INDvsENG; ವಿಶಾಖಪಟ್ಟಣದಲ್ಲಿ ಜೈಸ್ವಾಲ್ ಯಶಸ್ವಿ ಡಬಲ್ ಸೆಂಚುರಿ
Team Udayavani, Feb 3, 2024, 10:37 AM IST
ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇಂದು ದ್ವಿಶತಕ ಪೂರೈಸಿದ್ದಾರೆ. ತಮ್ಮ ಟೆಸ್ಟ್ ವೃತ್ತಿ ಜೀವನದ ದ್ವಿತೀಯ ಶತಕವನ್ನು ಜೈಸ್ವಾಲ್ ಪ್ರಥಮ ದ್ವಿಶತಕವಾಗಿ ಮಾರ್ಪಾಡು ಮಾಡಿದರು.
ಜೈಸ್ವಾಲ್ ಮೊದಲ ದಿನದಾಟದ ಅಂತ್ಯಕ್ಕೆ 179 ರನ್ ಗಳಿಸಿ ಅಜೇಯರಾಗಿದ್ದರು. ಇಂದು ಅದೇ ಫಾರ್ಮ್ ಮುಂದುವರಿಸಿದ ಅವರು 277 ಎಸೆತಗಳಲ್ಲಿ ಇನ್ನೂರರ ಗಡಿ ದಾಟಿದರು. ಸಿಕ್ಸರ್ ಮೂಲಕ ಶತಕ ಪೂರೈಸಿದ್ದ ಎಡಗೈ ಬ್ಯಾಟರ್, ಸತತ ಸಿಕ್ಸರ್ ಮತ್ತು ಫೋರ್ ಮೂಲಕ ದ್ವಿಶತಕ ಪೂರೈಸಿದರು.
290 ಎಸೆತಗಳಲ್ಲಿ 209 ರನ್ ಗಳಿಸಿದ್ದ ವೇಳೆ ಜೈಸ್ವಾಲ್ ಅವರು ವೇಗಿ ಜೇಮ್ಸ್ ಆ್ಯಂಡರ್ಸನ್ ಎಸೆತಕ್ಕೆ ಬಲಿಯಾದರು. ಈ ಇನ್ನಿಂಗ್ಸ್ ನಲ್ಲಿ ಅವರು 17 ಬೌಂಡರಿ ಮತ್ತು ಏಳು ಸಿಕ್ಸರ್ ಬಾರಿಸಿದರು. ಈ ವೇಳೆ ಭಾರತ 106.5 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 383 ರನ್ ಗಳಿಸಿದೆ.
ಯಶಸ್ವಿ ದಾಖಲೆಗಳು
ಟೆಸ್ಟ್‌ನಲ್ಲಿ ಭಾರತದ ಪರ 200 ರನ್ ಗಳಿಸಿದ ಕಿರಿಯ ಆಟಗಾರ
21 ವ 35 ದಿನ: ವಿನೋದ್ ಕಾಂಬ್ಲಿ 224 vs ಇಂಗ್ಲೆಂಡ್ ಮುಂಬೈ 1993
21ವ 55 ದಿನ ವಿನೋದ್ ಕಾಂಬ್ಲಿ 227 vs ಜಿಂಬಾಬ್ವೆ ಡೆಲ್ಲಿ 1993
21ವ 283 ದಿನ ಸುನಿಲ್ ಗವಾಸ್ಕರ್ 220 vs ವೆಸ್ಟ್ ಇಂಡಿಸ್ ಪೋರ್ಟ್ ಆಫ್ ಸ್ಪೇನ್ 1971
22ವ 37ದಿನ ಯಶಸ್ವಿ ಜೈಸ್ವಾಲ್ 209 vs ಇಂಗ್ಲೆಂಡ್ ವೈಜಾಗ್ 2024
ಟೆಸ್ಟ್ ನಲ್ಲಿ ಭಾರತದ ಪರ ಎಡಗೈ ಬ್ಯಾಟರ್‌ಗಳಿಂದ ದ್ವಿಶತಕ
239 ಸೌರವ್ ಗಂಗೂಲಿ vs ಪಾಕ್ ಬೆಂಗಳೂರು 2007
227 ವಿನೋದ್ ಕಾಂಬ್ಲಿ vs ಜಿಂಬಾಬ್ವೆ ಡೆಲ್ಲಿ 1993
224 ವಿನೋದ್ ಕಾಂಬ್ಲಿ vs ಇಂಗ್ಲೆಂಡ್ ಮುಂಬೈ 1993
206 ಗೌತಮ್ ಗಂಭೀರ್ vs ಆಸ್ ದೆಹಲಿ 2006
209 ವೈ ಜೈಸ್ವಾಲ್ vs ಇಂಗ್ಲೆಂಡ್ ವೈಜಾಗ್ 2024
ಭಾರತದ ಪರ ಕಡಿಮೆ ಇನ್ನಿಂಗ್ಸ್ ನಲ್ಲಿ ಚೊಚ್ಚಲ ದ್ವಿಶತಕ
3 ಕರುಣ್ ನಾಯರ್
4 ವಿನೋದ್ ಕಾಂಬ್ಳಿ
8 ಸುನಿಲ್ ಗವಾಸ್ಕರ್/ ಮಯಾಂಕ್ ಅಗರ್ವಾಲ್
9 ಚೇತೇಶ್ವರ ಪೂಜಾರ
10 ಯಶಸ್ವಿ ಜೈಸ್ವಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.