Archery ಯುವ ವಿಶ್ವ ಚಾಂಪಿಯನ್‌ಶಿಪ್: ಪಾರ್ಥ್ ಸಾಳುಂಕೆಗೆ ಐತಿಹಾಸಿಕ ಚಿನ್ನ
Team Udayavani, Jul 11, 2023, 7:00 AM IST
ಲಿಮೆರಿಕ್ (ಐರ್ಲೆಂಡ್): ಭಾರತದ ಪಾರ್ಥ್ ಸಾಳುಂಕೆ ಯುತ್ ವರ್ಲ್ಡ್ ಚಾಂಪಿಯನ್‌ಶಿಪ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ರಿಕರ್ವ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪುರುಷ ಬಿಲ್ಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಇದರೊಂದಿಗೆ ಈ ಕೂಟದಲ್ಲಿ ಭಾರತ 11 ಪದಕಗಳನ್ನು ಜಯಿಸಿತು. ಇದು ಯುತ್ ವರ್ಲ್ಡ್ ಚಾಂಪಿಯನ್‌ಶಿಪ್ ಆರ್ಚರಿಯಲ್ಲಿ ಭಾರತ ಗೆದ್ದ ಅತ್ಯಧಿಕ ಸಂಖ್ಯೆಯ ಪದಕವಾಗಿದೆ. 6 ಚಿನ್ನ, ಒಂದು ಬೆಳ್ಳಿ ಹಾಗೂ 4 ಕಂಚು ಇದರಲ್ಲಿ ಸೇರಿದೆ. ಒಟ್ಟಾರೆ ಸಾಧನೆಯಲ್ಲಿ ದ್ವಿತೀಯ ಸ್ಥಾನಿಯಾಯಿತು. ಕೊರಿಯಾ ಅಗ್ರಸ್ಥಾನ ಅಲಂಕರಿಸಿತು. ಕೊರಿಯಾ ಗೆದ್ದದ್ದು ಹತ್ತೇ ಪದಕ. ಚಿನ್ನ ಕೂಡ ಭಾರತದಷ್ಟೇ (6). ಆದರೆ ಬೆಳ್ಳಿ ಸಾಧನೆಯಲ್ಲಿ ಮೇಲುಗೈ ಸಾಧಿಸಿತು (4).
ಮಹಾರಾಷ್ಟ್ರದ ಸತಾರಾದವರಾದ 19 ವರ್ಷದ ಪಾರ್ಥ್ ಸಾಳುಂಕೆ ಅಂಡರ್-21 ವಿಭಾಗದ ರಿಕರ್ವ್ ಫೈನಲ್‌ನಲ್ಲಿ ಕೊರಿಯಾದ ಬಿಲ್ಲುಗಾರ, 7ನೇ ಶ್ರೇಯಾಂಕದ ಸಾಂಗ್ ಇಂಜುನ್ ಅವರನ್ನು 7-3 ಅಂತರದಿಂದ ಮಣಿಸಿದರು. ಅಂಡರ್-21 ವನಿತಾ ವಿಭಾಗದ ರಿಕರ್ವ್ ಸಿಂಗಲ್ಸ್‌ನಲ್ಲಿ ಭಾಜಾ ಕೌರ್ ಕಂಚಿನ ಪದಕ ಜಯಿಸಿದರು. ಅವರು ಚೈನೀಸ್ ತೈಪೆಯ ಸು ಸಿನ್ ಯು ವಿರುದ್ಧ 7-1ರಿಂದ ಜಯ ಸಾಧಿಸಿದರು. ಪಾರ್ಥ್ ಸಾಳುಂಕೆ ಸೆಕೆಂಡರಿ ಸ್ಕೂಲ್ ಆಂಗ್ಲ ಅಧ್ಯಾಪಕ ಸುಶಾಂತ್ ಸಾಳುಂಕೆ ಅವರ ಮಗನಾಗಿದ್ದು, ಸೋನಿಪತ್ ಸಾಯ್ ಸೆಂಟರ್‌ನಲ್ಲಿ ರಾಮ್ ಅವಧೇಶ್ ಅವರಲ್ಲಿ ತರಬೇತಿ ಪಡೆದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.