“ಕ್ರೀಡೆ’ ಮನಸುಗಳನ್ನು ಬೆಸೆಯುವ ಸೇತುವೆ

Team Udayavani, Apr 6, 2018, 6:45 AM IST

Sports-Day.jpg

ಉಡುಪಿ: ಇಂದು ವಿಶ್ವ ಕ್ರೀಡಾದಿನ. ಕ್ರೀಡೆಯಿಂದ ಸೌಹಾರ್ದತೆ, ಕ್ರೀಡೆಯಿಂದ ಶಾಂತಿ, ಕ್ರೀಡೆಯಿಂದ ಒಗ್ಗಟ್ಟು, ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ ಎಂಬ ಕಾರಣಕ್ಕೆ ಹುಟ್ಟಿಕೊಂಡದ್ದು ವಿಶ್ವ ಕ್ರೀಡಾದಿನ. ವಿಶ್ವಶಾಂತಿಯ ಮತ್ತು ವಿವಿಧ ಸಾಂಸ್ಕೃತಿ ಭಿನ್ನತೆಗಳನ್ನು ತೊಡೆದು ಹಾಕುವ ಉದ್ದೇಶದ ಹಿನ್ನೆಲೆಯಲ್ಲಿ ವಿಶ್ವ ಕ್ರೀಡಾ ದಿನಾಚರಣೆಗೆ ವಿಶೇಷ ಮಹತ್ವ ಬಂದಿದೆ. 

ಮೊದಲ ಆಚರಣೆ…
ವಿಶ್ವ ಕ್ರೀಡಾದಿನದ ಮೂಲಕ ಸಾಮಾಜಿಕ ಬದಲಾವಣೆಗೆ ಸಾಧ್ಯವಿದೆ ಎಂಬ ಹಿನ್ನೆಲೆಯಲ್ಲಿ ನಿರ್ಣಯವನ್ನು ವಿಶ್ವಸಂಸ್ಥೆ ಕೈಗೊಂಡಿತ್ತು. ಜತೆಗೆ  ಶಿಕ್ಷಣ, ಆರೋಗ್ಯ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಬಹುದು ಎಂಬ ಕಾರಣಕ್ಕೆ ಒಲಿಂಪಿಕ್ಸ್‌ ಇತ್ಯಾದಿ ಕ್ರೀಡಾಕೂಟದ ಸಂದರ್ಭಗಳಲ್ಲಿ ಆಯೋಜನಾ ಸಮಿತಿಯೊಂದಿಗೆ ಕೆಲಸ ಮಾಡಿದೆ. ಇದಕ್ಕೆ ಪೂರಕವಾಗಿ ಜಾಗತಿಕ ದಿನ ಆಚರಿಸಲು 2013, ಆ.23ರಂದು ನಿರ್ಣಯಕ್ಕೆ ಬಂದಿದ್ದು, ಎ. 6ನ್ನು ವಿಶ್ವ ಕ್ರೀಡಾದಿನವಾಗಿ ಘೋಷಿಸಿತ್ತು. ಶಾಂತಿಗಾಗಿ ಕ್ರೀಡೆ ಎನ್ನುವುದು ಈ ಬಾರಿಯ ಕ್ರೀಡಾ ದಿನಾಚರಣೆಯ ಆಶಯ.

ಕ್ರೀಡೆಯಿಂದ ಸ್ನೇಹ-ಸೌಹಾರ್ದ 
ಕ್ರೀಡೆ ಮನಸು ಮನಸುಗಳನ್ನು ಬೆಸೆಯುವ ಸೇತುವೆ. ಅಲ್ಲಿ ಜಾತಿ, ಮತವಿಲ್ಲ, ದೇಶ, ಭಾಷೆಯ ಹಂಗಿಲ್ಲ. ಕ್ರೀಡಾಂಗಣದಲ್ಲಿ ಸ್ಪರ್ಧೆಯ ವೇಳೆ ಮಾತ್ರ ನಮಗೆ ಎದುರಾಳಿಗಳು. ಉಳಿದಂತೆ ಅವರು ಆಪ್ತ ಗೆಳೆಯರು. ಕ್ರೀಡೆಯಿಂದಲೇ ವಿಶ್ವಶಾಂತಿಯ ಜ್ಯೋತಿ ಬೆಳಗಲು ಸಾಧ್ಯ ಎನ್ನುತ್ತಾರೆ ಉಡುಪಿ ಜಿಲ್ಲೆಯಲ್ಲಿ ಹುಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಶಿಖರವೇರಿರುವ ಹೆಮ್ಮೆಯ ಕ್ರೀಡಾಳುಗಳು. ಅವರು “ಉದಯವಾಣಿ’ ಜತೆ ಅನಿಸಿಕೆ ಹಂಚಿಕೊಂಡಿದ್ದಾರೆ. 

ಕ್ರೀಡೆಯಂದ ಶಾಂತಿ 
ನಾನು ದೇಶ-ವಿದೇಶಗಳಲ್ಲಿ ಆಡಿದ್ದೇನೆ. ಕ್ರೀಡೆಯನ್ನು ಎಲ್ಲರೂ ಕ್ರೀಡೆಯಾಗಿಯೇ ಸ್ವೀಕರಿಸುತ್ತಾರೆ. ಎಲ್ಲರನ್ನು ಅದು ಒಂದು ಮಾಡುತ್ತದೆ.  ಕ್ರೀಡೆ ಇದ್ದ‌ಲ್ಲಿ ಅಶಾಂತಿಗೆ ಅವಕಾಶವಿಲ್ಲ.
 
– ಸುಕೇಶ್‌ ಹೆಗ್ಡೆ,  ಕಬಡ್ಡಿ ಆಟಗಾರ 

ಕ್ರೀಡೆಯಿಂದ ಆತ್ಮೀಯತೆ
ಕ್ರೀಡೆ ಆರೋಗ್ಯ, ಸ್ಪರ್ಧೆಗಾಗಿ ಮಾತ್ರವೇ ಅಲ್ಲ. ನಮ್ಮ ನಡುವೆ ಒಳ್ಳೆಯ ಸಂಬಂಧವೇರ್ಪಡಲು ಕ್ರೀಡೆಯಿಂದ ಸಾಧ್ಯ.  ಎಲ್ಲರೂ ಮೈದಾನದಲ್ಲಿ ಆತ್ಮೀಯ ರಾಗುತ್ತಾರೆ.   ಕ್ರೀಡೆ ಇರು ವಲ್ಲಿ ಸಂಘರ್ಷ ಕಡಿಮೆ.

– ಗೋಪಾಲ ಖಾರ್ವಿ, ಈಜಿನಲ್ಲಿ ಗಿನ್ನೆಸ್‌ ವಿಶ್ವದಾಖಲೆಗೈದವರು

ಶಾಂತಿಯ ಸಂದೇಶ 
ಕ್ರೀಡೆ ಎನ್ನುವುದು ನಮ್ಮ ಸಂಕುಚಿತ ಮನೋಭಾವನೆಗಳನ್ನು ಮೀರಿ ನಿಲ್ಲುವಂತೆ ಮಾಡುತ್ತದೆ.  ಕ್ರೀಡೆ ಎಲ್ಲರಿಗೂ ಪ್ರೀತಿ, ಶಾಂತಿಯ ಸಂದೇಶ ಕೊಡುತ್ತದೆ ಎಂಬುದು ನನ್ನ ಭಾವನೆ. 

-ಮಮತಾ ಪೂಜಾರಿ, ಕಬಡ್ಡಿ ಆಟಗಾರ್ತಿ

ಸೋಲು ಗೆಲುವು ಸಮಾನ
ಸೋಲು ಮತ್ತು ಗೆಲುವನ್ನು ಸ್ವೀಕರಿಸುವ ಮನೋಭಾವನೆ ಬೆಳೆಸ ುತ್ತದೆ.  ಈ ಬಾರಿಯ ಶಾಂತಿ ಸೌಹಾರ್ದದ ಸಂದೇಶ ಜಗದಗಲ ಪಸರಿಸಲಿ.

-ಸ್ಯಾಂಡ್ರಾ ಡಿ’ಸೋಜಾ, 
 
ಟಾಪ್ ನ್ಯೂಸ್

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.