Kasaragod; ಶಾಲಾ ಪಠ್ಯೇತರದಲ್ಲೂ ಕನ್ನಡಕ್ಕೆ ಕುತ್ತು!
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರ ನೇಮಕ ಬಳಿಕ ಈಗ ಶಾಲಾ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳಲ್ಲೂ ಮಲಯಾಳ ಹೇರಿಕೆ
Team Udayavani, Dec 1, 2024, 6:50 AM IST
ಕಾಸರಗೋಡು: ಗಡಿನಾಡು ಜಿಲ್ಲೆಯಲ್ಲಿ ಕೇರಳ ಸರಕಾರದ ಕನ್ನಡ ಅವಗಣನೆ ಮುಂದುವರಿದಿದೆ. ಈ ಹಿಂದೆ ಕನ್ನಡ ಮಾಧ್ಯಮದ ಶಾಲೆಗಳಲ್ಲಿರುವ ವಿಷಯವಾರು ಹುದ್ದೆಗಳಿಗೆ ಕನ್ನಡ ಬಾರದ ಮಲಯಾಳಿ ಶಿಕ್ಷಕರನ್ನು ನೇಮಿಸಲಾಗಿತ್ತು. ಈಗ ಪಠ್ಯೇತರ ಕಾರ್ಯಕ್ರಮಗಳಲ್ಲೂ ಕನ್ನಡದ ಅವಗಣನೆ ಮಾಡಲಾಗುತ್ತಿದೆ.
ಇದನ್ನು ಪುಷ್ಟೀಕರಿಸುವಂತೆ ಕಾಸರಗೋಡು ಜಿಲ್ಲೆಯ ದಕ್ಷಿಣ ತುದಿಯ ತ್ರಿಕ್ಕರಿಪುರ ಸಮೀಪದ ಉದಿನೂರಿನಲ್ಲಿ ಈಚೆಗೆ ಶಾಲಾ ಕಲೋತ್ಸವವನ್ನು ಸಂಘಟಿಸಲಾಗಿತ್ತು. ಇಲ್ಲಿ ಹಲವು ಸ್ಪರ್ಧೆಗಳಿದ್ದವು. ಈ ಪೈಕಿ ಕೆಲವು ಸ್ಪರ್ಧೆಗಳಲ್ಲಿ ಕನ್ನಡದಲ್ಲಿ ಭಾಗ ವಹಿಸಲು ಅವಕಾಶ ನೀಡಲಾಗಿತ್ತಾದರೂ ಸೂಚನೆ ಫಲಕ, ನಾಮಫಲಕ ಇತ್ಯಾದಿಗಳಲ್ಲಿ ಕನ್ನಡವನ್ನು ಪೂರ್ಣ ಅವಗಣಿಸಲಾಗಿತ್ತು. ನಾಮಫಲಕ ಸಹಿತ ಹಲವು ಸೂಚನೆಗಳು ಮಲಯಾಳದಲ್ಲೇ ಇದ್ದುದರಿಂದ ಕನ್ನಡಿಗರ ಮಕ್ಕಳು ಹಾಗೂ ಅವರ ಜತೆಗಿದ್ದ ವರು ತೀವ್ರವಾಗಿ ತೊಂದರೆಗೀಡಾದರು.
ಇದರೊಂದಿಗೆ ಕನ್ನಡದ ಮಕ್ಕಳಿಗೆ ಕೆಲವು ಸ್ಪರ್ಧೆಗಳಲ್ಲಿ ತಾಂತ್ರಿಕ ಕಾರಣವೊಡ್ಡಿ ರಾಜ್ಯ ಮಟ್ಟದ ಸ್ಪರ್ಧೆಯಿಂದ ಹೊರಕ್ಕಿಡುವ ಪರಂಪರೆ ಮುಂದುವರಿದಿದೆ.
ಈ ಹಿಂದೆಯೇ ಕನ್ನಡ ಮಾಧ್ಯಮದ ಶಾಲೆಗಳಲ್ಲಿರುವ ವಿಷಯವಾರು ಹುದ್ದೆಗಳಿಗೆ ಕನ್ನಡ ಬಾರದ ಮಲಯಾಳಿ ಶಿಕ್ಷಕರನ್ನು ನೇಮಿಸಲಾಗಿತ್ತು. ಈ ಬಗ್ಗೆ ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೆಲವೆಡೆ ಮಾರ್ಪಾಡು ಮಾಡಲಾಗಿತ್ತು. ಆದರೆ ಈಗ ಕಲೋತ್ಸವದ ಚಟುವಟಿಕೆಗಳಲ್ಲೂ ಮಲಯಾಳ ಭಾಷೆಯ ಪ್ರಾತಿನಿಧ್ಯ ಹೆಚ್ಚಿಸಲಾಗಿದೆ.
ಒಂದೆಡೆಯೂ ಕನ್ನಡವಿಲ್ಲ
ಒಟ್ಟು 12 ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆದಿದ್ದು, ಯಾವುದೇ ವೇದಿಕೆಯಲ್ಲೂ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿರಲಿಲ್ಲ. ಸ್ಪರ್ಧಿಗಳಿಗೆ ನೀಡುವ ಸೂಚನೆಯಾಗಲೀ ಮಾಹಿತಿಯಾಗಲೀ ಕನ್ನಡದಲ್ಲಿ ಇರಲಿಲ್ಲ. ಎಲ್ಲವೂ ಮಲಯಾಳದಲ್ಲಿಯೇ ನಡೆಯಿತು. ಕನ್ನಡದ ಸ್ಪರ್ಧೆ ನಡೆಯುವ ಒಂದೆಡೆ ಮಾತ್ರ ವೇದಿಕೆಯ ಬಳಿ, “ಪ್ಲಾಸ್ಟಿಕ್ ಮುಕ್ತ ಆವರಣವೇ ಉದಿನೂರಿಗೆ ಸ್ವರ್ಣಾಭರಣ’ ಎಂದು ಬರೆದಿತ್ತು. ಕನ್ನಡದ ಸ್ಪರ್ಧೆಗಳಲ್ಲಿ ವಿಜೇತರ ಹೆಸರುಗಳನ್ನು ಮಾತ್ರ ಕನ್ನಡದಲ್ಲಿ ಪ್ರಕಟಿಸಲಾಗುತ್ತಿತ್ತು.
ಕಲೋತ್ಸವದಲ್ಲಿ ಕಾಸರಗೋಡು ಜಿಲ್ಲೆಯ ಒಟ್ಟು ಏಳು ಉಪಜಿಲ್ಲೆಗಳಿಂದ ವಿದ್ಯಾರ್ಥಿಗಳು ಸ್ಪ³ರ್ಧೆಗಳಲ್ಲಿ ಭಾಗವಹಿಸುತ್ತಾರೆ. ಈ ಪೈಕಿ ಕಾಸರಗೋಡು, ಕುಂಬಳೆ, ಮಂಜೇಶ್ವರ ಉಪಜಿಲ್ಲೆಗಳಿಂದ ಭಾಗವಹಿಸುವ ವಿದ್ಯಾರ್ಥಿಗಳ ಪೈಕಿ ಬಹುಪಾಲು ಕನ್ನಡದವರೇ. ಇಲ್ಲಿಯ ಗ್ರಾಮೀಣ ಭಾಗದವರಿಗೆ ಮಲಯಾಳ ಬಾರದು. ಹಾಗಿರುವಾಗ ಸೂಚನೆಗಳನ್ನು ಕನ್ನಡದಲ್ಲೂ ನೀಡಬೇಕಿತ್ತು ಎನ್ನುತ್ತಾರೆ ವಿದ್ಯಾರ್ಥಿಗಳು ಹಾಗೂ ಪೋಷಕರು.
ಅಂಗನವಾಡಿಯಲ್ಲೂ ಮಲಯಾಳಿ ಶಿಕ್ಷಕಿ
ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕ ನಡೆಯುತ್ತಲೇ ಇದೆ. ಇದರ ವಿರುದ್ಧ ಹಲವು ಬಾರಿ ಪ್ರತಿಭಟನೆ ನಡೆದಿದ್ದರೂ ಕೇರಳ ಸರಕಾರ ತನ್ನ ಕನ್ನಡ ವಿರೋಧಿ ಧೋರಣೆಯನ್ನು ಮುಂದುವರಿಸಿದೆ. ಈಗ ಈ ನೇಮಕದ ಸಮಸ್ಯೆ ಅಂಗನವಾಡಿಗಳಿಗೂ ಬಂದಿದೆ. ಮಕ್ಕಳು ಭಾಷೆಯನ್ನು ಕಲಿಯುವ ಆರಂಭದ ಹಂತದಲ್ಲೇ ಕನ್ನಡ ಬಾರದ ಶಿಕ್ಷಕರನ್ನು ನೇಮಿಸಿದರೆ ಅನಿವಾರ್ಯವಾಗಿ ಮಲಯಾಳ ಕಲಿಯುತ್ತಾರೆಂಬ ದುರಾಲೋಚನೆ ಕೇರಳ ಸರಕಾರದ್ದು ಎಂಬುದು ಕನ್ನಡಿಗರ ಟೀಕೆ. ಇತ್ತೀಚೆಗೆ ಜಿಲ್ಲೆಯ ಅಡೂರಿನ ಕೋರಿಕಂಡ ಅಂಗನವಾಡಿಯಲ್ಲಿ ಮಲಯಾಳಿ ಶಿಕ್ಷಕಿಯನ್ನು ನೇಮಿಸಲಾಗಿತ್ತು. ಕಾಸರಗೋಡು ಜಿಲ್ಲೆಯ ಕನ್ನಡ ಭಾಷಿಕ ಪ್ರದೇಶದ ಅಂಗನವಾಡಿಗಳಿಗೆ ದ್ವಿಭಾಷೆ ಬಲ್ಲ ಶಿಕ್ಷಕರನ್ನು ನೇಮಿಸಬೇಕೆಂಬುದು ನಿಯಮ. ಆದರೆ ಇದನ್ನು ಗಾಳಿಗೆ ತೂರಲಾಗಿದೆ. ಸಾಕಷ್ಟು ಪ್ರತಿಭಟನೆ ಮಾಡಿದ ಬಳಿಕ ಬಳಿಕ ಈಗ ಮಕ್ಕಳ ಹೆತ್ತವರು ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ವಿದ್ಯುತ್ ಬಿಲ್‌ಗಳಲ್ಲೂ ಕನ್ನಡ ಮಾಯ
ಕನ್ನಡದಲ್ಲೂ ನೀಡಲಾಗುತ್ತಿದ್ದ ವಿದ್ಯುತ್ ಬಿಲ್‌ಗಳಲ್ಲೂ ಈಗ ಕನ್ನಡಕ್ಕೆ ಅವಕಾಶ ಇಲ್ಲ. ಕೇವಲ ಮಲಯಾಳದಲ್ಲಿ ಮಾತ್ರವೇ ನೀಡಲಾಗುತ್ತಿದೆ. ಯಾರಾದರೂ ಬೇಡಿಕೆ ಇರಿಸಿದರೆ ಮಾತ್ರವೇ ಇಂಗ್ಲಿಷ್‌ನಲ್ಲಿ ನೀಡಲು ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ ಕನ್ನಡದಲ್ಲಿ ನೀಡಬೇಕು ಎಂಬುದು ಕನ್ನಡಿಗರ ಆಗ್ರಹವಾಗಿದೆ.
ಕಲೋತ್ಸವದಲ್ಲಿ ಹೇಗೆ ಕನ್ನಡ ಅವಗಣನೆ?
ಕಲೋತ್ಸವದಲ್ಲೂ ಕನ್ನಡ ಅನಾಥ. ಕನ್ನಡ ಮಕ್ಕಳಿಗೆ ರಾಜ್ಯ ಮಟ್ಟದ ಸ್ಪರ್ಧೆಗೆ ನಿಷೇಧ.
ಪಠ್ಯೇತರ ಚಟುವಟಿಕೆ ನಡೆಯುವ ಕಾರ್ಯಕ್ರಮ ಪೂರ್ಣ ಮಲಯಾಳಮಯ.
ಸೂಚನೆ ಫಲಕ, ನಾಮಫಲಕ ಇತ್ಯಾದಿಗಳಲ್ಲಿ ಕನ್ನಡದಲ್ಲಿ ಇರಲಿಲ್ಲ, ವಿದ್ಯಾರ್ಥಿಗಳಿಗೆ ತೊಂದರೆ.
12 ವೇದಿಕೆಗಳಲ್ಲಿ ಕಾರ್ಯ ಕ್ರಮ. ಒಂದರಲ್ಲೂ ಕನ್ನಡ ಭಾಷೆಯ ನಾಮಫಲಕ ಇಲ್ಲ.
ಸರಕಾರಿ ಶಾಲೆಯ ಕಲೋ ತ್ಸವದ ಚಟುವಟಿಕೆಗಳಲ್ಲೂ ಮಲಯಾಳ ಭಾಷೆಗೇ ಒತ್ತು.
ಜಿಲ್ಲಾ ಸ್ಥಳೀಯ ಆಡಳಿತದ ಈ ನಡೆಯಿಂದ ಕನ್ನಡಿಗರ ಮಕ್ಕಳು, ಪೋಷಕರಿಗೆ ತೀವ್ರ ತೊಂದರೆ.
ಕನ್ನಡದ ಮಕ್ಕಳಿಗೆ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ನಿಷೇಧ
ಕನ್ನಡದ ವಿದ್ಯಾರ್ಥಿಗಳಿಗೆ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಕನ್ನಡ ಕಥಾ ರಚನೆ, ಕನ್ನಡ ಕವಿತೆ ರಚನೆ, ಪ್ರೌಢ ಶಾಲಾ ವಿಭಾಗದಲ್ಲಿ ಕಥಾ ರಚನೆ ಹಾಗೂ ಪ್ರಬಂಧ ರಚನೆ ಸ್ಪರ್ಧೆಗಳು ನಡೆದರೂ ಇಲ್ಲಿ ವಿಜೇತರಾದವರಿಗೆ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಇಲ್ಲ. ಈ ಸ್ಪರ್ಧೆಗಳು ರಾಜ್ಯ ಮಟ್ಟದ ಕೈಪಿಡಿ (ಮ್ಯಾನುಯಲ್)ಯಲ್ಲಿ ಇಲ್ಲ ಎಂಬ ಕಾರಣ ನೀಡಿ ಇದನ್ನು ಜಿಲ್ಲೆಗೆ ಸೀಮಿತಗೊಳಿಸಲಾಗಿದೆ. ಕನ್ನಡ ಅಧ್ಯಾಪಕರ ಒತ್ತಡದ ಹಿನ್ನೆಲೆಯಲ್ಲಿ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಮಧುಸೂದನ್ ಅವರು ಈ ಸ್ಪರ್ಧೆಗಳನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲು ಅವಕಾಶ ಕಲ್ಪಿಸಿದ್ದರು. ಇದು ಈ ಬಾರಿ ಮಾತ್ರವಲ್ಲ; ಪ್ರತೀ ವರ್ಷವೂ ಕನ್ನಡದ ವಿದ್ಯಾರ್ಥಿಗಳಿಗೆ ಕೆಲವು ಸರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಭಾಷೆಯ ಕಾರಣದಿಂದಾಗಿ ಅವಕಾಶ ನಿರಾಕರಣೆಯಾಗುತ್ತಿದೆ.
ಪ್ರದೀಪ್ ಬೇಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು
Waqf ಬಗ್ಗೆ ಬಿವೈವಿ ಜತೆ ಮಾತಾಡುವ ಅವಶ್ಯಕತೆ ನನಗಿಲ್ಲ: ಯತ್ನಾಳ್
ರಾಜ್ಯದ ಅರಣ್ಯ ನಿಧಿಗಾಗಿ ಕೇಂದ್ರ ಸರಕಾರಕ್ಕೆ ನಿಯೋಗ: ಅರಣ್ಯ ಸಚಿವ ಖಂಡ್ರೆ
Bus Fare Hike: ಸರಕಾರದ ಹೊಟ್ಟೆಗೆ ಇನ್ನೆಷ್ಟು ತೆರಿಗೆ, ಶುಲ್ಕ ತೆರಬೇಕು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.