15 ಕಿ.ಮೀ. ಬೆನ್ನಟ್ಟಿ ಭ್ರಷ್ಟ ಅಧಿಕಾರಿ ಸೆರೆ !
ಲೋಕಾಯುಕ್ತ ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನ
Team Udayavani, Jul 16, 2023, 7:15 AM IST
ಬೆಂಗಳೂರು: ಪರವಾನಿಗೆ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ಮೇಲೆಯೇ ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ ಆಹಾರ ಇಲಾಖೆಯ ನಿರೀಕ್ಷಕನೊಬ್ಬನನ್ನು ಲೋಕಾಯುಕ್ತ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಉತ್ತರ ವಿಭಾಗದ ತಹಶೀಲ್ದಾರ್ ಕಚೇರಿಯಲ್ಲಿ ಆಹಾರ ನಿರೀಕ್ಷಕ ಆಗಿರುವ ಮಹಾಂತೇಗೌಡ ಬಿ. ಕಡಬಾಳು ಬಂಧಿತ ಅಧಿಕಾರಿ. ಆರೋಪಿ ವಿರುದ್ಧ ರಂಗಧಾಮಯ್ಯ ಎಂಬವರು ದೂರು ನೀಡಿದ್ದರು.
ರಂಗಧಾಮಯ್ಯ ಅವರಿಗೆ ಉದ್ದಿಮೆ ಪರವಾನಿಗೆ ನೀಡಲು ಮಹಾಂತೇ ಗೌಡ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಯಿಟ್ಟಿದ್ದ. ಈ ಪೈಕಿ 12 ಸಾವಿರ ರೂ. ಗಳನ್ನು ಮುಂಗಡವಾಗಿ ಪಡೆದು ಕೊಂಡಿದ್ದ. ಬಾಕಿ ಹಣ ಶುಕ್ರವಾರ ಕೊಡುವಂತೆ ಸೂಚಿಸಿದ್ದ. ಆದರೆ ಲಂಚ ನೀಡಲು ಇಷ್ಟವಿಲ್ಲದ ರಂಗಧಾಮಯ್ಯ ಅವರು ಈ ಕುರಿತು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾ ಯುಕ್ತ ಅಧಿಕಾರಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದರು.
15 ಕಿ.ಮೀ. ಬೆನ್ನಟ್ಟಿದರು
ಶುಕ್ರವಾರ ರಾತ್ರಿ ನಗರದ ಸ್ಥಳ ವೊಂದರಲ್ಲಿ ರಂಗಧಾಮಯ್ಯ ಅವ ರಿಂದ ಆರೋಪಿ ಮಹಾಂತೇಗೌಡ 43 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ. ಕಾದು ಕುಳಿತಿದ್ದ ಲೋಕಾಯುಕ್ತ ಅಧಿ ಕಾರಿಗಳು ಏಕಾಏಕಿ ದಾಳಿ ನಡೆಸಿದರು. ಇದು ಅರಿವಿಗೆ ಬರುತ್ತಲೇ ಆರೋಪಿ ಮಹಾಂತೇಗೌಡ ಲೋಕಾಯುಕ್ತ ಅಧಿಕಾರಿಗಳನ್ನು ತಳ್ಳಿ ತನ್ನ ಕಾರಿನಲ್ಲಿ ಪರಾರಿಯಾದ. ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಸುಮಾರು 15 ಕಿ.ಮೀ. ದೂರ ಬೆನ್ನಟ್ಟಿದರು. ಕೊನೆಗೆ ನೆಲಮಂಗಲದ ಸೊಂಡೇಕೊಪ್ಪ ರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿದರು.
ಕಾರು ಹತ್ತಿಸಲು ಯತ್ನ
ಆಗ ಆರೋಪಿ ಮಹಾಂತೇಗೌಡ ಲೋಕಾಯುಕ್ತ ಪೊಲೀಸರು ಮತ್ತು ಸಾಕ್ಷಿಗಳಾಗಿ ಬಂದಿದ್ದ ಪಂಚರ ಮೇಲೆ ಕಾರು ಹತ್ತಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಅಷ್ಟರಲ್ಲಿ ಪೊಲೀಸರು ಆತನ ಕಾರಿನ ಸುತ್ತ ಇಲಾಖೆಯ ಕಾರುಗಳನ್ನು ಅಡ್ಡಗಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
43 ಸಾವಿರ ರೂ. ಲಂಚ ಸಮೇತ ಮಹಾಂತೇಗೌಡನನ್ನು ಬಂಧಿಸಲಾಗಿದೆ. ಲಂಚ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ದೂರು ದಾಖಲಿಸಲಾಗಿದೆ. ಜತೆಗೆ ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಮತ್ತು ವಾಹನ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಆರೋಪದಡಿ ನೆಲಮಂಗಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಮುಖ್ಯಮಂತ್ರಿ ನೀತಿ ಗೆಟ್ಟು ಲೋಕಾಯುಕ್ತ ತನಿಖೆಗೆ ಹೋಗುತ್ತಿರುವುದು ನಾಚಿಗೇಡಿನ ಸಂಗತಿ
Hubballi: ಮುಖ್ಯಮಂತ್ರಿ ಸಿದ್ದರಾಮಯ್ಯ ಪೇ ಡಬಲ್ ಸಿಎಂ ಆಗಿದ್ದಾರೆ… :ಬೊಮ್ಮಾಯಿ
MUDA; ಕಾಂಗ್ರೆಸ್ ಗೊಂದು, ಬಿಜೆಪಿಗೊಂದು ಕಾನೂನು ಇದೆಯೇ?: ಎಚ್.ಕೆ.ಪಾಟೀಲ್
MUDA; ಲೋಕಾಯುಕ್ತ ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ: ಸಿಎಂ ಕಿಡಿ
Siddaramaiah ರಾಜೀನಾಮೆ ಕೊಟ್ಟು ವಜ್ರವೆಂದು ಸಾಬೀತುಪಡಿಸಲಿ: ಈಶ್ವರಪ್ಪ
MUST WATCH
ಹೊಸ ಸೇರ್ಪಡೆ
KPTCL ಕಾಮಗಾರಿ ಅವಾಂತರ; ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಬಳಿ ಅಪಾಯ
Udupi; ಬಜೆ ಡ್ಯಾಂ ಬಳಿ ಶಿಲಾಯುಗದ ನಿಲಿಸುಗಲ್ಲು ಪತ್ತೆ
US Result: ಡೊನಾಲ್ಡ್ Trumpಗೆ ಮತ್ತೊಮ್ಮೆ ಅಧ್ಯಕ್ಷ ಪಟ್ಟ; ಪ್ರಧಾನಿ ಮೋದಿ ಅಭಿನಂದನೆ
ಬಸ್- ಸ್ಕೂಟರ್ ಢಿಕ್ಕಿ ಪ್ರಕರಣ: ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಸವಾರ ಕೂಡ ಮೃತ್ಯು
Hubli: ಮುಖ್ಯಮಂತ್ರಿ ನೀತಿ ಗೆಟ್ಟು ಲೋಕಾಯುಕ್ತ ತನಿಖೆಗೆ ಹೋಗುತ್ತಿರುವುದು ನಾಚಿಗೇಡಿನ ಸಂಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.