ವಿಶ್ವಕಪ್ ಅಭ್ಯಾಸ: ಭಾರತಕ್ಕೆ ಇಂಗ್ಲೆಂಡ್ ವಿರುದ್ಧ ಗೆಲುವು
Team Udayavani, Nov 9, 2018, 12:47 PM IST
ಪ್ರೊವಿಡೆನ್ಸ್ (ಗಯಾನಾ): “ವನಿತಾ ವಿಶ್ವ ಟಿ20 ಚಾಂಪಿಯನ್‌ಶಿಪ್’ನ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ 11 ರನ್‌ಗಳ ಜಯ ದಾಖಲಿಸಿದೆ.
ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ್ದ ಇಂಗ್ಲೆಂಡ್ ವನಿತೆಯರು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್‌ಗಳನ್ನಷ್ಟೇ ದಾಖಲಿಸಿದರು.
ಆರಂಭಿಕ ಆಟಗಾರ್ತಿಯರಾದ ಮಿಥಾಲಿ ರಾಜ್ (18) ಹಾಗೂ ಸ್ಮತಿ ಮಂಧನಾ (13) ಬಹು ಬೇಗನೆ ಪೆವಿಲಿಯನ್ ಸೇರಿದರು. ಅನಂತರ ಬಂದ ಜೆಮಿಮಾ ರೋಡ್ರಿಗಸ್ 21 ರನ್ ಗಳಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ತಾಳ್ಮೆಯ ಆಟವಾಡಿ ಅಜೇಯ 62 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿ ನಿಂತರು. ಅವರ ಸೊಗಸಾದ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ, 3 ಸಿಕ್ಸರ್ ಒಳಗೊಂಡಿತ್ತು. ಇಂಗ್ಲೆಂಡ್ ಪರ ಅನ್ಯಾ ಶ್ರಬೊಲ್, ಹೀತರ್ ನೈಟ್ ತಲಾ ಎರಡು ವಿಕೆಟ್ ಕಿತ್ತರೆ, ನತಾಲಿಯ ಸಿವರ್, ಸೋಫಿಯಾ ಇಕೆಲ್‌ಸ್ಟೋನ್ ಒಂದು ವಿಕೆಟ್ ಉರುಳಿಸಿದರು.
ಇಂಗ್ಲೆಂಡ್ ಆರಂಭಿಕ ಆಟಗಾರ್ತಿ ಡೇನಿಯಲ್ ವೈಟ್ ಅರ್ಧ ಶತಕ (54) ಹೊಡೆದು ಹೋರಾಟ ಸಂಘಟಿಸಿದರೂ ಉಳಿದ ಆಟಗಾರ್ತಿಯರು ಭಾರತ ದಾಳಿಗೆ ತತ್ತರಿಸಿ ಬೇಗನೇ ಪೆವಿಲಿಯನ್ ಸೇರಿಕೊಂಡರು. ಭಾರತದ ಪರ ಪೂನಂ ಯಾದವ್ 3 ವಿಕೆಟ್, ರಾಧಾ ಯಾದವ್, ದೀಪ್ತಿ ಶರ್ಮ 2 ಹಾಗೂ ಡಿ. ಹೇಮಲತಾ ಒಂದು ವಿಕೆಟ್ ಕಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.