ಪ್ರತಿ ತಿಂಗಳು 1 ಲಕ್ಷ ರೇಷ್ಮೆ ಸೀರೆ ಉತ್ಪಾದನೆ ಗುರಿ: ಸಚಿವ ಗೌಡ
Team Udayavani, Dec 7, 2021, 4:24 AM IST
ಬೆಂಗಳೂರು: ದೇಶ-ವಿದೇಶದಲ್ಲಿ ಜನಮನ್ನಣೆ ಗಳಿಸಿರುವ ಮೈಸೂರು ಸಿಲ್ಕ್ ಸೀರೆ ಹೆಚ್ಚಿನ ಗ್ರಾಹಕರಿಗೆ ತಲುಪುವ ಉದ್ದೇಶದಿಂದ ಪ್ರತಿ ತಿಂಗಳು 1 ಲಕ್ಷ ಸೀರೆ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ರೇಷ್ಮೆ ಸಚಿವ ಡಾ|ನಾರಾಯಣ ಗೌಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ಮೈಸೂರು ಸಿಲ್ಕ್ ಸೀರೆಗಳು ದೇಶ-ವಿದೇಶಗಳಲ್ಲಿ ಪ್ರಸಿದ್ಧಿಯಾಗಿವೆ. ಇದರ ಉತ್ಪಾದನೆ ಹೆಚ್ಚಿಸಲು ಕೆಎಸ್ಐಸಿಗೆ ಮತ್ತೆ 192 ವಿದ್ಯುತ್ ಮಗ್ಗಗಳನ್ನು ನೀಡಲಾಗಿದೆ. ಇದರಿಂದ ರೇಷ್ಮೆ ಸೀರೆ ಉತ್ಪಾದನೆಯಲ್ಲಿ ಶೇ. 50 ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.
ಕೆಎಸ್ಐಸಿಯಲ್ಲಿ ಪ್ರಸ್ತುತ 249 ವಿದ್ಯುತ್ ಮಗ್ಗಗಳಿವೆ. ಇವುಗಳಿಂದ ಪ್ರತಿ ತಿಂಗಳು ಸುಮಾರು 70 ಸಾವಿರ ಮೀಟರ್ ರೇಷ್ಮೆ ಉತ್ಪಾದನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.