Wrestlers ಮೌನ ಪ್ರತಿಜ್ಞೆ; ಮನೆಗಳಿಗೆ ಮರಳಿದ ಹೋರಾಟ ನಿರತರು
ಸಾಕ್ಷಿ ಮಲಿಕ್ ಮಾತ್ರ ದೆಹಲಿಯಲ್ಲಿ.. ಉಳಿದವರು ಹರಿಯಾಣಕ್ಕೆ
Team Udayavani, May 31, 2023, 8:20 PM IST
ಹರಿದ್ವಾರ: ಸಾಕ್ಷಿ ಮಲಿಕ್ ಹೊರತುಪಡಿಸಿ ಪ್ರತಿಭಟನಾ ನಿರತ ಕುಸ್ತಿಪಟುಗಳು ಹರಿಯಾಣದ ತಮ್ಮ ಮನೆಗಳಿಗೆ ಮರಳಿದ್ದಾರೆ ಮತ್ತು ಮೌನ ಪ್ರತಿಜ್ಞೆಯಿಂದಾಗಿ ಹರಿದ್ವಾರದಲ್ಲಿ ಕಾಯುತ್ತಿದ್ದ ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ ಎಂದು ಪ್ರತಿಭಟನಾ ಗುಂಪಿನ ಸದಸ್ಯರೊಬ್ಬರು ಬುಧವಾರ ತಿಳಿಸಿದ್ದಾರೆ.
ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಪ್ರಿಲ್ 23 ರಂದು ಜಂತರ್ ಮಂತರ್‌ನಲ್ಲಿ ಖ್ಯಾತ ಕುಸ್ತಿ ಪಟುಗಳು ತಮ್ಮ ಆಂದೋಲನವನ್ನು ಪುನರಾರಂಭಿಸಿದ್ದರು ಮತ್ತು ಮೇ 28 ರವರೆಗೆ ಅಲ್ಲಿಯೇ ಇದ್ದರು. ನೂತನ್ ಸಂಸತ್ ಭವನ ಉದ್ಘಾಟನಾ ದಿನದಂದು ಪೊಲೀಸರು ವಶಕ್ಕೆ ಪಡೆದ ನಂತರ, ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿದರು. ಕುಸ್ತಿಪಟುಗಳನ್ನು ಜಂತರ್ ಮಂತರ್‌ಗೆ ಹಿಂತಿರುಗಿಸಲು ಅನುಮತಿಸುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು.ಕುಸ್ತಿಪಟುಗಳ ವಿರುದ್ಧ ಪೊಲೀಸರ ಕ್ರಮಕ್ಕೆ ವಿವಿಧ ವಲಯಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ : Wrestlers: ಆರೋಪ ಸಾಬೀತಾದರೆ ನೇಣಿಗೆ ಶರಣಾಗುತ್ತೇನೆ- ಬ್ರಿಜ್ ಭೂಷಣ್ ಸಿಂಗ್
ಮಂಗಳವಾರ, ಅವರು ತಮ್ಮ ಪದಕಗಳನ್ನು ಪವಿತ್ರ ಗಂಗಾ ನದಿಯಲ್ಲಿ ಮುಳುಗಿಸುವುದಾಗಿ ಬೆದರಿಕೆ ಹಾಕಿದರು ಆದರೆ ರೈತ ಮುಖಂಡರು ಆ ರೀತಿ ಹೆಜ್ಜೆ ಇಡದಂತೆ ತಡೆದರು. ಬೆಳಗ್ಗೆಯಿಂದ ಅಳುತ್ತಿದ್ದರು. ಜಿಲ್ಲಾ ಮಟ್ಟದಲ್ಲಿ ಗೆದ್ದ ಪದಕವನ್ನೂ ಬಿಸಾಡುವುದು ಸುಲಭವಲ್ಲ ಅಂತಾರಾಷ್ಟ್ರೀಯ ದೊಡ್ಡ ಪದಕಗಳನ್ನು ಎಸೆಯಲು ಸಿದ್ಧರಾಗಿದ್ದರು. ಅವರ ಬಾಯಿಂದ ಒಂದು ಪದವೂ ಹೊರಡಲಿಲ್ಲ, ”ಎಂದು ಪ್ರತಿಭಟನಾಕಾರ ಗುಂಪಿನ ಸದಸ್ಯರೊಬ್ಬರು ಹೇಳಿದರು.
“ಮಂಗಳವಾರ ಮೌನ ಪ್ರತಿಜ್ಞೆ ಮಾಡಿದರು ಮತ್ತು ಅದಕ್ಕಾಗಿಯೇ ಅವರು ಹರಿದ್ವಾರದಲ್ಲಿ ಯಾರೊಂದಿಗೂ ಮಾತನಾಡಲಿಲ್ಲ. ಎಲ್ಲರೂ ತಮ್ಮ ತಮ್ಮ ಮನೆಗೆ ಮರಳಿದ್ದಾರೆ ಆದರೆ ಸಾಕ್ಷಿ ಇನ್ನೂ ದೆಹಲಿಯಲ್ಲಿದ್ದಾರೆ, ”ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.