ಐಪಿಎಲ್ ಹರಾಜು ಪಟ್ಟಿಯಲ್ಲಿ 1,122 ಆಟಗಾರರು
Team Udayavani, Jan 14, 2018, 6:20 AM IST
ಮುಂಬಯಿ: ಈ ಬಾರಿಯ ಐಪಿಎಲ್ ಹರಾಜಿಗೆ 1,122 ಆಟಗಾರರ ಹೆಸರು ಸೇರಿಕೊಂಡಿದೆ. ಐಪಿಎಲ್‌ನ ಬೃಹತ್ ಹರಾಜುಪಟ್ಟಿಗಳಲ್ಲಿ ಇದೂ ಒಂದೆಂದು ಗುರುತಿಸಲ್ಪಟ್ಟಿದೆ. ಇದರಲ್ಲಿ 778 ಮಂದಿ ಭಾರತೀಯ ಆಟಗಾರರಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ 838 ಆಟಗಾರರೂ ಹರಾಜು ವ್ಯಾಪ್ತಿಗೆ ಬರಲಿದ್ದಾರೆ. 281 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಅನುಭವಿಗಳಾಗಿದ್ದಾರೆ. ಅಸೋಸಿಯೇಟ್ ರಾಷ್ಟ್ರಗಳ ಮೂವರಿದ್ದಾರೆ.
ವಿಶ್ವದ ಹಲವು ರಾಷ್ಟ್ರಗಳ ಖ್ಯಾತ ನಾಮ ಆಟಗಾರರು ಸ್ಥಾನ ಪಡೆದಿದ್ದಾರೆ. ಮಹತ್ವದ ವಿಷಯವೆಂದರೆ, ಇಂಗ್ಲೆಂಡ್‌ನ ಖ್ಯಾತ ಆಟಗಾರ ಜೋ ರೂಟ್ ಕೂಡ ಈ ಹರಾಜು ಪಟ್ಟಿಯನ್ನು ಪ್ರವೇಶಿಸಿರುವುದು. ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಈ ಪಟ್ಟಿಯಲ್ಲಿರುವ ಪ್ರಮುಖ ವಿದೇಶಿ ಆಟಗಾರರು. ಫ್ರಾಂಚೈಸಿಗಳು ಇವರಿಬ್ಬರನ್ನು ಕೊಳ್ಳಲು ಮುಗಿಬಿದ್ದರೆ ಅಚ್ಚರಿಯಿಲ್ಲ. ಭಾರತೀಯರ ಪೈಕಿ ಗೌತಮ್ ಗಂಭೀರ್, ಆರ್. ಅಶ್ವಿನ್, ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ, ಶಿಖರ್ ಧವನ್ ದುಬಾರಿ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಮೂಡಿಸಿದ್ದಾರೆ. ಹಾಗೆಯೇ ಬ್ರೆಂಡನ್ ಮೆಕಲಮ್, ರಶೀದ್ ಖಾನ್, ಎವೋನ್ ಮಾರ್ಗನ್ ಕೂಡ ಭಾರೀ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆ ಇದೆ.
ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್, ಬೆನ್ ಸ್ಟೋಕ್ಸ್ ಸಹಿತ 36 ಕ್ರಿಕೆಟಿಗರ ಮೂಲ ಬೆಲೆ ಗರಿಷ್ಠ 2 ಕೋ.ರೂ. ಆಗಿರುವುದು ಗಮನಾರ್ಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Sullia: ಜಾಕ್‌ವೆಲ್ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.