ಭಾರತವನ್ನು ಸೋಲಿಸಲು ವಿಶ್ವ ಇಲೆವೆನ್‌ನಿಂದ ಮಾತ್ರ ಸಾಧ್ಯ!
ತವರಿನಂಗಳದಲ್ಲಿ ಸತತ 11 ಟೆಸ್ಟ್ ಸರಣಿ ಗೆದ್ದ ದಾಖಲೆ ; ಪ್ರವಾಸಿಗರಿಗೆ ಭಾರತದಲ್ಲಿ ಟೆಸ್ಟ್ ಗೆಲ್ಲುವುದೇ ಸವಾಲು
Team Udayavani, Oct 27, 2019, 5:34 AM IST
ಹೊಸದಿಲ್ಲಿ: ಭಾರತವೀಗ ತವರಿನಲ್ಲಿ ಸತತ 11 ಟೆಸ್ಟ್ ಸರಣಿ ಗೆದ್ದು ವಿಶ್ವದಾಖಲೆ ನಿರ್ಮಿಸಿರುವುದು ಇತಿಹಾಸ. ಜಿಂಬಾಬ್ವೆ, ಅಫ್ಘಾನಿಸ್ಥಾನಂಥ ಸಾಮಾನ್ಯ ತಂಡಗಳಿರಲಿ, ಬಲಿಷ್ಠ ಪಡೆಯೆಂದೇ ಗುರುತಿಸಲ್ಪಡುತ್ತಿದ್ದ ದಕ್ಷಿಣ ಆಫ್ರಿಕಾ ಕೂಡ ಮೊನ್ನೆ ವೈಟ್‌ವಾಶ್ ಅನು ಭವಿಸಿಕೊಂಡು ತವರಿಗೆ ಮರಳಿತು. ಭಾರತವನ್ನು ಅವರದೇ ಅಂಗಳದಲ್ಲಿ ಮಣಿಸುವುದು, ಸರಣಿ ಗೆಲ್ಲುವುದು ಸುಲಭವಲ್ಲ ಎಂಬುದು ಮತ್ತೂಮ್ಮೆ ಸಾಬೀತಾಯಿತು.
ಭಾರತ ಕೊನೆಯ ಸಲ ತವರಿನಲ್ಲಿ ಟೆಸ್ಟ್ ಸರಣಿ ಸೋತದ್ದು 2012-13ರಷ್ಟು ಹಿಂದೆ, ಇಂಗ್ಲೆಂಡ್ ವಿರುದ್ಧ. ಅನಂತರ ಆಡಿದ ಎಲ್ಲ 11 ಟೆಸ್ಟ್ ಸರಣಿಗಳಲ್ಲೂ ಟೀಮ್ ಇಂಡಿಯಾ ಜಯಭೇರಿ ಮೊಳಗಿಸಿದೆ. ಈ ಅವಧಿಯಲ್ಲಿ ಆಡಿದ 32 ಟೆಸ್ಟ್ ಪಂದ್ಯಗಳಲ್ಲಿ 26 ಗೆಲುವು ಕಂಡಿದೆ. 5 ಡ್ರಾ ಆಗಿದೆ. ಒಂದರಲ್ಲಷ್ಟೇ ಸೋತಿದೆ.
ಈ 26ರಲ್ಲಿ 10 ಗೆಲುವು ಇನ್ನಿಂಗ್ಸ್ ಅಂತರದ್ದಾಗಿದೆ. 150 ಪ್ಲಸ್ ರನ್ ಅಂತರದಲ್ಲಿ 7 ಗೆಲುವು ಸಾಧಿಸಿದೆ. 8 ಪ್ಲಸ್ ವಿಕೆಟ್ ಅಂತರದ 4 ಜಯ ಒಲಿದಿದೆ. ಇದು ತವರಿನಲ್ಲಿ ಭಾರತದ ಟೆಸ್ಟ್ ಪ್ರಭುತ್ವಕ್ಕೆ ಸಾಕ್ಷಿ. ಇಂಗ್ಲೆಂಡ್, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ಬಾಂಗ್ಲಾದೇಶ… ಎಲ್ಲ ತಂಡಗಳೂ ಭಾರತದ ಕೈಯಲ್ಲಿ ಹೊಡೆತ ತಿಂದೇ ಹೋಗಿವೆ. ಹಾಗಾದರೆ ಭಾರತವನ್ನು ಮಣಿಸುವ ಸಾಮರ್ಥ್ಯ ಹೊಂದಿರುವ ತಂಡವಾದರೂ ಯಾವುದು? ಬಹುಶಃ ಇದಕ್ಕೆ ಉತ್ತರವಿಲ್ಲ.
ವಿಶ್ವ ಇಲೆವೆನ್ ಪರಿಕಲ್ಪನೆ
ವಿಶ್ವದ ಎಲ್ಲ ತಂಡಗಳಿಗೂ ಭಾರತದಲ್ಲಿ ಗೆಲುವು ಮರೀಚಿಕೆಯಾಗಿರುವ ಈ ಹೊತ್ತಿನಲ್ಲಿ “ಕ್ರಿಕೆಟ್ ವೆಬ್‌ಸೈಟ್’ ಒಂದು ವಿಭಿನ್ನ ರೀತಿಯಲ್ಲಿ ಆಲೋಚಿಸಿದೆ. ಹೊಸ ಯೋಜನೆಯೊಂದನ್ನು ರೂಪಿಸಿದೆ. ಆದರೆ ಇದು ಕೇವಲ ಕಾಲ್ಪನಿಕ. ವಿಶ್ವದ ಎಲ್ಲ ಟೆಸ್ಟ್ ತಂಡಗಳ ಸರ್ವಶ್ರೇಷ್ಠ ಆಟಗಾರರ ತಂಡವೊಂದನ್ನು ರಚಿಸಿ ಭಾರತದಲ್ಲಿ ಆಡಿಸಿದರಷ್ಟೇ ಅದಕ್ಕೆ ಗೆಲುವು ಒಲಿಯಬಹುದು ಎಂಬುದೊಂದು ಇಲ್ಲಿನ ಲೆಕ್ಕಾಚಾರ. ಹಾಗಾದರೆ ಈ ಆಟಗಾರರ ಪಡೆ ಹೇಗಿರಬಹುದು? ಇಲ್ಲಿ ಯಾರೆಲ್ಲ ಸ್ಥಾನ ಸಂಪಾದಿಸಬಹುದು? ಕುತೂಹಲ ಸಹಜ.
ಕ್ರಿಕೆಟಿಗರ ಇತ್ತೀಚಿನ ಫಾರ್ಮ್, ಭಾರತದಲ್ಲಿ ಆಡಿದ ಅನುಭವ, ಭಾರತೀಯ ಉಪಖಂಡದಲ್ಲಿ ಇವರ ಸಾಧನೆಯನ್ನೆಲ್ಲ ಅವಲೋಕಿಸಿ ವಿಶ್ವ ಇಲೆವೆನ್ ಒಂದನ್ನು ರಚಿಸಲಾಗಿದೆ.
ಇಲ್ಲಿ ಆರಂಭಿಕರಾಗಿ ಆಯ್ಕೆಯಾದವರು ಶ್ರೀಲಂಕಾದ ದಿಮುತ್ ಕರುಣರತ್ನೆ ಮತ್ತು ನ್ಯೂಜಿಲ್ಯಾಂಡಿನ ಟಾಮ್ ಲ್ಯಾಥಂ. ಇವರಲ್ಲಿ ಲ್ಯಾಥಂ ವಿಕೆಟ್ ಕೀಪರ್ ಕೂಡ ಆಗಿದ್ದಾರೆ. ಹಾಗೆಯೇ ಡೇವಿಡ್ ವಾರ್ನರ್, ಅಜರ್ ಅಲಿ, ತಮಿಮ್ ಇಕ್ಬಾಲ್, ಡೀನ್ ಎಲ್ಗರ್ ಇತರ ಓಪನಿಂಗ್ ಆಯ್ಕೆಗಳಾಗಿವೆ.
ವಿಲಿಯಮ್ಸನ್ ನಾಯಕ
ಮಧ್ಯಮ ಕ್ರಮಾಂಕದ ಹುರಿಯಾಳುಗಳೆಂದರೆ ಕೇನ್ ವಿಲಿಯಮ್ಸನ್, ಸ್ಟೀವನ್ ಸ್ಮಿತ್ ಮತ್ತು ಜೋ ರೂಟ್. ಇವರಲ್ಲಿ ವಿಲಿಯಮ್ಸನ್‌ಗೆ ನಾಯಕತ್ವ ನೀಡಲಾಗಿದೆ. ಮಿಡ್ಲ್ ಆರ್ಡರ್‌ನ ಬದಲಿ ಕ್ರಿಕೆಟಿಗರನ್ನಾಗಿ ಮುಶ್ಫಿಕರ್ ರಹೀಂ, ಬಾಬರ್ ಆಜಂ ಅವರನ್ನು ಗುರುತಿಸಲಾಗಿದೆ.
ಪರಿಪೂರ್ಣ ಆಲ್‌ರೌಂಡರ್‌ಗಳಾಗಿ ಕಣಕ್ಕಿಳಿಯಲು ಬೆನ್ ಸ್ಟೋಕ್ಸ್, ಶಕಿಬ್ ಅಲ್ ಹಸನ್ ಅವರಿಗಿಂತ ಉತ್ತಮ ಆಯ್ಕೆ ಇಲ್ಲ.
ಸ್ಟ್ರೈಕ್ ಬೌಲರ್‌ಗಳಿಗೆ ಬಹಳಷ್ಟು ಆಯ್ಕೆಗಳಿವೆ. ಆದರೆ ಪ್ಯಾಟ್ ಕಮಿನ್ಸ್ ಮತ್ತು ಜೋಫÅ ಆರ್ಚರ್ ಅವರಿಗೆ ಮೊದಲ ಆದ್ಯತೆ ನೀಡಲಾಗಿದೆ. ರೇಸ್‌ನಲ್ಲಿರುವ ಉಳಿದವರೆಂದರೆ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ಕಾಗಿಸೊ ರಬಾಡ, ಜಾಸನ್ ಹೋಲ್ಡರ್.
ಭಾರತದ್ದು ಟರ್ನಿಂಗ್ ಟ್ರ್ಯಾಕ್ ಆಗಿರುವ ಕಾರಣ ಸ್ಪಿನ್ನರ್‌ಗಳ ಆಯ್ಕೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಇಲ್ಲಿ ಅವಕಾಶ ಪಡೆದವರು ನಥನ್ ಲಿಯೋನ್, ರಶೀದ್ ಖಾನ್.
ತಾಕತ್ತಿದ್ದರೆ ಈ ವಿಶ್ವ ಇಲೆವೆನ್ ಭಾರತದಲ್ಲಿ ಟೆಸ್ಟ್ ಆಡಲು ಬರಲಿ, ಅವರನ್ನೂ ಬಗ್ಗುಬಡಿ ಯುತ್ತೇವೆ ಎಂದು ಕೊಹ್ಲಿ ಟೀಮ್ ಸವಾಲೆಸೆದರೆ ಅಚ್ಚರಿ ಇಲ್ಲ!
ವಿಶ್ವ ಟೆಸ್ಟ್ ಇಲೆವೆನ್
ದಿಮುತ್ ಕರುಣರತ್ನೆ, ಟಾಮ್ ಲ್ಯಾಥಂ (ವಿ.ಕೀ.), ಕೇನ್ ವಿಲಿಯಮ್ಸನ್ (ನಾಯಕ), ಸ್ಟೀವನ್ ಸ್ಮಿತ್, ಜೋ ರೂಟ್, ಬೆನ್ ಸ್ಟೋಕ್ಸ್, ಶಕಿಬ್ ಅಲ್ ಹಸನ್, ಪ್ಯಾಟ್ ಕಮಿನ್ಸ್, ಜೋಫÅ ಆರ್ಚರ್, ನಥನ್ ಲಿಯೋನ್, ರಶೀದ್ ಖಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.