Zimbabwe Cricket Legend: ಜಿಂಬಾಬ್ವೆಯ ಮಾಜಿ ಕ್ರಿಕೆಟ್ ದಿಗ್ಗಜ ಹೀತ್ ಸ್ಟ್ರೀಕ್ ನಿಧನ
ಜಿಂಬಾಬ್ವೆ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್
Team Udayavani, Aug 23, 2023, 8:26 AM IST
ಜಿಂಬಾಬ್ವೆ: ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಅನುಭವಿ ಆಲ್‌ರೌಂಡರ್ ಹೀತ್ ಸ್ಟ್ರೀಕ್ ಅವರು 49 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಕೆಲವು ಸಮಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಜಿಂಬಾಬ್ವೆ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 65 ಟೆಸ್ಟ್ ಮತ್ತು 189 ಏಕದಿನ ಪಂದ್ಯಗಳನ್ನು ಆಡಿರುವ ಸ್ಟ್ರೀಕ್ ಮಂಗಳವಾರ ರಾತ್ರಿ ಕೊನೆಯುಸಿರೆಳೆದರು.
49 ವರ್ಷದ ಸ್ಟ್ರೀಕ್ ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಜಿಂಬಾಬ್ವೆ ಪರ ಅತಿ ಹೆಚ್ಚು ವಿಕೆಟ್ ಪಡೆದವರು:
ಸ್ಟ್ರೀಕ್ ಅವರು ಬೌಲಿಂಗ್ ನಲ್ಲಿ ಮಾತ್ರ ಪರಿಣತಿಹೊಂದಿರದೆ ಉತ್ತಮ ಬ್ಯಾಟ್ಸ್‌ಮನ್ ಕೂಡ ಆಗಿದ್ದರು. ಮಾಜಿ ಆಲ್‌ರೌಂಡರ್ ತಮ್ಮ ದೇಶಕ್ಕಾಗಿ 65 ಟೆಸ್ಟ್ ಮತ್ತು 189 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 216 ಮತ್ತು ಏಕದಿನದಲ್ಲಿ 239 ವಿಕೆಟ್‌ಗಳೊಂದಿಗೆ ಜಿಂಬಾಬ್ವೆ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು.
ಟೆಸ್ಟ್‌ನಲ್ಲಿ ಅತಿ ಹೆಚ್ಚು 5 ವಿಕೆಟ್ ಪಡೆದ ದಾಖಲೆ
ಅನುಭವಿ ಆಲ್‌ರೌಂಡರ್ ಟೆಸ್ಟ್‌ಗಳಲ್ಲಿ 100 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೊದಲ ಮತ್ತು ಏಕೈಕ ಜಿಂಬಾಬ್ವೆ ಬೌಲರ್ ಮತ್ತು 100 ಕ್ಕೂ ಹೆಚ್ಚು ಏಕದಿನ ಪಂದ್ಯಗಳಲ್ಲಿ ವಿಕೆಟ್‌ಗಳನ್ನು ಪಡೆದ ಅವರ ದೇಶದ ಕೇವಲ ನಾಲ್ಕು ಬೌಲರ್‌ಗಳಲ್ಲಿ ಒಬ್ಬರು. ಟೆಸ್ಟ್ ಕ್ರಿಕೆಟ್‌ನಲ್ಲಿ 1,000 ರನ್ ಮತ್ತು 100 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಮೊದಲ ಮತ್ತು ಏಕೈಕ ಜಿಂಬಾಬ್ವೆ ಆಟಗಾರ ಎನಿಸಿಕೊಂಡಿದ್ದರು.
ಅಲ್ಲದೆ, ಏಕದಿನ ಪಂದ್ಯಗಳಲ್ಲಿ 2,000 ರನ್ ಮತ್ತು 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಜಿಂಬಾಬ್ವೆಯ ಮೊದಲ ಮತ್ತು ಏಕೈಕ ಆಟಗಾರ. ಟೆಸ್ಟ್ ಕ್ರಿಕೆಟ್‌ನಲ್ಲಿ ಜಿಂಬಾಬ್ವೆ ಪರ ಅತಿ ಹೆಚ್ಚು 5 ವಿಕೆಟ್ ಪಡೆದ ದಾಖಲೆಯನ್ನೂ ಅವರು ಹೊಂದಿದ್ದಾರೆ.
ಐಸಿಸಿ 8 ವರ್ಷಗಳ ನಿಷೇಧ ಹೇರಿತ್ತು:
ಐಸಿಸಿಯ ಭ್ರಷ್ಟಾಚಾರ-ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 2021 ರ ಏಪ್ರಿಲ್‌ನಲ್ಲಿ ಎಂಟು ವರ್ಷಗಳ ಕಾಲ ಎಲ್ಲಾ ರೀತಿಯ ಕ್ರಿಕೆಟ್ ಚಟುವಟಿಕೆಯಿಂದ ಸ್ಟ್ರೀಕ್ ಅನ್ನು ನಿಷೇಧಿಸಲಾಯಿತು.
ಇದನ್ನೂ ಓದಿ: Chandrayaan-3: ಕೊನೆಯ 30 ಕಿ.ಮೀ. ನಿರ್ಣಾಯಕ; ಆದರೂ ಯಶಸ್ಸು ಖಚಿತ
Sad news coming through that Heath Streak has crossed to the other side. RIP @ZimCricketv legend. The greatest all rounder we produced. It was a pleasure playing with you. See you on the other side when my bowling spell comes to an end…😔
— Henry Olonga (@henryolonga) August 22, 2023
Streaky 🥲
No words can explain what you and your family have done for mine and many others
Our hearts our broken you leave behind a beautiful family and a legacy for us to live up to!
You will be missed we love you dearly
Rest in peace streaky 💔 pic.twitter.com/2sXz4WNqu7— Sean Williams (@sean14williams) August 22, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Service Variation: ಸರಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ
Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ
Kundapura: ಸರಕಾರಿ ಕಾಲೇಜಿನ ಎನ್‌ವಿಆರ್ ಕೆಮರಾ ಕಳವು
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
Belthangady: ಕಾರು-ದ್ವಿಚಕ್ರ ವಾಹನ ಅಪಘಾತ: ಗಾಯಾಳಾಗಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.