ಕರ್ತವ್ಯ ಲೋಪ: ಡಿಎಸ್ಪಿ, ಇನ್ಸಪೆಕ್ಟರ್, ಇಬ್ಬರು ಪಿಎಸ್ಐ ಸೇರಿ 12 ಪೊಲೀಸ್ ಸಿಬ್ಬಂದಿ ಅಮಾನತು
ಪಿಎಸ್ಐ ನೇಮಕಾತಿಯ ಪರೀಕ್ಷೆ ಅಕ್ರಮ
Team Udayavani, May 7, 2022, 1:59 PM IST
ಕಲಬುರಗಿ:545 ಪಿಎಸ್ಐ ನೇಮಕಾತಿಯ ಪರೀಕ್ಷೆಯಲ್ಲಿ ನ ಅಕ್ರಮ ತಡೆಯಲು ವಿಫಲರಾದ ಆರೋಪದ ಮೇರೆಗೆ ಇಬ್ಬರು ಡಿಎಸ್ಪಿ, ಇನ್ಸ್ ಪೆ ಕ್ಟರ್ ಹಾಗೂ ಇಬ್ಬರು ಪಿಎಸ್ಐ ಸೇರಿ 12 ಪೊಲಿಸ್ ಸಿಬ್ಬಂದಿ ಅಮಾನತುಗೊಂಡಿದ್ದಾರೆ.
ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೊಳಗಾಗಿರುವ ಡಿ ಎಸ್ಪಿ ಮಲ್ಲಿಕಾರ್ಜುನ ಸಾಲಿ, ಇನ್ಸ್ ಪೆಕ್ಟರ್ ಮೇತ್ರೆ ಅವರನ್ನು ಅಮಾನತು ಗೊಳಿಸಲಾಗಿದೆ. ಅದೇ ರೀತಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಂಎಸ್ಐ ಕಾಲೇಜ ನ ಪರೀಕ್ಷಾ ಕೇಂದ್ರದಲ್ಲಿ ಕಳೆದ ಆಕ್ಟೋಬರ್ 3ರಂದು ನಡೆದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಹೊರಗೆ ಬರುವುದನ್ನು ತಡೆಯಲು ಹಾಗೂ ಒಎಂಆರ್ ಶೀಟ್ ತಿದ್ದುಪಡಿ ಜತೆಗೇ ಪರೀಕ್ಷೆ ಮುಗಿದ ನಂತರವೂ ಉತ್ತರ ಬರೆದಿರುವುದು ಸೇರಿದಂತೆ ಇತರ ಅಕ್ರಮಗಳನ್ನು ತಡೆಯಲು ವಿಫಲರಾಗಿದ್ದನ್ನು ಪರಿಗಣಿಸಿ ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪಿಎಸ್ಐ ಗಳಾದ ಶ್ರೀ ಶೈಲಮ್ಮ, ನಜಮಾ ಸುಲ್ತಾನ್, ಎಎಸ್ಐಗಳಾದ ಶಶಿಕುಮಾರ್, ಲತಾ ಹಾಗೂ ಮುಖ್ಯ ಪೇದೆಗಳಾದ ಜೈ ಭೀಮ, ಪಾರುಬಾಯಿ ಶರಣಬಸಪ್ಪ, ದಾಮೋದರ, ಪಿಸಿಗಳಾದ ಪ್ರದೀಪ ಹಾಗೂ ರಾಜಶ್ರೀ ಎನ್ನುವರೆ ಅಮಾನತುಗೊಂಡಿದ್ದಾರೆ.
ಎರಡು ದಿನಗಳ ಹಿಂದೆ ಇದೇ ರೀತಿಯ ಕರ್ತವ್ಯ ಲೋಪ ಆರೋಪದ ಮೇರೆಗೆ ಬೆರಳಚ್ಚು ವಿಭಾಗದ ಡಿ ಎಸ್ಪಿ ಹೊಸಮನಿ ಹಾಗೂ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ದಿಲೀಪ್ ಸಾಗರ ಅಮಾನತ್ತುಗೊಂಡಿದ್ದಾರೆ. ಒಟ್ಟಾರೆ ಪೊಲೀಸ್ ಅಧಿಕಾರಿಗಳು ಸೇರಿ 16 ಪೊಲಿಸ್ ಸಿಬ್ಬಂದಿಗಳು ಅಮಾನತುಗೊಂಡಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು
Waqf ಬಗ್ಗೆ ಬಿವೈವಿ ಜತೆ ಮಾತಾಡುವ ಅವಶ್ಯಕತೆ ನನಗಿಲ್ಲ: ಯತ್ನಾಳ್
ರಾಜ್ಯದ ಅರಣ್ಯ ನಿಧಿಗಾಗಿ ಕೇಂದ್ರ ಸರಕಾರಕ್ಕೆ ನಿಯೋಗ: ಅರಣ್ಯ ಸಚಿವ ಖಂಡ್ರೆ
Bus Fare Hike: ಸರಕಾರದ ಹೊಟ್ಟೆಗೆ ಇನ್ನೆಷ್ಟು ತೆರಿಗೆ, ಶುಲ್ಕ ತೆರಬೇಕು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.