World cup Super over ರೋಚಕ ಪಂದ್ಯ; ಪಾಕಿಸ್ಥಾನಕ್ಕೆ ಸೋಲಿನ ಶಾಕ್ ನೀಡಿದ ಅಮೆರಿಕ!!
Team Udayavani, Jun 7, 2024, 1:43 AM IST
ಡಲ್ಲಾಸ್: ಟಿ20 ವಿಶ್ವಕಪ್ ಕೂಟದ ಗುರುವಾರದ ಗ್ರೂಪ್ ಎ ನ ಅತ್ಯಂತ ರೋಮಾಂಚನಕಾರಿ ಪಂದ್ಯದಲ್ಲಿ ಪಾಕಿಸ್ಥಾನ ತಂಡ ಅಮೆರಿಕ ವಿರುದ್ಧ ಸೂಪರ್ ಓವರ್ ಮೇಲಾಟದಲ್ಲಿ ಅನಿರೀಕ್ಷಿತ ಸೋಲಿನ ಶಾಕ್ ಅನುಭವಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನವು ಆರಂಭದಲ್ಲಿ ಎರಡು ವಿಕೆಟ್ ಬೇಗನೇ ಕಳೆದುಕೊಂಡು ಆಘಾತ ಅನುಭವಿಸಿತು. ಬಾಜರ್ ಆಜಂ ಮತ್ತು ಶಾದಾಬ್ ಖಾನ್ ಅವರ ಉಪಯುಕ್ತ ಆಟದಿಂದಾಗಿ ಪಾಕಿಸ್ಥಾನ ತಂಡ 7 ವಿಕೆಟಿಗೆ 159 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಅಮೆರಿಕ ನಾಯಕ ಮೊನಾಂಕ್ ಪಟೇಲ್ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ, ಆಂಡ್ರೀಸ್ ಗೌಸ್ 35, ಆರನ್ ಜೋನ್ಸ್ ಔಟಾಗದೆ 36 ಮತ್ತು ನಿತೀಶ್ ಕುಮಾರ್ ಔಟಾಗದೆ 14 ರನ್ ಗಳ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಪಂದ್ಯ ಟೈ ಮಾಡಿಕೊಂಡಿತು.ವಿಕೆಟ್ ಉಳಿಸಿಕೊಂಡ ಅಮೆರಿಕ ಪಾಕ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಯಶಸ್ವಿಯಾದರು.
ಸೂಪರ್ ಓವರ್
ಸೂಪರ್ ಓವರ್ ನಲ್ಲಿ ಅಮಿರ್ ಅವರು ಎಸೆದ ಓವರ್ ನಲ್ಲಿ ಆರೋನ್ ಜೋನ್ಸ್ ಮತ್ತು ಹರ್ಮೀತ್ ಸಿಂಗ್ ಆಟಕ್ಕಿಳಿದರು. ಅಮೆರಿಕ 1 ವಿಕೆಟ್ ನಷ್ಟಕ್ಕೆ 18 ರನ್ ಗಳಿಸಿತು. ಓವರ್ ನಲ್ಲಿ ಅಮಿರ್ ಎಸೆದ 3 ವೈಡ್ ಗಳಿದ್ದವು.
ನೇತ್ರಾವಲ್ಕರ್ ಎಸೆದ ಓವರ್ ನಲ್ಲಿ ಪಾಕಿಸ್ಥಾನ ಗುರಿ ತಪ್ಪಲು ವಿಫಲವಾಯಿತು. ಎರಡು ಬೌಂಡರಿಗಳು ಬಂದರೂ ಒಂದು ವಿಕೆಟ್ ಕಿತ್ತರು. 1 ಎಸೆತದಲ್ಲಿ 7 ರನ್ ಅಗತ್ಯವಿತ್ತು. ಕೊನೆಯ ಎಸೆತ ಎದುರಿಸಿದ ಶಾದಾಬ್ 1 ರನ್ ಮಾತ್ರ ಗಳಿಸಲು ಯಶಸ್ವಿಯಾದರು. ಅಮೆರಿಕ 5 ರನ್ ಗಳಿಂದ ಗೆಲುವು ತನ್ನದಾಗಿಸಿಕೊಂಡಿತು.
ಮೊಹಮ್ಮದ್ ರಿಜ್ವಾನ್ ಮತ್ತು ಉಸ್ಮಾನ್ ಖಾನ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು. ಆಬಳಿಕ ಬಾಬರ್ ಮತ್ತು ಶಾದಾಬ್ ನಾಲ್ಕನೇ ವಿಕೆಟಿಗೆ 72 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಶಾದಾಬ್ 40 ಮತ್ತು ಬಾಬರ್ 44 ರನ್ ಹೊಡೆದರು. ಮೂಡಿಗೆರೆ ಮೂಲದ ನೋಸ್ತುಶ್ ಕೆಂಜಿಗೆ 30 ರನ್ನಿಗೆ ಮೂರು ವಿಕೆಟ್ ಕಿತ್ತು ಗಮನ ಸೆಳೆದಿದ್ದಾರೆ.
ಅಮೆರಿಕ ಈಗ 2 ಪಂದ್ಯಗಳಿಂದ 2 ಗೆಲುವುಗಳನ್ನು ಹೊಂದಿದೆ. ಟೂರ್ನಮೆಂಟ್‌ಗೆ ಬಂದ ಪಾಕಿಸ್ಥಾನಕ್ಕೆ ಇದು ಅತ್ಯಂತ ನಿರಾಶಾದಾಯಕ ಅನಿರೀಕ್ಷಿತ ನಷ್ಟವಾಗಿದೆ. ಅಮೆರಿಕ ವಿರುದ್ಧ ಟಿ 20 ಪಂದ್ಯದಲ್ಲಿ ಸೋತ ಪಾಕಿಸ್ಥಾನವು ಬಾಂಗ್ಲಾದೇಶದ ನಂತರ ಟೆಸ್ಟ್ ಆಡುವ ಎರಡನೇ ತಂಡ ಎನಿಸಿಕೊಂಡಿತು. ವಿಶ್ವಕಪ್ ಗೂ ಮುನ್ನ ಅಮೆರಿಕ ಬಾಂಗ್ಲಾ ವಿರುದ್ಧ ಟಿ 20 ಸರಣಿ ಗೆದ್ದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.