14 ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ
Team Udayavani, Jan 1, 2018, 9:46 AM IST
ಬೆಂಗಳೂರು: ಹೊಸ ವರ್ಷಾಚರಣೆ ವೇಳೆ 30 ಮಂದಿ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಜತೆಗೆ, 14 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಾಲ್ವರಿಗೆ ಹೆಚ್ಚುವರಿ ಪೊಲೀಸ್
ಮಹಾನಿರ್ದೇಶಕರು, ಮೂವರು ಐಜಿಪಿ ಹಾಗೂ ಏಳು ಮಂದಿಯನ್ನು ಡಿಐಜಿಗಳನ್ನಾಗಿ ಮುಂಬಡ್ತಿ ನೀಡಲಾಗಿದೆ.
ಮುಂಬಡ್ತಿ-ಡಾ ಎಂ.ಎ.ಸಲೀಂ (ಅಪರಾಧ ಮತ್ತು ತಾಂತ್ರಿಕ ಸೇವೆಗಳು ಹಾಗೂ ಸಂಚಾರ ಮತ್ತು ರಸ್ತೆ ಸುರಕ್ಷಾ ಆಯುಕ್ತರು), ಕೆ.ಎಸ್.ಆರ್.ಚರಣ್ ರೆಡ್ಡಿ (ಪೊಲೀಸ್ ತರಬೇತಿ), ಕೆ.ರಾಮಚಂದ್ರರಾವ್ (ಮಾನವ ಹಕ್ಕುಗಳು ಹಾಗೂ ನಾಗರೀಕ ಹಕ್ಕುಗಳ
ನಿರ್ದೇಶನಾಲಯ), ಮಾಲಿನಿ ಕೃಷ್ಣಮೂರ್ತಿ(ಲಾಜಿಸ್ಟಿಕ್ ಮತ್ತು ಆತ್ಯಾಧುನಿಕ ವಿಭಾಗ) ಇವರಿಗೆ ಹೆಚ್ಚುವರಿ ಪೊಲೀಸ್
ಮಹಾನಿರ್ದೇಶಕ (ಎಡಿಜಿಪಿ) ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಅದೇ ರೀತಿ ಮೂವರು ಅಧಿಕಾರಿಗಳಿಗೆ ಐಜಿಪಿ ಹುದ್ದೆಗೆ ಮುಂಬಡ್ತಿ ನೀಡಲಾಗಿದ್ದು, ದಿವ್ಯಜ್ಯೋತಿ ರಾಯ್(ಐಜಿಪಿ, ಸದ್ಯ ಕೇಂದ್ರ ಸೇವೆಯಲ್ಲಿದ್ದಾರೆ). ಡಿ.ರೂಪಾ(ಗೃಹರಕ್ಷಕ ದಳ ಹೆಚ್ಚುವರಿ ಕಮಾಡೆಂಟ್), ಎನ್.ಶಿವಪ್ರಸಾದ್ (ಐಜಿಪಿ ಬಳ್ಳಾರಿ ವಲಯ).
ಹಾಗೆಯೇ ಏಳು ಮಂದಿಯನ್ನು ಡಿಐಜಿಯಾಗಿ ಮುಂಬಡ್ತಿ ನೀಡಲಾಗಿದೆ. ಸಂದೀಪ್ ಪಾಟೀಲ್ (ಕೆಎಸ್‌ಆರ್‌ಪಿ,ಬೆಂಗಳೂರು), ಪಿ.ಎಸ್.ಹರ್ಷಾ, (ವಾರ್ತಾ ಇಲಾಖೆ ನಿರ್ದೇಶಕರು), ಲಾಬೂರಾವ್ (ಸದ್ಯ ಗುಪ್ತಚರ ಇಲಾಖೆ ಕೇಂದ್ರ ಸೇವೆಯಲ್ಲಿದ್ದಾರೆ), ವಿಕಾಸ್ ಕುಮಾರ್ ವಿಕಾಸ್( ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ,), ಟಿ.ಡಿ.ಪವಾರ್(ಎಸಿಬಿ), ಅಣ್ಣೆಗೇರಿ ಮಂಜುನಾಥ್(ನಾಗರಿಕ ಹಕ್ಕುಗಳ ನಿರ್ದೇ ಶನಾಲಯ), ರವಿಕುಮಾರ್ ಎಚ್ .ನಾಯಕ್(ಗುಪ್ತಚರ ಇಲಾಖೆ) ಮುಂಬಡ್ತಿ ನೀಡಲಾಗಿದೆ. ಇದೇ ವೇಳೆ ಅಭಿಷೇಕ್ ಗೋಯಲ್, ಕೌಶಲೇಂದ್ರ ಕುಮಾರ್, ರಮಣಗುಪ್ತ (ಕೇಂದ್ರ ಸೇವೆಯಲ್ಲಿದ್ದಾರೆ.), ಬಿ.ಆರ್.ರವಿಕಾಂತೇಗೌಡ,
ಆರ್.ದಿಲೀಪ್, ಎಸ್.ಎನ್.ಸಿದ್ದರಾಮಪ್ಪ, ಆರ್. ರಮೇಶ್, ಎಸ್.ಡಿ.ಶರಣಪ್ಪ, ಎಂ.ಎನ್.ಅನುಚೇತ್, ಶಾಂತನು ಸಿನ್ಹಾ, ಬೊರಸೆ ಭೂಷಣ್ ಗುಲಾಬ್ ರಾವ್, ಸಿ. ವಂಶಿ ಕೃಷ್ಣ, ಅಭಿನವ್ ಖರೆ, ಬಿ.ರಮೇಶ್, ಈಡ ಮಾರ್ಟಿನ್, ರವಿ ಡಿ.ಚನ್ನಣ್ಣನವರ್ ಇವರಿಗೆ
ಎಸ್ಪಿ ದರ್ಜೆಯಲ್ಲೇ ಮುಂಬಡ್ತಿ(ಕಿರಿಯ ಆಡಳಿತ) ನೀಡಲಾಗಿದ್ದು, ಪ್ರಸ್ತುತ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರ್ಗಾವಣೆ ಅಲೋಕ್ ಮೋಹನ್(ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸಿಬಿ), ಅಲೋಕ್ ಕುಮಾರ್(ಉತ್ತರ ವಲಯ ಐಜಿಪಿ, ಬೆಳಗಾವಿ), ಬಿ.ಕೆ.ಸಿಂಗ್(ಪಶ್ಚಿಮ ವಲಯ ಹೆಚುrವರಿ ಪೊಲೀಸ್ ಆಯುಕ್ತ ಹಾಗೂ ಗೌರಿ ಹತ್ಯೆಯ ಪ್ರಕರಣದ ವಿಶೇಷ ತನಿಖಾ ದಳ), ಎಸ್.ಮುರುಗನ್(ಈಶಾನ್ಯ ವಲಯ, ಕಲಬುರಗಿ), ಕೆ.ವಿ.ಶರತ್ ಚಂದ್ರ(ಪೂರ್ವ ವಲಯ, ದಾವಣಗೆರೆ), ಸೌಮೇಂದ್ರ
ಮುಖರ್ಜಿ(ಐಜಿಪಿ, ವಿಶೇಷ ತನಿಖಾ ದಳ). ಆರ್. ರಮೇಶ್(ಕಮಾಡೆಂಡ್ ಗೃಹ ರಕ್ಷಕ ದಳ), ವರ್ತಿಕಾ ಕಟಿಯಾರ್(ಸಿಎಆರ್, ಬೆಂಗಳೂರು), ಅರುಣ್ ಕೆ, ಎಂ.ಎಸ್.ಮೊಹಮ್ಮದ್ ಸುಜಿತಾ (ಲೋಕಾಯುಕ್ತ ವಿಶೇಷ ತನಿಖಾ ದಳ, ಬೆಂಗಳೂರು) ಹಾಗೂ
ಸಂಜೀವ್ ಎಂ.ಪಾಟೀಲ್(ಡಿಸಿಪಿ ಆಡಳಿತ ವಿಭಾಗ,ಬೆಂಗಳೂರು) ಇಲ್ಲಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
Christmas: ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.