ವಿಶ್ವಕಪ್ ಅಭ್ಯಾಸ ಭಾರತಕ್ಕೆ ಕಿವೀಸ್, ಬಾಂಗ್ಲಾ ಎದುರಾಳಿ
Team Udayavani, Feb 1, 2019, 1:25 AM IST
ದುಬಾೖ: ಏಕದಿನ ವಿಶ್ವಕಪ್ ಕೂಟಕ್ಕಾಗಿ ಐಸಿಸಿ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 5 ದಿನಗಳ ಕಾಲ ನಡೆಯಿರುವ ಈ ಅಭ್ಯಾಸ ಪಂದ್ಯಾವಳಿ ಮೇ 24ರಂದು ಆರಂಭವಾಗಲಿದೆ.
ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ 10 ತಂಡಗಳು ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ. ಫೇವರಿಟ್‌ಗಳಲ್ಲಿ ಒಂದಾಗಿರುವ ಭಾರತ ತಂಡ ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.
ಅಭ್ಯಾಸ ಕೂಟದ ಮೊದಲ ದಿನ ಪಾಕಿಸ್ಥಾನ-ಅಫ್ಘಾನಿಸ್ಥಾನ ಹಾಗೂ ಶ್ರೀಲಂಕಾ-ದಕ್ಷಿಣ ಆಫ್ರಿಕಾ ಎದುರಾಗಲಿವೆ. ಮೇ 25ರಂದು ಇಂಗ್ಲೆಂಡ್-ಆಸ್ಟ್ರೇಲಿಯ ಹಾಗೂ ಭಾರತ-ನ್ಯೂಜಿಲ್ಯಾಂಡ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಮೇ 26ರಂದು ವೆಸ್ಟ್‌ಇಂಡೀಸ್-ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ಥಾನ-ಬಾಂಗ್ಲಾದೇಶ ಎದುರಾಗಲಿವೆ.
ಮೇ 27ರಂದು ಶ್ರೀಲಂಕಾ-ಆಸ್ಟ್ರೇಲಿಯ, ಇಂಗ್ಲೆಂಡ್-ಅಫ್ಘಾನಿಸ್ಥಾನ; ಅಂತಿಮ ದಿನ ನ್ಯೂಜಿಲ್ಯಾಂಡ್-ವೆಸ್ಟ್‌ಇಂಡೀಸ್ ಹಾಗೂ ಭಾರತ-ಬಾಂಗ್ಲಾದೇಶ ನಡುವೆ ಸ್ಪರ್ಧೆ ಏರ್ಪಡಲಿದೆ. ಮೇ 30ರಿಂದ ಇಂಗ್ಲೆಂಡಿನ ಪ್ರಧಾನ ಆತಿಥ್ಯದಲ್ಲಿ ಪ್ರತಿಷ್ಠಿತ ವಿಶ್ವಕಪ್ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.