ಒಲಿಂಪಿಕ್ ಗೆ ಆಯ್ಕೆಯಾಗುವ ಕ್ರೀಡಾಪಟುಗಳಿಗೆ 10 ಲಕ್ಷ ಪ್ರೋತ್ಸಾಹ ಧನ : ಡಾ. ನಾರಾಯಣಗೌಡ
Team Udayavani, Jun 26, 2021, 4:18 PM IST
ಬೆಂಗಳೂರು : ಟೋಕಿಯೋ ಒಲಿಂಪಿಕ್ ಗೆ ರಾಜ್ಯದ ಐವರು ಕ್ರೀಡಾಪಟುಗಳು ಸಂಭವನೀಯ ಪಟ್ಟಿಯಲ್ಲಿ ಸ್ಥಾನಪಡೆದಿದ್ದು, ಆಯ್ಕೆಯಾಗುವ ಕ್ರೀಡಾಪಟುಗಳಿಗೆ ತಲಾ ರೂ. 10 ಲಕ್ಷ ಪ್ರೋತ್ಸಾಹ ಧನ ಘೋಷಿಸಿ ಆದೇಶ ಹೊರಡಿಸಲಾಗಿದೆ. 2020 ರ ಒಲಿಂಪಿಕ್ ಕ್ರೀಡಾಕೂಟವು ಜಪಾನ್ ಟೋಕಿಯೋದಲ್ಲಿ ಜುಲೈ 23 ರಿಂದ ಸೆಪ್ಟಂಬರ್ 5 ರ ವರೆಗೆ ನಡೆಯಲಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಕ್ರೀಡಾಪಟುಗಳಿಗೆ ಅಗತ್ಯ ನೆರವು ನೀಡುವುದು ಸರ್ಕಾರದ ಕರ್ತವ್ಯ. ಮೂಲಭೂತ ಸೌಕರ್ಯದ ಜೊತೆಗೆ ಆರ್ಥಿಕ ಸಹಾಯ ನೀಡುವುದು ಅತ್ಯಗತ್ಯ. ಭಾರತ ಸರ್ಕಾರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ನಮ್ಮ ದೇಶದ ಅರ್ಹ ಕ್ರೀಡಾಪಟುಗಳ ಸಂಭವನೀಯ ಪಟ್ಟಿಯನ್ನು ಸಿದ್ದಪಡಿಸಿದೆ. ರಾಜ್ಯದ ಈಕ್ವೆಸ್ಟ್ರಿಯನ್ ಕ್ರೀಡಾಪಟು ಒಲಿಂಪಿಕ್ ಗೆ ಆಯ್ಕೆಯಾಗಿದ್ದಾರೆ. ರಾಜ್ಯದ ಇನ್ನೂ ನಾಲ್ವರು ಕ್ರೀಡಾಪಟುಗಳು ಸಂಭವನೀಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರಿಗೆ ಪ್ರೋತ್ಸಾಹ ಧನ ನೀಡಿ ಬೆಂಬಲಿಸಬೇಕಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಐವರೂ ಕ್ರೀಡಾಪಟುಗಳು ರಾಜ್ಯದ, ರಾಷ್ಟ್ರದ ಕೀರ್ತಿಪತಾಕೆಯನ್ನು ಜಪಾನ್ ನ ಟೋಕಿಯೋದಲ್ಲಿ ಹಾರಿಸಲಿ ಎಂದು ಸಚಿವರು ಶುಭಹಾರೈಸಿದ್ದಾರೆ.
ಮತ್ತಷ್ಟು ಕಠಿಣ ಶ್ರಮವಹಿಸಿ ಒಲಿಂಪಿಕ್ ನಲ್ಲಿ ಪಾಲ್ಗೊಳ್ಳಬೇಕು. ಆದ್ದರಿಂದ ತಲಾ ರೂ. 10 ಲಕ್ಷ ನೀಡಿ ಪ್ರೋತ್ಸಾಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಂತೆಯೆ ರಾಜ್ಯ ಸರ್ಕಾರ ಕರ್ನಾಟಕದಕ್ರೀಡಾಪ್ರೋತ್ಸಾಹ ಧನ ಘೋಷಿಸಿ ಆದೇಶಿಸಿದೆ.
ಆಯ್ಕೆಯಾಗಿರುವ ಹಾಗೂ ಸಂಭವನೀಯ ಪಟ್ಟಿಯಲ್ಲಿ ಸ್ಥಾನ ಪಡೆದ ಕ್ರೀಡಾಪಟುಗಳು
ಪೌವಾದ್ ಮಿರ್ಜಾ – ಈಕ್ವೆಸ್ಟ್ರಿಯನ್. – ಆಯ್ಕೆಯಾಗಿದ್ದಾರೆ.
ಎಸ್.ವಿ. ಸುನೀಲ್ – ಹಾಕಿ. – ಸಂಭವನೀಯ
ರೋಹನ್ ಬೋಪಣ್ಣ – ಟೆನ್ನಿಸ್. – ಸಂಭವನೀಯ
ಶ್ರೀಹರಿ ನಟರಾಜ್ – ಈಜು. – ಸಂಭವನೀಯ
ಕುಮಾರಿ ಅದಿತಿ ಅಶೋಕ್ – ಗಾಲ್ಫ್. -ಸಂಭವನೀಯ
ಪುತಿಷ್ಕೃತ ಕ್ರೀಡಾಕೂಟದಲ್ಲಿ ಭಾರತ ತಂಡದ ಪರವಾಗಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪೂರ್ವ ತಯಾರಿ ಮತ್ತು ಬೆಂಬಲದ ದ್ಯೋತಕವಾಗಿ ತಮಿಳುನಾಡು ಮತ್ತು ಮಧ್ಯಪ್ರದೇಶ ರಾಜ್ಯಗಳು ತಲಾ ರೂ.10.00 ಲಕ್ಷ ಪ್ರೋತ್ಸಾಹ ಧನ ನೀಡಿವೆ. ಅದೇ ರೀತಿ ಕರ್ನಾಟಕ ಸಹ ಕ್ರೀಡಾಪಟುಗಳಿಗೆ ನಗದು
ಪ್ರೋತ್ಸಾಹಧನ ನೀಡುವ ಸಂಬಂಧ ಇತ್ತೀಚೆಗೆ ನಡೆದ ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆಯುಕ್ತ ಡಾ. ಗೋಪಾಲಕೃಷ್ಣ ಹಾಗೂ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮ*ಹತ್ಯೆ
MUST WATCH
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.