ಬಾಂಗ್ಲಾ ಆತಿಥ್ಯದಲ್ಲಿ ವಿಶ್ವ ಇಲೆವೆನ್-ಏಶ್ಯ ಇಲೆವೆನ್ ಟಿ20 ಮುಖಾಮುಖೀ
Team Udayavani, Jul 26, 2019, 5:26 AM IST
ಢಾಕಾ: ಬಾಂಗ್ಲಾದೇಶದ ಜನಕ ಶೇಖ್ ಮುಜಿಬುರ್ ರೆಹ ಮಾನ್ ಅವರ ಜನ್ಮಶತಮಾನೋತ್ಸ ವದ ಅಂಗವಾಗಿ ವಿಶ್ವ ಇಲೆವೆನ್ ಮತ್ತು ಏಶ್ಯ ಇಲೆವೆನ್ ನಡುವೆ 2 ಟಿ20 ಪಂದ್ಯಗಳನ್ನು ಆಯೋಜಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಮಂಡಳಿ ಅಧ್ಯಕ್ಷ ನಜ್ಮುಲ್ ಹಸನ್ ಗುರುವಾರ ಈ ವಿಷಯವನ್ನು ತಿಳಿಸಿದರು.
ಮುಂದಿನ ವರ್ಷ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾ ನೋತ್ಸವವನ್ನು ಆಚರಿಸಲಾಗುವುದು. ಮಾರ್ಚ್ 18 ಮತ್ತು 21ರಂದು ಮಿರ್ಪುರ್‌ನ “ಶೇರ್ ಎ ಬಾಂಗ್ಲಾ ಸ್ಟೇಡಿಯಂ’ನಲ್ಲಿ ಈ ಪಂದ್ಯಗಳು ನಡೆಯಲಿವೆ.
“ಈ ಸಮಯದಲ್ಲಿ ಕೇವಲ 2 ತಂಡಗಳಷ್ಟೇ ಕ್ರಿಕೆಟ್ ಸರಣಿಯಲ್ಲಿ ನಿರತವಾಗಿರುತ್ತವೆ. ಆದರೆ ಈ ತಂಡಗಳ ನಡುವೆ ಟಿ20 ಪಂದ್ಯಗಳಿ ರುವುದಿಲ್ಲ. ಹೀಗಾಗಿ ಇಲ್ಲಿನ ಟಿ20 ಆಟಗಾರರು ಈ ಕೂಟಕ್ಕೆ ಲಭ್ಯರಿರು ತ್ತಾರೆಂಬ ವಿಶ್ವಾಸವಿದೆ’ ಎಂಬುದಾಗಿ ಹಸನ್ ಹೇಳಿದರು.
ಒಂದು ಪಂದ್ಯಕ್ಕೆ ಮಾನ್ಯತೆ
ಕಳೆದ ವಾರ ನಡೆದ ಐಸಿಸಿ ಸಭೆ ಯಲ್ಲಿ ಹಸನ್ ಈ ಪಂದ್ಯ ಗಳ ಪ್ರಸ್ತಾವ ಮಾಡಿದ್ದರು. ಇವುಗಳಲ್ಲಿ 1 ಪಂದ್ಯ ಕ್ಕಷ್ಟೇ ಅಂತಾರಾಷ್ಟ್ರೀಯ ಮಾನ್ಯತೆ ನೀಡಲಾಗುವುದು ಎಂದು ಐಸಿಸಿ ತಿಳಿಸಿದ್ದಾಗಿ ಹಸನ್ ಹೇಳಿದರು.
ಐಸಿಸಿ ನಿಯಮದಂತೆ ಇಂಥ ಪಂದ್ಯ ಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಲಭಿಸಬೇಕಾದರೆ ಒಂದು ಪೂರ್ಣ ಸದಸ್ಯತ್ವ ಹೊಂದಿರುವ ತಂಡವೊಂದು ಭಾಗವಹಿಸುವುದು ಕಡ್ಡಾಯ. ಆದರೆ ಈ ಸಂದರ್ಭದಲ್ಲಿ ಬಾಂಗ್ಲಾಕ್ಕೆ ವಿಶೇಷ ವಿನಾಯಿತಿ ನೀಡಲಾಗಿದೆ ಎಂದು ಹಸನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ
Saikia: ಬಿಸಿಸಿಐ ಕಾರ್ಯದರ್ಶಿಯಾಗಿ ಮಾಜಿ ಅಸ್ಸಾಂ ಕ್ರಿಕೆಟರ್ ದೇವಜಿತ್ ಸೈಕಿಯಾ ನೇಮಕ
Champions Trophy: ಟೀಂ ಇಂಡಿಯಾಗೆ ಗಾಯದ ಸಂಕಷ್ಟ; ಪ್ರಮುಖ ಬೌಲರ್ ಕೂಟದಿಂದ ಔಟ್!
Team India: ಪಾಂಡ್ಯಾಗೆ ಉಪನಾಯಕತ್ವವೂ ಇಲ್ಲ: ಈ ಆಟಗಾರನಿಗೆ ಹೊಸ ಜವಾಬ್ದಾರಿ
Champions Trophy: ನ್ಯೂಜಿಲ್ಯಾಂಡ್ ತಂಡ ಪ್ರಕಟ; ತಂಡಕ್ಕೆ ಮರಳಿದ ಮೂವರು ಘಟಾನುಘಟಿಗಳು
MUST WATCH
ಹೊಸ ಸೇರ್ಪಡೆ
Chhattisgarh: ಮೂವರು ನಕ್ಸಲರ ಎನ್‌ಕೌಂಟರ್… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್
Ajekar: ಎಷ್ಟು ದಿನ ಟವರ್ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್ ಕೊಡಿ ಸ್ವಾಮಿ!
Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ
Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!
Mangaluru: ನಾಗುರಿ ಬಳಿ ನೀರು ಪೂರೈಕೆ ಪೈಪ್‌ಲೈನ್ ಅಳವಡಿಕೆ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.