WPL; ಡೆಲ್ಲಿಗೆ 25 ರನ್ ಜಯ : ಶರಣಾದ ಆರ್‌ಸಿಬಿ
Team Udayavani, Feb 29, 2024, 11:22 PM IST
ಬೆಂಗಳೂರು: ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ನಿರ್ವ ಹಣೆ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುರುವಾರದ ವನಿತಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು 25 ರನ್ನುಗಳಿಂದ ಸೋಲಿಸಿದೆ.
ಗೆಲ್ಲಲು 195 ರನ್ ಗಳಿಸುವ ಕಠಿನ ಗುರಿ ಪಡೆದ ಆರ್‌ಸಿಬಿ ತಂಡವು ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರ ಹೋರಾಟದ ಅರ್ಧಶತಕದ ಬಳಿಕ ಕುಸಿತ ಕಂಡಿದ್ದರಿಂದ ಅಂತಿಮವಾಗಿ 20 ಓವರ್‌ಗಳಲ್ಲಿ 9 ವಿಕೆಟಿಗೆ 169 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಈ ಮೊದಲು ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ಅವರ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 5 ವಿಕೆಟಿಗೆ 194 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.
ಡೆಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದರೆ ಆರ್‌ಸಿಬಿಗೆ ಇದು ಮೊದಲ ಸೋಲು ಆಗಿದೆ. ಈ ಮೊದಲು ನಡೆದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಜಯ ಸಾಧಿಸಿತ್ತು.
ಮಂಧನಾ ಕ್ರೀಸ್‌ನಲ್ಲಿ ಇರುವಷ್ಟು ಸಮಯ ಆರ್‌ಸಿಬಿ ಗೆಲ್ಲಬಹುದೆಂದು ಭಾವಿಸಲಾಗಿತ್ತು. ಆದರೆ ಅವರು 74 ರನ್ ಗಳಿಸಿ ಕ್ಯಾಪ್ ಎಸೆತದಲ್ಲಿ ಔಟಾಗುವುದರೊದಿಗೆ ಆರ್‌ಸಿಬಿ ಕುಸಿಯತೊಡಗಿತು. ಮಂಧನಾ 43 ಎಸೆತ ಎದುರಿಸಿದ್ದು 10 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದರು.
ಶಫಾಲಿ ಅರ್ಧಶತಕ
ಈ ಮೊದಲು ಶಫಾಲಿ ವರ್ಮ ಅವರ ಅರ್ಧಶತಕ ಮತ್ತು ಅಲಿಸ್ ಕ್ಯಾಪ್ಸೆ ಅವರ 46 ರನ್ ನೆರವಿನಿಂದ ಡೆಲ್ಲಿ ತಂಡವು ಉತ್ತಮ ಮೊತ್ತ ಪೇರಿಸುವಂತಾಯಿತು. ಶಫಾಲಿ ಮತ್ತು ಕ್ಯಾಪ್ಸೆ ಅವರು ದ್ವಿತೀಯ ವಿಕೆಟಿಗೆ 82 ರನ್ನುಗಳ ಜತೆಯಾಟ ನಡೆಸಿದ್ದರು. ಇನ್ನಿಂಗ್ಸ್‌ನ ಅಂತ್ಯದಲ್ಲಿ ಮಾರಿಜಾನೆ ಕ್ಯಾಪ್ ಮತ್ತು ಜೆಸ್ ಜೋನಾಸೆನ್ ಬಿರುಸಿನ ಆಟವಾಡಿ ಐದನೇ ವಿಕೆಟಿಗೆ 58 ರನ್ ಪೇರಿಸಿದ್ದರು.
ಯುಪಿಗೆ ಗುಜರಾತ್ ಸವಾಲು
ಡಬ್ಲ್ಯುಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿರುವ ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ಶುಕ್ರವಾರ ಚಿನ್ನಸ್ವಾಮಿಯಲ್ಲಿ ಮುಖಾಮುಖೀಯಾಗಲಿವೆ. ಪ್ರಸಕ್ತ ಕೂಟದಲ್ಲಿ ಎರಡೂ ತಂಡಗಳು ಮೊದಲ ಬಾರಿ ಹೋರಾಡುತ್ತಿವೆ. ಕಳೆದ ಬಾರಿಯ ಕೂಟದಲ್ಲಿ ಗುಜರಾತ್ ವಿರುದ್ಧ ಯುಪಿ ಮೇಲುಗೈ ಹೊಂದಿತ್ತು.
ಪ್ರಸ್ತುತ ಕೂಟದಲ್ಲಿ ಯುಪಿ ಒಟ್ಟು ಮೂರು ಪಂದ್ಯಗಳನ್ನಾಡಿ 1 ಜಯ ಸಾಧಿಸಿ, 2 ಪಂದ್ಯಗಳಲ್ಲಿ ಸೋತಿದೆ. ಗುಜರಾತ್ ಎರಡು ಪಂದ್ಯಗಳನ್ನಾಡಿ ಎರಡರಲ್ಲೂ ಸೋತಿದೆ. ಗುಜರಾತ್ ಪರ ಹರ್ಲೀನ್ ದೇವಲ್ ಕಳೆದ 10 ಪಂದ್ಯಗಳಲ್ಲಿ 232 ರನ್, ಆಶ್ಲೇ ಗಾರ್ಡನರ್ 10 ಪಂದ್ಯಗಳಲ್ಲಿ 226 ರನ್ ಗಳಿಸಿದ್ದಾರೆ. ತಂಡದ ಪರ ಗಾರ್ಡನರ್ ಬೌಲಿಂಗ್‌ನಲ್ಲೂ ಮಿಂಚಿ 11 ವಿಕೆಟ್ ಪಡೆದಿದ್ದಾರೆ. ತನುಜಾ ಕನ್ವರ್ 8 ವಿಕೆಟ್ ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
MUST WATCH
ಹೊಸ ಸೇರ್ಪಡೆ
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.