ಯೋಧಾ-ಬೆಂಗಾಲ್ ಬಿಗ್ ಫೈಟ್ ನಿರೀಕ್ಷೆ
Team Udayavani, Jul 24, 2019, 6:22 AM IST
ಹೈದರಾಬಾದ್: ಪ್ರೊ ಕಬಡ್ಡಿ 7ನೇ ಆವೃತಿಯ ಮಂಗಳವಾರ ವಿಶ್ರಾಂತಿಯ ಬಳಿಕ ಮತ್ತೆ ಹೋರಾಟ ಆರಂಭವಾಗಿದೆ. ಬುಧವಾರದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ಬೆಂಗಾಲ್ ವಾರಿಯರ್ ಹೋರಾಡಲು ಸಜ್ಜಾಗಿವೆೆ. ಈ ಪಂದ್ಯದಲ್ಲಿ ಇತ್ತಂಡಗಳು ಗೆಲುವಿನ ಶುಭಾರಂಭಗೈಯಲು ಹಾತೊರೆಯುತ್ತಿವೆ.
ಈ ಬಾರಿ ಇತ್ತಂಡಗಳಲ್ಲಿಯೂ ಕೆಲವು ಆಟಗಾರರು ಬದಲಾವಣೆಯಾಗಿದ್ದು ಕಳೆದ ಬಾರಿ ತೋರಿದ ಪ್ರದರ್ಶನದ ಮೇಲೆ ತಂಡದ ಬಲವನ್ನು ಹೇಳಲು ಸಾಧ್ಯವಿಲ್ಲ. ಆದರೂ ಬಲಾಬಲದ ಲೆಕ್ಕಾಚಾರದಲ್ಲಿ ಇತ್ತಂಡಗಳು ಸಮಾನ ಆಟಗಾರರನ್ನು ಹೊಂದಿದ್ದು ಬಲಿಷ್ಠವಾಗಿವೆ.
ಬೆಂಗಾಲ್‌ಗೆ ಮಣಿಂದರ್ ಬಲ
ನಾಯಕ ಮಣಿಂದರ್ ಸಿಂಗ್ ಅವರ ರೈಡಿಂಗ್ ಸ್ಕಿಲ್ ಬೆಂಗಾಲ್ ವಾರಿಯರ್ಗೆ ಹೆಚ್ಚಿನ ಬಲ ನೀಡಲಿದೆ. ನೀಲ ಕಾಲಿನ ಮಣಿಂದರ್ ಎದುರಾಳಿ ಕೋಟೆಯಿಂದ ಅಂಕ ಕದಿಯುದರಲ್ಲಿ ಬಲು ಫೇಮಸ್. ಕಳೆದ ಋತುವಿನಲ್ಲಿ ಬೆಂಗಾಲ್ ಪರ ಆಡಿದ್ದ ಅವರು ಸೂಪರ್ ರೈಡ್ ಮೂಲಕ ಹಲವು ಬಾರಿ ಗೆಲುವು ತಂದುಕೊಟ್ಟಿದ್ದರು. ಈ ಬಾರಿಯೂ ತಂಡ ಇವರ ರೈಡಿಂಗ್ ಬಲವನ್ನೇ ನಂಬಿಕೊಂಡಿದೆ.
ಕಳೆದ ಬಾರಿ ತಮಿಳ್ ತಲೈವಾಸ್ ಪರ ಆಡಿದ್ದ ಕನ್ನಡಿಗ ಸುಕೇಶ್ ಹೆಗ್ಡೆ ಬೆಂಗಾಲ್ ತಂಡದಲ್ಲಿದ್ದಾರೆ. ಕೆ. ಪ್ರಪಂಚನ್ ಕೂಡ ಬೆಂಗಾಲ್ ತಂಡದಲ್ಲಿದ್ದು ರೈಡಿಂಗ್ ವಿಭಾಗದಲ್ಲಿ ಹೆಚ್ಚಿನ ಬಲ ತುಂಬಿ ದಂತಾಗಿದೆ. ಪ್ರೊ ಕಬಡ್ಡಿ ಕೂಟದ ಸೂಪರ್ ಟ್ಯಾಕಲ್ ಸ್ಪೆಶಲಿಸ್ಟ್‌ಗಳಲ್ಲಿ ಒಬ್ಬರಾದ ಜೀವ ಕುಮಾರ್ ಬೆಂಗಾಲ್ ತಂಡದಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್.
ಯೋಧಾ ಸಮರ್ಥ ತಂಡ
ಯುಪಿ ಯೋಧಾ ಬೆಂಗಾಲ್ ತಂಡಕ್ಕಿಂತ ಎಲ್ಲ ವಿಭಾಗದಲ್ಲೂ ಸಮರ್ಥ ಎನ್ನಲಡ್ಡಿಯಿಲ್ಲ. ರೈಡಿಂಗ್, ಡಿಫೆಂಡಿಂಗ್ ವಿಭಾಗದಲ್ಲಿ ಸಮರ್ಥ ಆಟಗಾರರನ್ನು ಹೊಂದಿದೆ. ಕಳೆದ ಬಾರಿ ಪ್ರೊ ಕಬಡ್ಡಿ ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರ ಮೋನು ಗೋಯತ್ ಈ ಬಾರಿ ಯುಪಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ರೈಡಿಂಗ್ ವಿಭಾಗದಲ್ಲಿ ರಿಷಾಂಕ್ ದೇವಾಡಿಗ, ಮೋನು ಗೋಯತ್ ತಂಡಕ್ಕೆ ಆಸರೆಯಾದರೆ ನಾಯಕ ನಿತೇಶ್ ಕುಮಾರ್ ಡಿಫೆಂಡಿಂಗ್‌ನಲ್ಲಿ ಎದುರಾಳಿ ರೈಡರ್‌ಗಳನ್ನು ರೈಟ್ ಕಾರ್ನರ್‌ನಲ್ಲಿ ಕಟ್ಟಿಕಾಕುವ ತಂತ್ರಗಾರಿಕೆ ಹೊಂದಿದ್ದಾರೆ.
ಗೆಲುವಿನ ಶುಭಾರಂಭಕ್ಕೆ ಡೆಲ್ಲಿ ಕಾತುರ
ಆಡಿದ ಎರಡು ಪಂದ್ಯಗಳಲ್ಲಿ ಸೋತಿರುವ ಟೈಟಾನ್ಸ್ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ ಬಲಿಷ್ಠ ಡಿಫೆಂಡಿಂಗ್ ತಂಡವಾದ ದಬಾಂಗ್ ಡೆಲ್ಲಿ ವಿರುದ್ಧ ಗೆಲುವು ಸಾಧಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಡೆಲ್ಲಿ ತಂಡದ ಬಲವೇ ಡಿಫೆಂಡಿಂಗ್, ಜೋಗಿಂದರ್ ಶರ್ಮಾ, ವಿಶಾಲ್ ಮಾನೆ, ಡೈವಿಂಗ್ ಆ್ಯಂಕಲ್ ಹೋಲ್ಡ್ ಸ್ಪೆಶಲಿಸ್ಟ್ ರವೀಂದ್ರ ಫೆಹಲ್ ಅವರ ಡಿಫೆಂಡಿಂಗ್ ತಂತ್ರಗಾರಿಕೆಯ ಮುಂದೆ ಎಷ್ಟೇ ಸ್ಟಾರ್ ರೈಡರ್‌ಗಳು ಒಂದು ಕ್ಷಣ ಕಕ್ಕಾಬಿಕ್ಕಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಡೆಲ್ಲಿ ಪರ ಈ ಬಾರಿ ಸ್ಟಾರ್ ರೈಡರ್ ಕಾಣಿಸಿಕೊಂಡಿಲ್ಲ. ಮಿರಾಜ್ ಶೇಖ್ ಹೊರತುಪಡಿಸಿದರೆ ಮತ್ತೆಲ್ಲ ರೈಡರ್ ಹೊಸಬರು.
ಕಳೆದ ಬಾರಿಯು ಮುಂಬಾ ತಂಡದಲ್ಲಿದ್ದ ಸ್ಟಾರ್ ರೈಡರ್ ಸಿದ್ಧಾರ್ಥ್ ದೇಸಾಯಿ ಈ ಬಾರಿ ಟೈಟಾನ್ಸ್ ತಂಡದಲ್ಲಿದ್ದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ಆಡಿದ 2 ಪಂದ್ಯದಲ್ಲಿಯೂ ಅವರು ನಿರೀಕ್ಷಿತ ಮಟ್ಟದಲ್ಲಿ ಆಡಿಲ್ಲ. ಇದರಿಂದ ಇತರ ಸದಸ್ಯರೂ ಧೈರ್ಯ ಕಳೆದುಕೊಳ್ಳುವಂತಾಗಿದೆ.ವಿಶಾಲ್ ಭಾರದ್ವಾಜ್, ರಜನೀಸ್ ನಿರೀಕ್ಷಿತ ಪ್ರದರ್ಶನ ನೀಡದಿರುವುದು ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ.
ಕನ್ನಡಿಗರ ಮುಖಾಮುಖೀ
ಕನ್ನಡಿಗರಾದ ರಿಷಾಂಕ್ ದೇವಾಡಿಗ ಮತ್ತು ಸುಕೇಶ್ ಹೆಗ್ಡೆ ಪಂದ್ಯದ ಪ್ರಮುಖ ಆಕರ್ಷಣೆ. ಇಬ್ಬರೂ ರೈಡಿಂಗ್‌ನಲ್ಲಿ ಎದುರಾಳಿ ಕೋಟೆಗೆ ನುಗ್ಗಿ ಅಂಕ ಪಡೆಯುವುದರಲ್ಲಿ ನಿಸ್ಸೀಮರು. ಆದರೆ ಇವರಲ್ಲಿ ಯಾರು ಹೆಚ್ಚು ಅಂಕ ಗಳಿಸುತ್ತಾರೆ ಎಂಬುದನ್ನು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.