ವಿಶ್ವ ಕುಸ್ತಿ: ಮೊದಲ ದಿನ ಭಾರತ ನೀರಸ ಪ್ರದರ್ಶನ
Team Udayavani, Aug 22, 2017, 1:14 PM IST
ಪ್ಯಾರಿಸ್: ಇಲ್ಲಿ ಆರಂಭವಾಗಿರುವ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತ ಮೊದಲ ದಿನವೇ ಭಾರೀ ಸೋಲು ಅನುಭವಿಸಿದೆ. ಮೊದಲ ದಿನದ ಗ್ರೀಕೊ ರೋಮನ್ ವಿಭಾಗದ ಸ್ಪರ್ಧೆಯಲ್ಲಿ ಭಾರತದ ನಾಲ್ಕು ಮಂದಿ ಸ್ಪರ್ಧಿಗಳು ಸ್ಪರ್ಧೆ ಮಾಡಿ ಸೋಲು ಅನುಭವಿಸಿದರು ಎನ್ನುವುದು ವಿಶೇಷ.
ಸೋಲಿನ ಸರಣಿ: 71 ಕೆ.ಜಿ ವಿಭಾಗದಲ್ಲಿ ಭಾರತದ ಯೋಗೇಶ್ 1-3 ಅಂಕಗಳ ಅಂತರದಿಂದ ಟಕೇಶಿ ಇಝುಮಿ ವಿರುದ್ಧ ಸೋಲುಂಡರು. ಎದುರಾಳಿ ಆಟಕ್ಕೆ ಯೋಗೇಶ್ ಪ್ರತಿ ಹಂತದಲ್ಲೂ ಒದ್ದಾಟ ನಡೆಸ ಬೇಕಾಯಿತು. ಸಾಕಷ್ಟು ತಪ್ಪುಗಳನ್ನು ಎಸೆದರು. ಇದರಿಂದಾಗಿ ಯೋಗೇಶ್ ಸೋಲು ಕಾಣುವಂತಾಯಿತು. ಇನ್ನು 75 ಕೆ.ಜಿ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ಗುರುಪ್ರೀತ್ ಸಿಂಗ್ 1-5 ಅಂಕಗಳ ಅಂತರದಿಂದ ಜಾರ್ಜಿಯಾ ವಿರುದ್ಧ ಹೀನಾಯ ಸೋಲುಂಡರು. 85 ಕೆ.ಜಿ ವಿಭಾಗದ ಪಂದ್ಯದಲ್ಲಿ ರವೀಂದರ್ 0-8 ಅಂಕಗಳ ಅಂತರದಿಂದ ಹಂಗೇರಿಯಾದ ವಿಕ್ಟರ್ ಲೊರಿಂಕಾ ವಿರುದ್ಧ ಸೋಲುಂಡರು. ಪ್ರತಿ ಹೋರಾಟ ನೀಡಿದರೂ ಅಂಕಗಳಿಸಲು ರವೀಂದರ್ ವಿಫಲರಾದರು. ಅನುಭವಿ ವಿಕ್ಟರ್ ಸುಲಭ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದರು.
ಲಾಥೆÌನಿಯಾದ ವಿಲಿಯಸ್ ಲಾರಿನೈಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಹರ್ದೀಪ್ 2-5 ಅಂತರದಿಂದ ಸೋತರು. ಒಟ್ಟಾರೆ ಮೊದಲ ದಿನ ಭಾರತದ ಆಟಗಾರರು ಕಳಪೆ ಆರಂಭ ಪಡೆದರು. 2ನೇ ದಿನವಾದರೂ ಭಾರತ ಪದಕ ಗೆಲ್ಲಬಹುದು ಎನ್ನುವ ನಿರೀಕ್ಷೆ ಭಾರತೀಯ ಅಭಿಮಾನಿಗಳದ್ದಾಗಿದೆ. ಮುಂದಿನ ಸುತ್ತಿನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಭಾರತೀಯರ ವಿರುದ್ಧ ಗೆದ್ದವರ ಪೈಕಿ ಯಾರಾದರೂ ಫೈನಲ್ಗೆ ತಲುಪಿದರೆ ರಿಪಿಚಾಜ್ನಲ್ಲಿ ಆಡಲು
ಸೋತವರಿಗೆ ಮತ್ತೂಂದು ಅವಕಾಶ ಸಿಗಲಿದೆ. ಇಲ್ಲಿ ಗೆದ್ದರೆ ಕಂಚಿನ ಪದಕ ಗೆಲ್ಲಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.