ತಾನು ಸತ್ತರೂ ಭಾರತ ಕಪ್ ಗೆಲ್ಲಲಿ ಎಂದು ಪ್ರಾರ್ಥಿಸಿದ್ದೆ: ಯುವಿ ವಿಶ್ವಕಪ್ ಶತಕದ ಮೆಲುಕು
Team Udayavani, Mar 21, 2020, 5:14 PM IST
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ 2011ರ ಮಾರ್ಚ್ 20 ಮರೆಯಲಾಗದ ದಿನ. ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಸ್ಥಿತಿಯಲ್ಲಿ ಅನಾರೋಗ್ಯದ ನಡುವೆಯೂ ಯುವರಾಜ್ ಸಿಂಗ್ ಸ್ಫೋಟಕ ಪ್ರದರ್ಶನ ನೀಡಿ, ಶತಕ ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ದಿನ ಇದಾಗಿದೆ.
ಚೆನ್ನೈಯಲ್ಲಿ ನಡೆದ ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಅನಾರೋಗ್ಯದ ನಡುವೆಯೂ ವಿಂಡೀಸ್ ವಿರುದ್ಧ “ಮ್ಯಾಚ್ ವಿನ್ನಿಂಗ್’ ಪ್ರದರ್ಶನ ನೀಡಿದ್ದರು. ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹಂತದಲ್ಲಿ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಆಧಾರವಾಗಿ ನಿಂತಿದ್ದರು. ಈ ಜೋಡಿ 3ನೇ ವಿಕೆಟಿಗೆ 122 ರನ್ ಪೇರಿಸಿತು. 123 ಎಸೆತಗಳನ್ನು ಎದುರಿಸಿದ್ದ ಯುವರಾಜ್ ಸಿಂಗ್ 113 ರನ್ ಗಳಿಸಿದ್ದರು. ಇದು ವಿಶ್ವಕಪ್‌ನಲ್ಲಿ ಯುವರಾಜ್ ಬಾರಿಸಿದ ಮೊದಲ ಹಾಗೂ ಏಕೈಕ ಶತಕವಾಗಿದೆ. ಯುವಿ ಸಾಹಸದಿಂದ ಭಾರತ 268 ರನ್ ಪೇರಿಸುವಲ್ಲಿ ಯಶಸ್ವಿಯಾಗಿತ್ತು.
ಬೌಲಿಂಗ್‌ನಲ್ಲೂ ವಿಂಚಿದ ಯುವಿ ಕೇವಲ 18 ರನ್ ನೀಡಿ 2 ವಿಕೆಟ್ ಉರುಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಭಾರತ ಈ ಪಂದ್ಯದಲ್ಲಿ 80 ರನ್‌ಗಳ ಗೆಲುವು ಸಾಧಿಸಿತು.
ನಾನು ಸತ್ತರೂ ಭಾರತ ಕಪ್ ಗೆಲ್ಲಲಿ
2014ರಲ್ಲಿ “ಆಜ್ ತಕ್’ ಖಾಸಗಿ ವಾಹಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಯುವರಾಜ್ ಸಿಂಗ್ ಈ ಪಂದ್ಯದ ಕುರಿತು ಮಾತನಾಡಿದ್ದರು. ಪಂದ್ಯದ ಬಳಿಕ ನಾನು ಸತ್ತರೂ ಭಾರತ ವಿಶ್ವಕಪ್ ಗೆಲ್ಲಲಿ ಎಂಬುದು ತನ್ನ ಹಾರೈಕೆ ಆಗಿತ್ತು ಎಂದಿದ್ದರು.
“ವಿಶ್ವಕಪ್‌ನಲ್ಲಿ ಶತಕ ಬಾರಿಸಬೇಕೆಂದು ನಾನು ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಆದರೆ, ನಾನು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರಿಂದ ಇದು ಸಾಧ್ಯವಾಗಿರಲಿಲ್ಲ. ಕೊನೆಗೂ ಆಸೆ ಈಡೇರಿತು. ಚೆನ್ನೈನಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದ ನನಗೆ ವಾಂತಿ ಆಗಿರಬಹುದು ಎಂದು ಮೊದಲು ಭಾವಿಸಿದ್ದೆ. ಏನೇ ಆಗಲಿ, ಆ ಪಂದ್ಯದ ಬಳಿಕ ನಾನು ಸತ್ತರೂ ಭಾರತ ವಿಶ್ವಕಪ್ ಗೆಲ್ಲಲಿ ಎಂದು ಎಂದು ದೇವರಲ್ಲಿ ಪ್ರಾರ್ಥಿಸಿದ್ದೆ ಎಂದು ಯುವಿ ಹೇಳಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.