ಯುವಿ… ಕೋಟ್ಯಂತರ ಭಾರತೀಯರ ಸ್ಫೂರ್ತಿ
Team Udayavani, Jun 11, 2019, 5:46 AM IST
ಭಾರತೀಯ ಕ್ರಿಕೆಟಿನ ಅಸಾಮಾನ್ಯ ಪ್ರತಿಭೆಯೊಂದು ತೆರೆಮರೆಗೆ ಸರಿದಿದೆ. ವಿಶ್ವ ಕ್ರಿಕೆಟಿನಲ್ಲಿ ಸಿಕ್ಸರ್ ಕಿಂಗ್ ಆಗಿ ಮೆರೆದಾಡಿದ, ಮಾರಕ ಕ್ಯಾನ್ಸರ್ ಅನ್ನೇ ಗೆದ್ದು ಬಂದ, ಭಾರತದ 2 ವಿಶ್ವಕಪ್ ಗೆಲುವುಗಳ ರೂವಾರಿಯೆನಿಸಿಕೊಂಡ ಅದ್ವಿತೀಯ ಹೋರಾಟಗಾರ ಯುವರಾಜ್ ಸಿಂಗ್ ಆಟ ಇನ್ನು ನೋಡಲು ಸಿಗುವುದಿಲ್ಲ.
ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬ ರಾಗಿ, ಅತ್ಯುತ್ತಮ ಎಡಗೈ ಬ್ಯಾಟ್ಸ್‌ಮನ್, ಆರಂಭದ ದಿನಗಳಲ್ಲಿ ಅಷ್ಟೇ ಉತ್ತಮ ಕ್ಷೇತ್ರರಕ್ಷಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಯುವಿ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದು, ಮತ್ತೆ ತಂಡಕ್ಕೆ ಕಮ್ ಬ್ಯಾಕ್ ಮಾಡಿರುವುದು ಅವರಲ್ಲಿನ ಶ್ರೇಷ್ಠ ಹೋರಾಟಗಾರ ಇದ್ದ ಎನ್ನುವುದಕ್ಕೆ ನಿದರ್ಶನ.
ಯುವರಾಜ್ ಸಿಂಗ್ ಬದುಕು ಕೇವಲ ಕ್ರಿಕೆಟಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇವರು ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿ. ಬದುಕಿನಲ್ಲೂ, ಕ್ರಿಕೆಟ್ ಅಂಗಳದಲ್ಲೂ ಸಾಕಷ್ಟು ಏರಿಳಿತ ಕಂಡರೂ, ಯಾವುದಕ್ಕೂ ಅಂಜದೇ, ದಿಟ್ಟತನ ತೋರಿ ಸೈ ಎನಿಸಿಕೊಂಡಿರುವುದು ಸಾಮಾನ್ಯ ಸಾಧನೆಯೇನಲ್ಲ.
ಮಹೋನ್ನತ ಗೆಲುವಿನ ರೂವಾರಿ
ಯುವರಾಜ್ ಭಾರತೀಯ ಕ್ರಿಕೆಟ್ ತಂಡದ ಹಲವು ಮಹೋನ್ನತ ಗೆಲುವುಗಳಲ್ಲಿ ಪ್ರಮುಖ ರೂವಾರಿಯಾಗಿ ಗುರುತಿಸಿಕೊಂಡವರು. ಅದರಲ್ಲೂ 2011ರ ವಿಶ್ವಕಪ್ ಸಾಹಸವಂತೂ ಅಮೋಘ.
ಮಾರಕ ಕ್ಯಾನ್ಸರ್ ದಾಳಿ ನಡೆಸಿದರೂ ಹೊರ ಜಗತ್ತಿಗೆ ತಿಳಿಯದಂತೆ ಗೌಪ್ಯ ವಾಗಿಟ್ಟುಕೊಂಡು, ವೀರೋಚಿತ ಆಲ್‌ರೌಂಡರ್ ಆಟದ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಯೊಂದಿಗೆ ಭಾರತಕ್ಕೆ ದ್ವಿತೀಯ ವಿಶ್ವಕಪ್ ತಂದುಕೊಡುವಲ್ಲಿ ಯುವಿ ಪಾತ್ರ ಮುಖ್ಯವಾಗಿತ್ತು.
ಕೆಣಕಿದ್ದಕ್ಕೆ ಸಿಕ್ಸರ್ ಉತ್ತರ!
ಕ್ರಿಕೆಟ್ ಅಂಗಳದಲ್ಲಿ ದಾಖಲಾದ ಸಾಧನೆಗಳು ಸಾವಿರ ಕಾಲಕ್ಕೂ ಮಾಸುವುದಿಲ್ಲ. ಅದರಲ್ಲೂ 2007ರ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಯುವಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸುವುದರೊಂದಿಗೆ, ತನ್ನನ್ನು ಕೆಣಕಿದ ಆ್ಯಂಡ್ರೂé ಫ್ಲಿಂಟಾಫ್ಗೆ ತಿರುಗೇಟು ನೀಡಿರುವುದು ಇನ್ನೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.