ಕ್ವಾರ್ಟರ್ ಫೈನಲ್‌ಗೆ ಸೌರವ್ ಘೋಷಲ್
Team Udayavani, Feb 28, 2019, 12:30 AM IST
ಚಿಕಾಗೊ: ಭಾರತದ ಸೌರವ್ ಘೋಷಲ್ “ಪಿಎಸ್‌ಎ ವಿಶ್ವ ಸ್ಕ್ವಾಷ್ ಚಾಂಪಿಯನ್‌ಶಿಪ್’ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ 11ನೇ ಶ್ರೇಯಾಂಕಿತ ಸೌರವ್ 11-13, 11-7, 11-7, 13-11 ಗೇಮ್‌ಗಳಿಂದ ವೇಲ್ಸ್‌ನ ಜೋಯಲ್ ಮಾಕಿನ್ ವಿರುದ್ಧ ಗೆಲುವು ದಾಖಲಿಸಿದರು.
2017ರಲ್ಲಿ ಮುಂಬಯಿನಲ್ಲಿ ನಡೆದ ಸಿಸಿಐ ಅಂತಾರಾಷ್ಟ್ರೀಯ ಕೂಟದಲ್ಲೂ ಮಾಕಿನ್ ವಿರುದ್ಧ ಸೌರವ್ ಜಯಿಸಿದ್ದರು. ಆದರೆ ಈ ಬಾರಿ ಮಾಕಿನ್ ಅವರಿಂದ ತೀವ್ರ ಪೈಪೋಟಿ ಎದುರಾಯಿತು. ಮೊದಲ ಗೇಮ್ ಕೈಚೆಲ್ಲಿದ ಸೌರವ್ ಅನಂತರದ ಎರಡು ಗೇಮ್‌ಗಳಲ್ಲೂ ಸುಲಭ ಜಯ ದಾಖಲಿಸಿದರು. 4ನೇ ಗೇಮ್‌ನ ಆರಂಭದಲ್ಲಿ 5-8 ಅಂಕಗಳ ಹಿನ್ನಡೆಯಲ್ಲಿದ್ದರು. ಆದರೆ ಅನುಭವದ ಲಾಭವೆತ್ತಿದ ಸೌರವ್ ಭಾರೀ ಹೋರಾಟದ ಬಳಿಕ ಗೆಲುವು ತಮ್ಮದಾಗಿಸಿಕೊಂಡರು. ಕ್ವಾರ್ಟರ್ ಫೈನಲ್‌ನಲ್ಲಿ ಸೌರವ್ ಜರ್ಮನಿಯ ಸಿಮೋನ್ ರೋಸ್ನರ್ ಅವರನ್ನು ಎದುರಿಸಲಿದ್ದಾರೆ.ಸೌರವ್ ಘೋಷಲ್ ಈ ಕೂಟದಲ್ಲಿ ಎಂಟರ ಹಂತ ಪ್ರವೇಶಿಸಿದ್ದು ಇದು 2ನೇ ಸಲ. ಇದಕ್ಕೂ ಮುನ್ನ 2013ರ ಆವೃತ್ತಿಯಲ್ಲೂ ಅವರು ಕ್ವಾರ್ಟರ್ ಫೈನಲ್ ತಲುಪಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.