಥಾನ ಪಡೆದರು. ಪೋಲ್ಯಾಂಡ್‌ನ ಶೂಟರ್ ತೊಮಾಜ್ ಬಾರ್ಟ್ನಿಕ್ 1154 ಅಂಕ ಪಡೆದು ಎಂಟನೇ ಸ್ಥಾನಿಯಾಗಿ ಫೈನಲಿಗೇರಿದ್ದರು. ಒಂದು ವೇಳೆ ತೊಮಾಜ್ ಜತೆ ಸಂಜೀವ್ ಅಂಕ ಸಮಬಲಗೊಳಿಸಿದ್ದರೆ ಪೋಲ್ಯಾಂಡಿನ ಶೂಟರ್‌ಗಿಂತ ಉತ್ತಮ ನಿರ್ವಹಣೆಯ ಆಧಾರದಲ್ಲಿ ಸಂಜೀವ್ ಫೈನಲಿಗೇರುವ ಸಾಧ್ಯತೆಯಿತ್ತು.
ಐಎಸ್‌ಎಸ್‌ಎಫ್ನ ವರ್ಷಾಂತ್ಯದ ಈ ಪ್ರತಿಷ್ಠಿತ ಕೂಟದಲ್ಲಿ ಭಾರತದ ಅಖೀಲ್ ಶೆರಾನ್ ಕೂಡ ಭಾಗವಹಿಸಿದ್ದರು. ಆದರೆ 1147 ಅಂಕ ಗಳಿಸಿದ್ದ ಅವರು 13ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.
ವನಿತೆಯರ ತ್ರಿ ಪೊಸಿಷನ್‌ನಲ್ಲಿ ಭಾರತದ ಅಂಜುಮ್ ಮೌದ್ಗಿಲ್ ಅವರು ಒಟ್ಟಾರೆ 13ನೇ ಸ್ಥಾನ ಪಡೆಯಲಷ್ಟೇ ಶಕ್ತರಾಗಿ ನಿರಾಸೆ ಮೂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.