![Tollywood: ರಾತ್ರೋರಾತ್ರಿ ಖ್ಯಾತ ಟಾಲಿವುಡ್ ನಟ ಪೊಲೀಸ್ ವಶಕ್ಕೆ](https://www.udayavani.com/wp-content/uploads/2025/02/2-34-415x249.jpg)
![Tollywood: ರಾತ್ರೋರಾತ್ರಿ ಖ್ಯಾತ ಟಾಲಿವುಡ್ ನಟ ಪೊಲೀಸ್ ವಶಕ್ಕೆ](https://www.udayavani.com/wp-content/uploads/2025/02/2-34-415x249.jpg)
Team Udayavani, Aug 3, 2018, 11:04 AM IST
ಮ್ಯಾಂಚೆಸ್ಟರ್: ಭಾರತದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಮ್ಯಾಂಚೆಸ್ಟರ್‌ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದರು. ಇದಕ್ಕೆ ಸಂಬಂಧಿಸಿದ ಚಿತ್ರವೊಂದನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಜತೆಗೆ ಅವರು ಬೇಗನೇ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಬಿಸಿಸಿಐ ವೈದ್ಯಕೀಯ ತಂಡವೂ ಜತೆಯಲ್ಲಿತ್ತು.
ಈ ವರ್ಷದ ಆರಂಭ ದಿಂದಲೂ ವೃದ್ಧಿಮಾನ್ ಸಾಹಾ ನಾನಾ ಸಮಸ್ಯೆಯಿಂದ ಸುದ್ದಿಗೆ ಗ್ರಾಸವಾಗಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಮಂಡಿ ನೋವು, ಬಳಿಕ ಹೆಬ್ಬೆರಳಿನ ಗಾಯಕ್ಕೆ ಸಿಲುಕಿದ್ದರು. ಇದರಿಂದ ಐಪಿಎಲ್‌ನಲ್ಲಿ ಕೆಲವೇ ಪಂದ್ಯಗಳನ್ನಾಡಿದ ಸಾಹಾ, ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನೂ ತಪ್ಪಿಸಿ ಕೊಳ್ಳಬೇಕಾಯಿತು. ಬಳಿಕ ಭುಜದ ಸಮಸ್ಯೆ ತೀವ್ರಗೊಂಡಿತು. ಹೀಗಾಗಿ ಇಂಗ್ಲೆಂಡ್ ಪ್ರವಾಸದಿಂದಲೂ ಹೊರಗುಳಿ ಯಬೇಕಾಯಿತು.
ವೈದ್ಯರ ಸೂಚನೆಯಂತೆ ಸಾಹಾ ಆರರಿಂದ ಎಂಟು ತಿಂಗಳ ಕಾಲ ವಿಶ್ರಾಂತಿಯಲ್ಲಿರಬೇಕಾಗುತ್ತದೆ. ಆದರೆ ಕೇವಲ ಟೆಸ್ಟ್ ತಂಡಗಳಲ್ಲಷ್ಟೇ ಕಾಣಿಸಿಕೊಳ್ಳುವ ಸಾಹಾಗೆ ಪುನರಾಗಮನ ಎಂಬುದು ದೊಡ್ಡ ಸವಾಲಾಗಿ ಕಾಡುವುದರಲ್ಲಿ ಅನುಮಾನವಿಲ್ಲ.
Tollywood: ರಾತ್ರೋರಾತ್ರಿ ಖ್ಯಾತ ಟಾಲಿವುಡ್ ನಟ ಪೊಲೀಸ್ ವಶಕ್ಕೆ
Udupi: ಬೈಕುಗಳ ಮುಖಾಮುಖಿ… ಓರ್ವ ಸವಾರ ಸ್ಥಳದಲ್ಲೇ ಮೃತ್ಯು
Bollywood: ʼಛಾವಾʼ ಕ್ರೇಜ್.. ಸಂಭಾಜಿ ಮಹಾರಾಜನಂತೆ ಕುದುರೆ ಏರಿ ಥಿಯೇಟರ್‌ಗೆ ಬಂದ ವ್ಯಕ್ತಿ
Plane flips: ಲ್ಯಾಂಡಿಂಗ್ ವೇಳೆ ರನ್ ವೇಯಲ್ಲೇ ಪಲ್ಟಿ ಹೊಡೆದ ವಿಮಾನ… ಹಲವರಿಗೆ ಗಾಯ
Social Media Virals: ಸೋಶಿಯಲ್ ಮೀಡಿಯಾ ತಂದುಕೊಟ್ಟ “ಸ್ಟಾರ್ ಪಟ್ಟ’
You seem to have an Ad Blocker on.
To continue reading, please turn it off or whitelist Udayavani.