WTC 2025: ಲಂಕಾ ವಿರುದ್ದ ಸರಣಿ ಗೆದ್ದು ಡಬ್ಲ್ಯೂಟಿಸಿ ಫೈನಲ್ ಸನಿಹ ಬಂದ ದ.ಆಫ್ರಿಕಾ
Team Udayavani, Dec 9, 2024, 6:45 PM IST
ದುಬೈ: ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿಜಯ ಸಾಧಿಸಿದೆ. ಸೋಮವಾರ (ಡಿ.09) ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) ಫೈನಲ್ ಸನಿಹಕ್ಕೆ ತಲುಪಿದೆ.
ಭಾರತದ ವಿರುದ್ಧ 3-0 ಅಂತರದ ಸರಣಿ ಜಯಗಳಿಸಿದ ನಂತರ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಸತತ ಎರಡು ಪಂದ್ಯ ಸೋತ ನ್ಯೂಜಿಲೆಂಡ್ ತಮ್ಮ ಡಬ್ಲ್ಯೂಟಿಸಿ ಫೈನಲ್ ಅವಕಾಶಗಳನ್ನು ಹಾಳುಮಾಡಿಕೊಂಡಿದೆ.
ಆಸ್ಟ್ರೇಲಿಯಾ ಮತ್ತು ಭಾರತವು ಫೈನಲ್ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿದ್ದು, ಇತ್ತ ದಕ್ಷಿಣ ಆಫ್ರಿಕಾ ಜಾಗವನ್ನು ಭದ್ರ ಪಡಿಸುತ್ತಿದೆ. ಲಂಕಾ ವಿರುದ್ದದ ಗೆಲುವಿನ ಬಳಿಕ ದಕ್ಷಿಣ ಆಫ್ರಿಕಾ 63.33 ಅಂಕಗಳೊಂದಿಗೆ ಡಬ್ಲ್ಯೂಟಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅಸ್ಟ್ರೇಲಿಯಾ ತಂಡವು 60.71 ಅಂಕಗಳೊಂದಿಗೆ ಎರಡನೇ ಸ್ಥಾನ, 57.29 ಅಂಕಗಳೊಂದಿಗೆ ಭಾರತ ಮೂರನೇ ಸ್ಥಾನದಲ್ಲಿದೆ.
ತಮ್ಮ ಮೊದಲ ಐದು ಪಂದ್ಯಗಳಲ್ಲಿ ಕೇವಲ ಏಕಾಂಗಿ ಗೆಲುವಿನ ನಂತರ ತಮ್ಮ ಐದನೇ ಸತತ ಗೆಲುವಿನೊಂದಿಗೆ ತಮ್ಮ ಡಬ್ಲ್ಯೂಟಿಸಿ ಅಭಿಯಾನವನ್ನು ದ.ಆಫ್ರಿಕಾ ಸ್ಮರಣೀಯವಾಗಿಸಿದೆ. ಪಾಕಿಸ್ತಾನದ ವಿರುದ್ಧದ ಸರಣಿಯಲ್ಲಿ ಒಂದು ಗೆಲುವು ಸಾಧಿಸಿದರೆ ದ.ಆಫ್ರಿಕಾ ಲಾರ್ಡ್ಸ್ ಟಿಕೆಟ್ ಪಡೆಯುತ್ತಾರೆ. ಅಲ್ಲದೆ ಎರಡು ಗೆಲುವುಗಳು ಅವರನ್ನು ಅಗ್ರಸ್ಥಾನದಲ್ಲಿ ಕೂರಿಸಬಹುದು. ಒಂದು ವೇಳೆ ಪಾಕಿಸ್ತಾನದ ವಿರುದ್ಧ ಎರಡೂ ಟೆಸ್ಟ್‌ಗಳನ್ನು ಸೋತರೆ ರೇಸ್ ನಿಂದ ಹೊರಬೀಳುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.