ಪುತ್ರನ ಜತೆ ಸಂಭ್ರಮ ಹಂಚಿಕೊಂಡ ಯುವರಾಜ್ ಸಿಂಗ್
Team Udayavani, Sep 20, 2022, 7:23 AM IST
ಮೊಹಾಲಿ: ಸರಿಯಾಗಿ 15 ವರ್ಷಗಳ ಹಿಂದೆ (ಸೆ. 19, 2007) ಉದ್ಘಾಟನಾ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡಿನ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದು ಓವರಿನಲ್ಲಿ ಸತ ಆರು ಸಿಕ್ಸರ್ ಸಿಡಿಸಿ ಇತಿಹಾಸ ನಿರ್ಮಿಸಿದ ಸಂಸತದ ಕ್ಷಣಗಳನ್ನು ಸೋಮವಾರ ಯುವರಾಜ್ ಸಿಂಗ್ ಅವರು ತಮ್ಮ 8 ತಿಂಗಳ ಪುತ್ರ ಓರಿಯನ್ ಕೀಚ್ ಸಿಂಗ್ ಜತೆ ಟಿವಿಯಲ್ಲಿ ವೀಕ್ಷಿಸಿ ಆನಂದಿಸಿದರು.
ಈ ಸಂಭ್ರಮದ ಕ್ಷಣಗಳನ್ನು ಸವಿಯಲು ಇದಕ್ಕಿಂತ ಉತ್ತಮ ಜತೆಗಾರನನ್ನು ಹುಡುಕಲು ನನ್ನಿಂದ ಸಾಧ್ಯವಿಲ್ಲ ಎಂದವರು ಟ್ವೀಟ್ ಮಾಡಿದ್ದಾರೆ.
2007ರ ಈ ದಿನ ಯುವರಾಜ್ ಟಿ20 ಪಂದ್ಯವೊಂದರ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಆಟಗಾರ ಎಂದೆನಿಸಿಕೊಂಡಿದ್ದರು. ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಏಕದಿನ ಪಂದ್ಯವೊಂದರಲ್ಲಿ ಈ ಸಾಧನೆ ಮಾಡಿದ್ದರು.
Couldn’t have found a better partner to watch this together with after 15 years ? ? #15YearsOfSixSixes #ThisDayThatYear #Throwback #MotivationalMonday #GetUpAndDoItAgain #SixSixes #OnThisDay pic.twitter.com/jlU3RR0TmQ
— Yuvraj Singh (@YUVSTRONG12) September 19, 2022
ಟಿ20 ವಿಶ್ವಕಪ್‌ನಲ್ಲಿ ಡರ್ಬಾನ್‌ನಲ್ಲಿ ನಡೆದ ತನ್ನ ಎರಡನೇ ಸೂಪರ್ ಏಯ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 18 ಓವರ್‌ಗಳಲ್ಲಿ 3 ವಿಕೆಟಿಗೆ 171 ರನ್ ಗಳಿಸಿತ್ತು. ಆಲ್‌ರೌಂಡರ್ ಆ್ಯಂಡ್ರೊ ಫ್ಲಿಂಟಾಫ್ ಜತೆ ಮಾತಿನ ಚಕಮಕಿ ನಡೆದ ಬಳಿಕ ಯುವರಾಜ್ ಅವರಿಂದ ಸ್ಫೋಟಕ ಆಟ ಪ್ರದರ್ಶನಗೊಂಡಿತು. 19ನೇ ಓವರ್ ಎಸೆಯಲು ಬಂದ ಬ್ರಾಡ್ ಅವರನ್ನು ದಂಡಿಸಿದರು. ಆರೂ ಎಸೆತಗಳನ್ನು (6,6,6,6,6,6) ಸಿಕ್ಸರ್‌ಗೆ ತಳ್ಳಿ ಪರಾಕ್ರಮ ಮೆರೆದರು. ಈ ಸಾಧನೆ ವೇಳೆ ಯುವರಾಜ್ ಅವರಿಂದ ಅರ್ಧಶತಕ ಪೂರ್ತಿಗೊಂಡಿತು. ಟಿ20ಯಲ್ಲಿ ಕೇವಲ 12 ಎಸೆತಗಳಲ್ಲಿ ಅತೀವೇಗದ ಅರ್ಧಶತಕ ಪೂರ್ತಿಗೊಳಿಸಿದ ಸಾಧಕರಾಗಿ ಮೂಡಿಬಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.