ಐಪಿಎಲ್ ಪ್ರದರ್ಶನ ವಿಶ್ವಕಪ್ ಆಯ್ಕೆಗೆ ಮಾನದಂಡವಲ್ಲ: ಕೊಹ್ಲಿ
Team Udayavani, Mar 2, 2019, 8:22 AM IST
ಹೈದರಾಬಾದ್: ಮಾರ್ಚ್ 23ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿನ ಭಾರತೀಯ ಆಟಗಾರರ ಪ್ರದರ್ಶನ ವಿಶ್ವಕಪ್ ತಂಡಕ್ಕೆ ಮಾನದಂಡವಲ್ಲ ಎಂದು ಭಾರತೀಯ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಐಪಿಎಲ್ ನಲ್ಲಿನ ಭಾರತೀಯ ಆಟಗಾರರ ಪ್ರದರ್ಶನದ ಮೇರೆಗೆ ವಿಶ್ವಕಪ್ ತಂಡವನ್ನು ಅಂತಿಮ ಮಾಡಲಾಗುವುದಿಲ್ಲ. ವಿಶ್ವಕಪ್ ತಂಡದ ಆಯ್ಕೆಗೆ ಅದರದೇ ಆದ ಕೆಲವು ಮಾನದಂಡಗಳಿವೆ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವಕಪ್ ಗಾಗಿ ನಮಗೆ ಅದ್ಭುತ ತಂಡದ ಅಗತ್ಯವಿದೆ. ಐಪಿಎಲ್ ಗಿಂತಲೂ ಮೊದಲೇ ಈ ತಂಡ ಅಂತಿಮವಾಗುತ್ತದೆ. ಐಪಿಎಲ್ ನಂತರ ಈ ತಂಡದಲ್ಲಿ ಬದಲಾವಣೆ ಆಗುತ್ತದೆ ಎಂದು ನನಗನಿಸುವುದಿಲ್ಲ. ಒಂದೆರಡು ಭಾರತೀಯ ರಾಷ್ಟ್ರೀಯ ತಂಡದ ಆಟಗಾರರು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡದೇ ಇರಬಹುದು. ಹಾಗಾದಲ್ಲಿ ವಿಶ್ವಕಪ್ ತಂಡಕ್ಕೆ ಅವರನ್ನು ಪರಿಗಣಿಸುವುದಿಲ್ಲ ಎಂದರ್ಥವಲ್ಲ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.
ಭಾರತದ ವಿಶ್ವಕಪ್ ತಂಡ ಬಹುತೇಕ ಅಂತಿಮವಾಗಿದ್ದು, ಉಳಿದಿರುವ ಒಂದೆರಡು ಸ್ಥಾನಗಳ ಆಯ್ಕೆ ಆಗಬೇಕಿದೆ. ಹಾಲಿ ಚಾಂಪಿಯನ್ ವಿರುದ್ಧ ಶನಿವಾರದಿಂದ ಏಕದಿನ ಸರಣಿ ಆರಂಭವಾಗುತ್ತಿದ್ದು, ಇದನ್ನು ವಿಶ್ವಕಪ್ ಅಭ್ಯಾಸ ಸರಣಿ ಎಂದೇ ಪರಿಗಣಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.