ಯೂತ್ ಒಲಿಂಪಿಕ್ಸ್: 5 ಸಾವಿರ ಮೀ. ನಡಿಗೆ; ಪನ್ವಾರ್‌ಗೆ ಬೆಳ್ಳಿ
Team Udayavani, Oct 17, 2018, 8:05 AM IST
ಹೊಸದಿಲ್ಲಿ: ಭಾರತದ ಸೂರಜ್ ಪನ್ವಾರ್ ಅವರು ಯೂತ್ ಒಲಿಂಪಿಕ್ ಗೇಮ್ಸ್‌ನ ಪುರುಷರ 5 ಸಾವಿರ ಮೀ. ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತ ಆ್ಯತ್ಲೆಟಿಕ್ಸ್ ವಿಭಾಗದಲ್ಲಿ ಪದಕ ಖಾತೆ ತೆರೆಯಿತು. ಪನ್ವಾರ್ ಎರಡನೇ ಸುತ್ತಿನ ಸ್ಪರ್ಧೆಯಲ್ಲಿ 20 ನಿಮಿಷ ಮತ್ತು 35.87 ಸೆ.ನಲ್ಲಿ ಗುರಿ ತಲುಪಿ ಸಮಗ್ರವಾಗಿ ಎರಡನೇ ಸ್ಥಾನ ಪಡೆದರು. ಹೊಸ ಮಾದರಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಫೈನಲ್ಸ್ ಇರುವುದಿಲ್ಲ.
ಎರಡು ಸುತ್ತುಗಳಲ್ಲಿ ಸ್ಪರ್ಧೆ
ಆ್ಯತ್ಲೆಟಿಕ್ಸ್‌ನ ಎಲ್ಲ ಸ್ಪರ್ಧೆಗಳು (4 ಕಿ.ಮೀ. ಕ್ರಾಸ್ ಕಂಟ್ರಿ ಹೊರತು ಪಡಿಸಿ) ಎರಡು ಸುತ್ತುಗಳಲ್ಲಿ ನಡೆಯಲಿವೆ. ಎರಡೂ ಸುತ್ತುಗಳ ಫಲಿತಾಂಶ ಪರಿಶೀಲಿಸಿ ವಿಜೇತರ ಪಟ್ಟಿ ಪ್ರಕಟಿಸಲಾಗುತ್ತದೆ. 17ರ ಹರೆಯದ ಪನ್ವಾರ್ ಮೊದಲ ಸುತ್ತಿನಲ್ಲಿ 20:23.30ಸೆ.ನಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನ ಪಡೆದಿದ್ದರು. ಇಕ್ವಾಡೋರ್‌ನ ಪಾಟಿನ್ ಆಸ್ಕರ್ ಮೊದಲ ಸ್ಥಾನ (20:13.69 ಸೆ.) ಪಡೆದಿದ್ದರು. ಆಸ್ಕರ್ ದ್ವಿತೀಯ ಸುತ್ತಿನಲ್ಲಿ ದ್ವಿತೀಯ ಸ್ಥಾನ (20:38.17 ಸೆ. ) ಪಡೆದರೂ ಒಟ್ಟಾರೆ ನಿರ್ವಹಣೆಯ ಆಧಾರದಲ್ಲಿ ಚಿನ್ನ ಗೆದ್ದರು.ಪನ್ವಾರ್ 2 ಸುತ್ತುಗಳ ಹೋರಾಟ ದಲ್ಲಿ ಒಟ್ಟು 40:59.17 ಸೆ. ತೆಗೆದುಕೊಂಡಿದ್ದರು. ಇದು ಆಸ್ಕರ್ ತೆಗೆದುಕೊಂಡ ಸಮಯಕ್ಕಿಂತ (40:51.86 ಸೆ.) 7 ನಿಮಿಷ ಹೆಚ್ಚು. ಹಾಗಾಗಿ ಪನ್ವಾರ್ ಬೆಳ್ಳಿ ಪಡೆದರೆ ಪ್ಯೂರ್ಟೊರಿಕೊದ ಜಾನ್ ಮೊರೆಯು ಕಂಚು ಗೆದ್ದರು.
ಇದು ಈ ಬಾರಿಯ ಗೇಮ್ಸ್‌ನ ಆ್ಯತ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಮತ್ತು ಸಮಗ್ರವಾಗಿ ಮೂರನೇ ಪದಕವಾಗಿದೆ. 2010ರ ಉದ್ಘಾಟನಾ ಯೂತ್ ಒಲಿಂಪಿಕ್ಸ್‌ನಲ್ಲಿ ಪುರುಷರ ಡಿಸ್ಕಸ್‌ನಲ್ಲಿ ಅರ್ಜುನ್ ಮತ್ತು 400 ಮೀ. ಹರ್ಡಲ್ಸ್‌ನಲ್ಲಿ ದುಗೇìಶ್ ಕುಮಾರ್ ತಲಾ ಬೆಳ್ಳಿಯ ಪದಕ ಜಯಿಸಿದ್ದರು. ಈಗ ಇನ್ನೊಂದು ಬೆಳ್ಳಿಯ ಪದಕವೇ ಸೇರ್ಪಡೆಯಾಗಿದೆ.
ಶ್ರೇಷ್ಠ ಅನುಭವ
ಇದೊಂದು ಶ್ರೇಷ್ಠ ಅನುಭವ. ಪದಕ ಗೆದ್ದಿರುವುದಕ್ಕೆ ಸಂತೋಷವಾಗುತ್ತಿದೆ. ಗೇಮ್ಸ್‌ಗಾಗಿ ಕಠಿನ ಅಭ್ಯಾಸ ನಡೆಸಿದ್ದೆ. ಇದು ನನ್ನ ಪಾಲಿನ ಮೊದಲ ಪದಕವಾಗಿದೆ. ನನ್ನ ಮುಂದಿನ ಗೋಲು ಸೀನಿಯರ್ ಮಟ್ಟದಲ್ಲೂ ಇನ್ನಷು ಉತ್ತಮ ಸಾಧನೆ ಗೈದು ಪದಕ ಗೆಲ್ಲಲು ಪ್ರಯತ್ನಿಸುವುದು ಆಗಿದೆ.
ಸೂರಜ್ ಪನ್ವಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.