ಬಾಲಿವುಡ್ ನಟಿ ಸಾಗರಿಕಾ ಜತೆ ಜಹೀರ್ ನಿಶ್ಚಿತಾರ್ಥ
Team Udayavani, Apr 26, 2017, 2:09 PM IST
ಹೊಸದಿಲ್ಲಿ: ಭಾರತದ ಮಾಜಿ ಪೇಸ್ ಬೌಲರ್, ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕನಾಗಿರುವ ಜಹೀರ್ ಖಾನ್, ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸ್ವತಃ ಜಹೀರ್ ಅವರೇ ಇದನ್ನು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಜತೆಗೆ ಒಂದು ಸಾಗರಿಕಾ ಜತೆ ಇರುವ ಚಿತ್ರವೊಂದನ್ನೂ ಅಪ್‌ಲೋಡ್ ಮಾಡಿದ್ದಾರೆ. ‘ನಿಮ್ಮ ಪತ್ನಿಯ ಆಯ್ಕೆಗಳ ಬಗ್ಗೆ ನಗಬೇಡಿ. ಯಾಕೆಂದರೆ ನೀವೂ ಅವುಗಳಲ್ಲೊಬ್ಬರು. ಜೀವನಪರ್ಯಂತ ಎಂಗೇಜ್ಡ್…!’ ಎಂದು ಜಹೀರ್ ಖಾನ್ ಟ್ವೀಟ್ ಮಾಡಿದ್ದಾರೆ.
ಎಡಗೈ ಬೌಲರ್ ಆಗಿರುವ 38ರ ಹರೆಯದ ಜಹೀರ್ ಖಾನ್ 200 ಏಕದಿನ ಪಂದ್ಯಗಳಲ್ಲಿ 282 ವಿಕೆಟ್ ಹಾಗೂ 92 ಟೆಸ್ಟ್‌ಗಳಲ್ಲಿ 311 ವಿಕೆಟ್ ಉರುಳಿಸಿದ ಸಾಧಕ. 2 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟಿಗೆ ಅವರು ವಿದಾಯ ಹೇಳಿದ್ದರು. ಮಹಾರಾಷ್ಟ್ರದ ಕೊಲ್ಹಾಪುರದವರಾದ 31ರ ಹರೆಯದ ಸಾಗರಿಕಾ ಘಾಜ್ಡ್ ‘ಚಕ್ ದೇ ಇಂಡಿಯಾ’ ಚಿತ್ರದ ಪ್ರೀತಿ ಸಬರ್ವಾಲ್ ಪಾತ್ರದ ಮೂಲಕ ಜನಮನ ಸೆಳೆದಿದ್ದರು. ಈ ಚಿತ್ರದ ಅತ್ಯುತ್ತಮ ಪೋಷಕ ನಟನೆಗಾಗಿ ‘ಸ್ಕ್ರೀನ್ ಅವಾರ್ಡ್’ ಕೂಡ ಪಡೆದಿದ್ದರು. ಸಾಗರಿಕಾ ಅವರ ಇತ್ತೀಚಿನ ಚಿತ್ರ ಅಪರ್ಣಾ ಸಿಂಗ್ ನಿರ್ದೇಶನದ ‘ಇರಾದಾ’.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.