11267 ಕೋಟಿ ರೂ. ಮೊತ್ತದ ಪೂರಕ ಅಂದಾಜು ಮಂಡನೆ
ಹೆಲಿಕಾಪ್ಟರ್ ಬಾಡಿಗೆಗೆ 30 ಕೋಟಿ, ದೇವಾಲಯ, ಮಠ, ಟ್ರಸ್ಟ್‌ಗಳಿಗೆ 32 ಕೋಟಿ ರೂ.
Team Udayavani, Feb 22, 2023, 6:20 AM IST
ಬೆಂಗಳೂರು: ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು ಹಾಗೂ ಇತರೆ ಗಣ್ಯ ವ್ಯಕ್ತಿಗಳ ಪ್ರವಾಸ ಕಾರ್ಯಕ್ರಮಗಳ ಹೆಲಿಕಾಪ್ಟರ್ ಬಾಡಿಗೆಗೆ 30 ಕೋಟಿ ರೂ. ಹಾಗೂ ಬಿಎಂಟಿಸಿ ಬಾಕಿ ಪಾವತಿಗೆ 300 ಕೋಟಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 400 ಕೋಟಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 7.5 ಕೋಟಿ ಹಾಗೂ ಕೆಎಸ್‌ಆರ್‌ಟಿಸಿಗೆ 225 ಕೋಟಿ ರೂ. ಸೇರಿ ವಿವಿಧ ಇಲಾಖೆಗಳಿಗೆ ಹೆಚ್ಚುವರಿಯಾಗಿ ಒದಗಿಸುವ ಒಟ್ಟು 11267 ಕೋಟಿ ರೂ.ಗಳ 2022-23ನೇ ಸಾಲಿನ ಅಂತಿಮ ಹಾಗೂ 3ನೇ ಪೂರಕ ಅಂದಾಜುಗಳನ್ನು ವಿಧಾನಸಭೆ ಅನುಮೋದನೆಗೆ ಮಂಗಳವಾರ ಮಂಡಿಸಲಾಗಿದೆ.
ದೇವಸ್ಥಾನ, ಮಠ, ಟ್ರಸ್ಟ್‌ಗಳಿಗೆ ವಿಶೇಷ ಅನುದಾನವಾಗಿ 3210 ಲಕ್ಷ ರೂ., ಚಿಕ್ಕಮಗಳೂರು, ಶಿಕಾರಿಪುರ ಮತ್ತಿತರ ದೇವಾಲಯಗಳ ಜೀಣೋದ್ಧಾರ ಕಾಮಗಾರಿಗೆ 935 ಲಕ್ಷ ರೂ., ಕೆರೆಗಳ ಆಧುನೀಕರಣ ಕಾಮಗಾರಿಗಳಿಗೆ 3000 ಲಕ್ಷ ರೂ., ಪಶ್ಚಿಮವಾಹಿನಿ ಯೋಜನೆಯಡಿ 25000 ಲಕ್ಷ ರೂ. ಬಿಲ್ ಪಾವತಿಗೆ ಅನುದಾನ ಹಾಗೂ 2022ರ ಅಕ್ಟೋಬರ್‌ನಿಂದ ಮಾರ್ಚ್ 2023ರ ವರೆಗೆ ಇಂಧನ ಹೊಂದಾಣಿಕೆ ವೆಚ್ಚ ಪಾವತಿಸಲು ಕೆಪಿಸಿಗೆ 30000 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಿದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪೂರಕ ಅಂದಾಜು ಮಂಡಿಸಿದರು. ಇದರಲ್ಲಿ ಈಗಾಗಲೇ ಖರ್ಚು ಮಾಡಿರುವ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಪಾಲು ನೀಡಿರುವುದನ್ನು ಸೇರಿಸಲಾಗಿದೆ. ಮೂರನೇ ಹಾಗೂ ಅಂತಿಮ ಕಂತು ಪೂರಕ ಅಂದಾಜಿನಲ್ಲಿ ಒದಗಿಸಿರುವ ಒಟ್ಟು ಮೊತ್ತ 11267.11 ಕೋಟಿ ರೂ.ಗಳಲ್ಲಿ 1047.11 ಕೋಟಿ ರೂ.ಗಳು ಕೇಂದ್ರ ಸಹಾಯಕ್ಕೆ ಸಂಬಂಧಿಸಿವೆ. ಆದ್ದರಿಂದ ಹೊರ ಹೋಗುವ ನಿವ್ವಳ ನಗದು ಮೊತ್ತ 10220 ಕೋಟಿ ರೂ.ಗಳಾಗಿರುತ್ತದೆ. ವಿವಿಧ ಇಲಾಖೆಗಳಿಗೆ ಹೆಚ್ಚುವರಿಯಾಗಿ ಒದಗಿಸಿರುವ ಅನುದಾನ ಕೆಳಕಂಡಂತಿದೆ.
ರದ್ದುಗೊಂಡಿರುವ ಎಸಿಬಿ ಅಧಿಕಾರಿಗಳ ವೇತನ, ಭತ್ಯೆ ವೈದ್ಯಕೀಯ ಭತ್ಯೆಗಾಗಿ ಒಟ್ಟು 480 ಲಕ್ಷ ರೂ., ಸಾರಿಗೆ, ವಸತಿ, ಜವಳಿ ಸಚಿವರು, ಕೋಲಾರ ಹಾಗೂ ಬಾಗಲಕೋಟೆ ಸಂಸದರಿಗೆ ಕಾರು ಖರೀದಿಗೆ 139 ಲಕ್ಷ, ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳಿಗೆ 10000 ಲಕ್ಷ ರೂ. ಮೋಜಣಿ, ಗಡಿ ಗುರುತಿಸುವಿಕೆ, ಅರಣ್ಯ ರಕ್ಷಣೆ, ಮಾನವ ಪ್ರಾಣಿ ಸಂಘರ್ಷ ನಿಯಂತ್ರಣ ಕ್ರಮಗಳಿಗೆ 2500 ಲಕ್ಷ ರೂ., ಸಹಕಾರ ಇಲಾಖೆಯಡಿ ನಡೆಯುತ್ತಿರುವ ಸಹಕಾರಿ ಆಸ್ಪತ್ರೆಗಳ ಬಲವರ್ಧನೆಗೆ 600 ಲಕ್ಷ ರೂ. ಕನಿಷ್ಟ ಬೆಂಬಲ ಯೋಜನೆಗಡಿ ಆವರ್ತ ನಿಧಿಗೆ 100000 ಲಕ್ಷ ರೂ. ಸೇರಿದೆ.
ಕೃಷಿ ಮತ್ತು ತೋಟಗಾರಿಕೆ -750 ಲಕ್ಷ ರೂ.
ಪಶುಸಂಗೋಪನೆ ಮತ್ತು ಮೀನುಗಾರಿಕೆ -500 ಲಕ್ಷ ರೂ.
ಆರ್ಥಿಕ -1162 ಲಕ್ಷ ರೂ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ -17943 ಲಕ್ಷ ರೂ.
ಒಳಾಡಳಿತ ಮತ್ತು ಸಾರಿಗೆ -105000 ಲಕ್ಷ ರೂ.
ಮೂಲ ಸೌಕರ್ಯ ಅಭಿವೃದ್ಧಿ -10500 ಲಕ್ಷ ರೂ.
ಅರಣ್ಯ, ಜೀವಿ ಶಾಸ್ತ್ರ, ಪರಿಸರ – 11434 ಲಕ್ಷ ರೂ.
ಸಹಕಾರ -106141 ಲಕ್ಷ ರೂ.
ಸಮಾಜ ಕಲ್ಯಾಣ -51382 ಲಕ್ಷ ರೂ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ -3929 ಲಕ್ಷ ರೂ.
ವಾರ್ತಾ, ಪ್ರವಾಸೋದ್ಯಮ -16267 ಲಕ್ಷ ರೂ.
ಕಂದಾಯ -8335 ಲಕ್ಷ ರೂ.
ವಸತಿ -25443 ಲಕ್ಷ ರೂ.
ವಾಣಿಜ್ಯ ಮತ್ತು ಕೈಗಾರಿಕೆ -30127 ಲಕ್ಷ ರೂ.
ನಗರಾಭಿವೃದ್ಧಿ -135500 ಲಕ್ಷ ರೂ.
ಲೋಕೋಪಯೋಗಿ-150381 ಲಕ್ಷ ರೂ.
ಜಲಸಂಪನ್ಮೂಲ- 255000 ಲಕ್ಷ ರೂ.
ಇಂಧನ -190000 ಲಕ್ಷ ರೂ.
ಕನ್ನಡ ಮತ್ತು ಸಂಸ್ಕೃತಿ- 1512 ಲಕ್ಷ ರೂ.
ಯೋಜನೆ -5400 ಲಕ್ಷ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.