ಬೀದಿಯಲ್ಲೇ ಬೆಳಗಿತು ಯೂತ್ ಒಲಿಂಪಿಕ್ಸ್
Team Udayavani, Oct 8, 2018, 11:19 AM IST
ಬ್ಯೂನಸ್ ಐರೆಸ್ (ಆರ್ಜೆಂಟೀನಾ): ಶನಿವಾರ ರಾತ್ರಿ ಆರ್ಜೆಂಟೀನಾದ ಬ್ಯೂನಸ್ ಐರೆಸ್ ನಗರದ ಬೀದಿಗಳೆಲ್ಲವೂ ಭವ್ಯ ಕ್ರೀಡಾಲೋಕವೊಂದಕ್ಕೆ ತೆರೆದುಕೊಂಡಿದ್ದವು. ಯಾವ ಬೀದಿಗೆ ಹೋದರೂ ಅಲ್ಲಿ ಕ್ರೀಡಾ ವೈಭವ ಮೇಳೈಸುತ್ತಿತ್ತು. ಜನರೆಲ್ಲ ಈ ಕ್ರೀಡಾ ದೃಶ್ಯಾವಳಿಯನ್ನು ಕಂಡು ಪುಳಕಗೊಂಡಿದ್ದರು.
ಇದು 3ನೇ ಸಮ್ಮರ್ “ಯೂತ್ ಒಲಿಂಪಿಕ್ ಗೇಮ್ಸ್’ನ ಉದ್ಘಾಟನೆಯ ಝಲಕ್. ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭವೊಂದು ಸ್ಟೇಡಿಯಂನಾಚೆ ಬಂದು, ಸಾರ್ವಜನಿಕ ಬೀದಿಗಳಲ್ಲಿ ಚಾಲನೆ ಪಡೆದಿತ್ತು. ಇದಕ್ಕೆ ಸುಮಾರು 2 ಲಕ್ಷದಷ್ಟು ದಾಖಲೆ ಸಂಖ್ಯೆಯ ಸಾರ್ವಜನಿಕರು ಸಾಕ್ಷಿಯಾದರು.
ಆಕಾಶದಿಂದ ಇಳಿದು ಬಂದ ಒಲಿಂಪಿಕ್ಸ್ ರಿಂಗ್ಸ್, ಇದರ ಮೇಲೆ ಕಲಾಕಾರರ ಮೈನವಿರೇಳಿಸುವ ಪ್ರದರ್ಶನ, ಅಪಾರ್ಟ್‌ಮೆಂಟ್‌ಗಳ ಬಾಲ್ಕನಿಗಳಲ್ಲಿ ಅನಾವರಣಗೊಂಡ ರಂಗುರಂಗಿನ ನೃತ್ಯಲೋಕ, ಊಹೆಗೂ ನಿಲುಕದ ಸಾಂಸ್ಕೃತಿಕ ಕಾರ್ಯಕ್ರಮಗಳು, ಇದನ್ನು ಬೀದಿಯಲ್ಲಿ ನಿಂತು ವೀಕ್ಷಿಸುತ್ತ ಸಂಭ್ರಮಿಸಿದ ಸಾರ್ವಜನಿಕರು… ಒಟ್ಟಾರೆ ಇದೊಂದು ಎಂದೂ ಕಾಣದ ವಿಭಿನ್ನ ಕ್ರೀಡಾ ಸಮಾರಂಭಕ್ಕೆ ಸಾಕ್ಷಿಯಾಗಿತ್ತು.
ಈ ನಡುವೆ ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರಿಂದ ಯೂತ್ ಒಲಿಂಪಿಕ್ಸ್ ಉದ್ಘಾಟನೆ ಘೋಷಣೆಯಾದೊಡನೆ ಅಭಿಮಾನಿಗಳ ಉದ್ಘೋಷ ಇಡೀ ಬ್ಯೂನಸ್ ಐರೆಸ್ ನಗರದಲ್ಲಿ ಮಾರ್ದನಿಸಿತು.ಅಂತಿಮ ಹಂತವಾಗಿ ಆರ್ಜೆಂಟೀನಾದ ಯುವ ಆ್ಯತ್ಲೀಟ್‌ಗಳ ಕೈಗಳನ್ನು ಬದಲಾಯಿಸಿಕೊಂಡು ಬಂದ ಕ್ರೀಡಾಜ್ಯೋತಿ ಬೆಳಗಲ್ಪಟ್ಟಿತು. ಅ. 18ರ ತನಕ ಇದು ಪ್ರಜ್ವಲಿಸುತ್ತಲೇ ಇರುತ್ತದೆ.
ಭಾರತದ 47 ಸ್ಪರ್ಧಿಗಳು
206 ದೇಶಗಳ 4 ಸಾವಿರದಷ್ಟು ಆ್ಯತ್ಲೀಟ್‌ಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ಭಾರತವೂ ಸೇರಿದೆ. 13 ಕ್ರೀಡೆಗಳಲ್ಲಿ ದೇಶದ 47 ಸ್ಪರ್ಧಿಗಳು ಪ್ರತಿನಿಧಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಮನು ಬಾಕರ್ ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.