ಮಳೆ ಕೊರತೆಯಿಂದ 10 ಲಕ್ಷ ಹೆಕ್ಟೇರ್ ಬೆಳೆ ಹಾನಿ
Team Udayavani, Sep 25, 2017, 9:42 AM IST
ಬೆಂಗಳೂರು: ಸತತ ಮೂರು ವರ್ಷ ಬರದಿಂದ ಬಳಲುತ್ತಿದ್ದ ರಾಜ್ಯದಲ್ಲಿ ಈ ಬಾರಿ ವಾಡಿಕೆ ಮಳೆಯಾಗಿದೆ. ಆದಾಗ್ಯೂ ಮಳೆ ಕೊರತೆಯಿಂದ ಹತ್ತು ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಭಾಗಶಃ ಹಾನಿಯಾಗಿದೆ.
ರಾಜ್ಯಾದ್ಯಂತ ವಾಡಿಕೆ ಮಳೆಯಿಂದ ಪ್ರಮುಖ ಜಲಾಶಯಗಳು ಭರ್ತಿಯಾಗುತ್ತಿವೆ. ಕುಡಿಯುವ ನೀರಿನ ಬವಣೆಯೂ ನೀಗಿದೆ. ಆದರೆ, ಕೃಷಿ ಕ್ಷೇತ್ರದ ಮೇಲಿನ ಬರದ ಛಾಯೆ ಮಾತ್ರ ಸಂಪೂರ್ಣವಾಗಿ ಸರಿದಿಲ್ಲ. ಸಕಾಲದಲ್ಲಿ ಮಳೆಯಾಗದಿದ್ದರಿಂದ ಒಟ್ಟಾರೆ ಬಿತ್ತನೆ ಪ್ರದೇಶದಲ್ಲಿ ಶೇ. 20ರಷ್ಟು ಬೆಳೆ ಬಾಧಿತ ವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಇದುವರೆಗೆ 60.46 ಲಕ್ಷ ಹೆಕ್ಟೇರ್
ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಪೈಕಿ 10.60 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ದ ಬೆಳೆ ಮಳೆ ಅಭಾವದಿಂದ ಬಾಧಿತವಾಗಿದೆ ಎಂದು ಕೃಷಿ ಇಲಾಖೆ ಅಂದಾಜು ಮಾಡಿದೆ. ಈ ಮಧ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ, 9 ಲಕ್ಷ ಹೆಕ್ಟೇರ್ ಬಿತ್ತನೆ ಪ್ರಮಾಣ ಕೂಡ ಕಡಿಮೆ ಯಾಗಿದೆ. ಇದೆಲ್ಲದರ ಪರಿಣಾಮ ವಾಡಿಕೆ ಮಳೆ ನಡುವೆಯೂ ಉತ್ಪಾದನೆ ಗಣನೀಯ ವಾಗಿ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಒಂದು
ವೇಳೆ ಮಳೆ ಇದೇ ರೀತಿ ಮುಂದುವರಿದರೆ, ಕೊಂಚ ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದೂ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದುಪ್ಪಟ್ಟು ನಷ್ಟ; ರೈತರ ಅಳಲು: ಮಳೆಯ ಕಣ್ಣಾಮುಚ್ಚಾಲೆಯಿಂದ ರೈತರಿಗೆ ದುಪ್ಪಟ್ಟು ನಷ್ಟವಾಗಿದೆ. ಆರಂಭದಲ್ಲಿ ಉತ್ತಮ ಮಳೆಯಾ ಯಿತು. ಹವಾಮಾನ ತಜ್ಞರು ಕೂಡ ವಾಡಿಕೆ ಮಳೆ ಮುನ್ಸೂಚನೆ ನೀಡಿದರು. ಈ ಹಿನ್ನೆಲೆ ಯಲ್ಲಿ ರೈತರು ಸಾಲ ಮಾಡಿ, ಬಿತ್ತನೆ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದರು. ಆದರೆ, ಅದು ಹೂವು ಬಿಡುವ ಅಥವಾ ಕಾಯಿಕಟ್ಟುವ ಸಂದರ್ಭದಲ್ಲೇ ಮಳೆ ಕೈಕೊಟ್ಟಿತು. ಪರಿಣಾಮ ಬೆಳೆ ಒಣಗಲು ಶುರುವಾಯಿತು. ಈಗ ಸಾಕಷ್ಟು ಮಳೆಯಾಗಿದ್ದರೂ ನಿರೀಕ್ಷಿತ ಪ್ರಮಾಣದ ಇಳುವರಿ ಬರುವುದಿಲ್ಲ ಎಂದು ವಿವಿಧ ಜಿಲ್ಲೆಗಳ ರೈತರು ಅಲವತ್ತುಕೊಳ್ಳುತ್ತಾರೆ.
ಕೃಷಿ ಇಲಾಖೆ ಅಂಕಿ-ಅಂಶಗಳ ಪ್ರಕಾರ ಹಾವೇರಿ, ಚಿತ್ರದುರ್ಗ ಮತ್ತು ಬೆಳಗಾವಿ, ಹಾಸನ, ರಾಯಚೂರು, ತುಮಕೂರು,
ಕಲಬುರಗಿ, ಯಾದಗಿರಿಯಲ್ಲಿ ಅತಿ ಹೆಚ್ಚು ಪ್ರದೇಶ ಮಳೆ ಅಭಾವದಿಂದ ಬಾಧಿತವಾಗಿದೆ. ಹಾಗಾಗಿ, ಈ ಭಾಗದ ರೈತರಿಗೆ ಇದರ ಪರಿಣಾಮ ತುಸು ಜೋರಾಗಿಯೇ ತಟ್ಟಲಿದೆ.
ವಾರದ ಮಳೆಯಿಂದ ಆಶಾದಾಯಕ:
ಮುಖ್ಯವಾಗಿ ಭತ್ತ, ರಾಗಿಯಂತಹ ಆಹಾರ ಧಾನ್ಯಗಳಿಗೆ ಹೊಡೆತ ಬಿದ್ದಿರುವುದು ನಿಜ. ಆದರೆ, ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆ ಆಶಾದಾಯಕವಾಗಿದೆ. ಈ ಮಳೆಯಿಂದ ಬೆಳೆಗಳು ತಕ್ಕಮಟ್ಟಿಗೆ ಚೇತರಿಸಿ ಕೊಳ್ಳುವ ಸಾಧ್ಯತೆಯಿದೆ. ಆಗ, ಬೆಳೆಗಳ ಬಾಧಿತ ಪ್ರಮಾಣ ತಗ್ಗಬಹುದೆಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ ವಿಶ್ವಾಸ ವ್ಯಕ್ತಪಡಿಸುತ್ತಾರೆ. ರಾಜ್ಯದಲ್ಲಿ ಬಿತ್ತನೆ ಗುರಿ ಇರುವುದು 73 ಲಕ್ಷ ಕ್ಟೇರ್. ವಾಡಿಕೆ ಬಿತ್ತನೆ ವಿಸ್ತೀರ್ಣ 65.74 ಲಕ್ಷ ಹೆಕ್ಟೇರ್. ಕಳೆದ ವರ್ಷ ಇದೇ ಅವಧಿ ಯಲ್ಲಿ 69.75 ಲಕ್ಷ ಬಿತ್ತನೆಯಾಗಿತ್ತು. ಆದರೆ, ಈ ಬಾರಿ ಇದುವರೆಗೆ 60.46 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಮುಂಗಾರಿನ ಕೃಷಿ ಉತ್ಪಾದನೆ ಗುರಿ 100.8 ಲಕ್ಷ ಟನ್. ಇದರಲ್ಲಿ ಶೆ. 20ರಿಂದ 25ರಷ್ಟು ಕುಂಠಿತವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
781.6 ಮಿ.ಮೀ. ವಾಡಿಕೆ ಮಳೆ
ರಾಜ್ಯದಲ್ಲಿ ಜೂನ್ 1ರಿಂದ ಸೆ. 22ರವರೆಗಿನ ವಾಡಿಕೆ ಮಳೆ 781.6 ಮಿ.ಮೀ. ಬಿದ್ದ ಮಳೆ 712 ಮಿ.ಮೀ. ಅಂತರ ಶೇ. 9ರಷ್ಟು ಇರುವುದರಿಂದ ವಾಡಿಕೆ ಮಳೆ ಎಂದು ಪರಿಗಣಿಸಲಾಗುವುದು. ಪ್ರದೇಶವಾರು ಮಳೆ ಪ್ರಮಾಣ ಹೀಗಿದೆ (ಮಿ.ಮೀ.ಗಳಲ್ಲಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ
Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!
Communalization ಜತೆ ಆರೆಸ್ಸೆಸ್ ಆರಂಭ: ಬಿಳಿಮಲೆ ಹೇಳಿದ್ದು ವಿವಾದ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.