WPL 2025: ವನಿತಾ ಪ್ರೀಮಿಯರ್ ಲೀಗ್ ಹರಾಜಿಗೆ 120 ಆಟಗಾರರ ನೋಂದಣಿ; ಇಲ್ಲಿದೆ ವಿವರ
Team Udayavani, Dec 8, 2024, 1:06 PM IST
ಮುಂಬೈ: ಐಪಿಎಲ್ ಮೆಗಾ ಹರಾಜು ಮುಗಿದು ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಗಟ್ಟಿ ಮಾಡಿಕೊಂಡಿದೆ. ಇದೀಗ ವನಿತಾ ಪ್ರೀಮಿಯರ್ ಲೀಗ್ (WPL) ಹರಾಜಿನ ಸಮಯ. ಡಬ್ಲ್ಯೂಪಿಎಲ್ ನ ಮಿನಿ ಹರಾಜು ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ಎಲ್ಲಾ ಐದು ಫ್ರಾಂಚೈಸಿಗಳು ತಂಡಕ್ಕೆ ಬೇಕಾದ ಆಟಗಾರರ ಆಯ್ಕೆ ಮಾಡಲಿದೆ.
ಡಿಸೆಂಬರ್ 15 ರಂದು ನಡೆಯಲಿರುವ ಡಬ್ಲ್ಯೂಪಿಎಲ್ ಆಟಗಾರರ ಹರಾಜಿನಲ್ಲಿ ಒಟ್ಟು 120 ಆಟಗಾರರು ಹರಾಜಿಗೆ ಒಳಗಾಗಲಿದ್ದಾರೆ ಎಂದು ಬಿಸಿಸಿಐ ಶನಿವಾರ (ಡಿಸೆಂಬರ್ 7) ಖಚಿತಪಡಿಸಿದೆ. 120 ರಲ್ಲಿ, 91 ಭಾರತೀಯರು ಮತ್ತು ಉಳಿದವರು ಸಾಗರೋತ್ತರ ದೇಶದವರು. ಇವರಲ್ಲಿ ಅಸೋಸಿಯೇಟ್ ರಾಷ್ಟ್ರಗಳಿಂದ ಮೂವರು ಸೇರಿದ್ದಾರೆ.
91 ಭಾರತೀಯ ಆಟಗಾರರ ಪೈಕಿ ಒಂಬತ್ತು ಮಂದಿ ಮಾತ್ರ ಕ್ಯಾಪ್ಟ್ ಆಟಗಾರರು. ಸಾಗರೋತ್ತರ ವಿಭಾಗದಲ್ಲಿ 8 ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಹೆಚ್ಚಿನ ಫ್ರಾಂಚೈಸಿಗಳು ತಮ್ಮ ಕೋರ್ ಸ್ಕ್ವಾಡ್ ಉಳಿಸಿಕೊಂಡಿವೆ, ಈ ಮಿನಿ ಹರಾಜಿನ ಮುಂದೆ ಕೇವಲ 19 ಸ್ಲಾಟ್‌ಗಳಿಗೆ (5 ವಿದೇಶಿ ಸೇರಿದಂತೆ) ಬಿಡ್ ನಡೆಯಲಿದೆ.
ಹಾಲಿ ಚಾಂಪಿಯನ್ ಬೆಂಗಳೂರು ತಂಡದ ತನ್ನ ಪರ್ಸ್ ನಲ್ಲಿ 3.25 ಕೋಟಿ ರೂ ಉಳಿಸಿಕೊಂಡಿದೆ. ತಂಡದಲ್ಲಿ ಈಗಾಗಲೇ 14 ಆಟಗಾರರು ಇದ್ದು, ನಾಲ್ಕು ಆಟಗಾರರ ಅಗತ್ಯವಿದೆ.
ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಐಪಿಎಲ್‌ನ ಮುಂದಿನ ಚಕ್ರದ ದಿನಾಂಕಗಳು ಈಗಾಗಲೇ ಬಹಿರಂಗಗೊಂಡಿದ್ದರೂ, ಫೆಬ್ರವರಿಯಲ್ಲಿ ಆರಂಭವಾಗುವ ನಿರೀಕ್ಷೆಯಿರುವ ಡಬ್ಲ್ಯುಪಿಎಲ್‌ನ 2025 ಆವೃತ್ತಿಯ ದಿನಾಂಕಗಳನ್ನು ಬಿಸಿಸಿಐ ಇನ್ನೂ ಖಚಿತಪಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.