Zimbabwe; ಕ್ಯಾನ್ಸರ್ ಹೋರಾಟದಲ್ಲಿ ಕೊನೆಯುಸಿರೆಳೆದ ದಿಗ್ಗಜ ಆಲ್ ರೌಂಡರ್ ಹೀತ್ ಸ್ಟ್ರೀಕ್
Team Udayavani, Sep 3, 2023, 12:52 PM IST
ಹರಾರೆ: ಜಿಂಬಾಬ್ವೆ ತಂಡದ ಮಾಜಿ ನಾಯಕ, ದಿಗ್ಗಜ ಆಲೌ ರೌಂಡರ್ ಹೀತ್ ಸ್ಟ್ರೀಕ್ ಅವರು ಇಂದು (ಸೆ.03) ಕೊನೆಯುಸಿರೆಳೆದಿದ್ದಾರೆ. ಹಲವು ಕಾಲದಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದ ಸ್ಟ್ರೀಕ್ ಇಂದು ಅಸುನೀಗಿದ್ದಾರೆ ಎಂದು ವರದಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಹೀತ್ ಸ್ಟ್ರೀಕ್ ಅವರು ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹರಿದಾಡಿತ್ತು. ಬಳಿಕ ಮಾಜಿ ಜಿಂಬಾಬ್ವೆ ಆಟಗಾರ ಹೆನ್ರಿ ಒಲಾಂಗ ಅವರು ಸ್ಪಷ್ಟನೆ ನೀಡಿ ಸುದ್ದಿಯನ್ನು ಅಲ್ಲಗಳೆದಿದ್ದರು. ಆದರೆ ಇದೀಗ ಸ್ಟ್ರೀಕ್ ನಿಧನದ ಸುದ್ದಿಯನ್ನು ಅವರ ಪತ್ನಿಯೇ ಖಚಿತಪಡಿಸಿದ್ದಾರೆ.
ಈ ಸುದ್ದಿಯನ್ನು ಖಚಿತಪಡಿಸಲು ಪತ್ನಿ ನಾಡಿನ್ ಸ್ಟ್ರೀಕ್ ತಮ್ಮ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
“ಈ ಮುಂಜಾನೆ, 3 ನೇ ಸೆಪ್ಟೆಂಬರ್ 2023 ರ ಭಾನುವಾರದಂದು, ನನ್ನ ಜೀವನದ ಅತ್ಯಂತ ದೊಡ್ಡ ಪ್ರೀತಿ ಮತ್ತು ನನ್ನ ಸುಂದರ ಮಕ್ಕಳ ತಂದೆ, ತಮ್ಮ ಮನೆಯಿಂದ ದೇವತೆಗಳ ಜೊತೆಯಲ್ಲಿರಲು ಕೊಂಡೊಯ್ಯಲ್ಪಟ್ಟರು. ಅಲ್ಲಿ ಅವರು ತಮ್ಮ ಕೊನೆಯ ದಿನಗಳನ್ನು ಕಳೆಯಲು ಬಯಸಿದ್ದರು. ಅವರು ಏಕಾಂಗಿಯಾಗಿ ಹೋಗಲಿಲ್ಲ, ಅವರು ಪ್ರೀತಿ ಮತ್ತು ಶಾಂತಿಯಿಂದ ಆವರಿಸಿದದ್ದರು” ಎಂದು ಅವರು ಬರೆದಿದ್ದಾರೆ.
ಸ್ಟ್ರೀಕ್ ಜಿಂಬಾಬ್ವೆ ಅವರ ಆಡಿದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. 65 ಟೆಸ್ಟ್‌ಗಳು ಮತ್ತು 189 ಏಕದಿನ ಪಂದ್ಯಗಳಲ್ಲಿ, ಸ್ಟ್ರೀಕ್ 455 ವಿಕೆಟ್ ಗಳನ್ನು ಪಡೆದಿದ್ದಾರೆ. 23 ಬಾರಿ ನಾಲ್ಕು-ವಿಕೆಟ್ ಗಳ ಮತ್ತು ಎಂಟು ಐದು-ವಿಕೆಟ್ ಗಳ ಗೊಂಚಲು ಪಡೆದ ಸಾಧನೆ ಅವರದ್ದು.
ಬ್ಯಾಟಿಂಗ್ ನಲ್ಲೂ ಪ್ರದರ್ಶನ ತೋರಿದ್ದ ಸ್ಟ್ರೀಕ್ ಟೆಸ್ಟ್ ಮತ್ತು ಏಕದಿನಗಳಲ್ಲಿ ಕ್ರಮವಾಗಿ 1990 ಮತ್ತು 2943 ರನ್ ಗಳಿಸಿದರು. ಅವರು ಒಂದು ಶತಕ ಮತ್ತು 24 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
1993 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಸ್ಟ್ರೀಕ್ ಅವರು 2005 ರವರೆಗೆ ಆಡಿದರು. ಜಿಂಬಾಬ್ವೆಗಾಗಿ ಅವರ ಕೊನೆಯ ಮತ್ತು ಅಂತಿಮ ಅಂತಾರಾಷ್ಟ್ರೀಯ ಪ್ರದರ್ಶನವು ಸೆಪ್ಟೆಂಬರ್ 2005 ರಲ್ಲಿ ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್
ODI: ಶ್ರೀಲಂಕಾ ಬ್ಯಾಟಿಂಗ್ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.