ಎಲಿನಾ ಸ್ವಿಟೋಲಿನಾಗೆ ಸಿಂಗಲ್ಸ್ ಪ್ರಶಸ್ತಿ
Team Udayavani, Oct 29, 2018, 10:45 AM IST
ಸಿಂಗಾಪುರ: ವಿಶ್ವದ 3ನೇ ಶ್ರೇಯಾಂಕಿತ ಜೋಡಿಯಾದ ಟೈಮಿಯಾ ಬಬೋಸ್-ಕ್ರಿಸ್ಟಿನಾ ಲಡೆನೋವಿಕ್ ಡಬ್ಲ್ಯುಟಿಎ ಫೈನಲ್ಸ್ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. “ಸಿಂಗಾಪುರ್ ಇಂಡೋರ್ ಸ್ಟೇಡಿಯಂ’ನಲ್ಲಿ ರವಿವಾರ ನಡೆದ ಫೈನಲ್‌ನಲ್ಲಿ ಇವರು ವಿಶ್ವದ ನಂಬರ್ ವನ್ ಜೋಡಿ ಎಂಬ ಖ್ಯಾತಿಯ ಬಾಬೊರಾ ಕ್ರೆಸಿಕೋವಾ-ಕ್ಯಾಥರಿನಾ ಸಿನಿಯಕೋವಾ ವಿರುದ್ಧ 6-4, 7-5 ಅಂತರದ ಗೆಲುವು ಸಾಧಿಸಿದರು.
ಇದರೊಂದಿಗೆ ಟೈಮಿಯಾ ಬಬೋಸ್ ಈ ಪ್ರಶಸ್ತಿಯನ್ನು ಉಳಿಸಿಕೊಂಡಂತಾಗಿದೆ. ಕಳೆದ ವರ್ಷ ಇವರು ಆ್ಯಂಡ್ರಿಯಾ ಲವಕೋವಾ ಜತೆಗೂಡಿ ಚಾಂಪಿಯನ್ ಆಗಿದ್ದರು.
ಸ್ವಿಟೋಲಿನಾಗೆ ಜಯ
ವನಿತಾ ಸಿಂಗಲ್ಸ್‌ನಲ್ಲಿ ಉಕ್ರೇನಿನ ಎಲಿನಾ ಸ್ವಿಟೋಲಿನಾ ಪ್ರಶಸ್ತಿ ಎತ್ತಿದರು. 3 ಸೆಟ್‌ಗಳ ಜಿದ್ದಾಜಿದ್ದಿ ಕಾಳಗದಲ್ಲಿ ಅವರು ಅಮೆರಿಕದ ಸ್ಲೋನ್ ಸ್ಟೀಫನ್ಸ್‌ಗೆ 3-6, 6-2, 6-2 ಅಂತರದಿಂದ ಆಘಾತವಿಕ್ಕಿದರು. ಇದು ಸ್ವಿಟೋಲಿನಾ ಗೆದ್ದ ಮೊದಲ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.