ಬಿಪಿಎಲ್ ಕಾರ್ಡ್ಗಳಿಗೆ 16.35 ಲಕ್ಷ ಹೊಸ ಅರ್ಜಿ
Team Udayavani, Aug 30, 2017, 11:11 AM IST
ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ಗಳಿಗಾಗಿ 16.35 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ವಿಲೇವಾರಿ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ವಿಕಾಸ ಸೌಧದಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತ ನಾಡಿದ ಅವರು, 16.35 ಲಕ್ಷ ಅರ್ಜಿಗಳ ಪೈಕಿ 11.84 ಲಕ್ಷ ಅರ್ಜಿಗಳ ಪರಿಶೀಲನಾ ಕಾರ್ಯ ಮುಗಿದಿದೆ. 6.50 ಅರ್ಜಿಗಳ ಡಾಟಾ ಎಂಟ್ರಿ ಸಹ ಪೂರ್ಣಗೊಂಡಿದೆ. ಸೆಪ್ಟೆಂಬರ್ 20 ರಿಂದ ಕಾರ್ಡ್ಗಳ ಮುದ್ರಣ ಕಾರ್ಯ ಪ್ರಾರಂಭವಾಗಲಿದ್ದು, 30ರೊಳಗೆ ಮನೆ ಬಾಗಿಲಿಗೆ ಕಾರ್ಡ್ ತಲುಪಲಿದೆ. ರಾಜ್ಯದಲ್ಲಿ ಪ್ರಸ್ತುತ 1.10 ಕೋಟಿ ಬಿಪಿಎಲ್ ಕಾರ್ಡ್ಗಳಿದ್ದು ಹೊಸದಾಗಿ 16.50 ಲಕ್ಷ ಸೇರ್ಪಡೆಯಾಗಲಿವೆ. ಅದೇ ರೀತಿ 28 ಲಕ್ಷ ಎಪಿಎಲ್ ಕಾರ್ಡ್ಗಳಿದ್ದು ಹೊಸದಾಗಿ ಒಂದು ಲಕ್ಷ ಅರ್ಜಿ ಸಲ್ಲಿಕೆಯಾಗಿದೆ. ಅಷ್ಟೂ ಕಾರ್ಡ್ ವಿತರಣೆಯಾಗಿದೆ ಎಂದು ವಿವರಿಸಿದರು.
ಕಂದಾಯ ಹಾಗೂ ಆಹಾರ ಇಲಾಖೆ ಜತೆಗೂಡಿ ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಂಡಿದ್ದು, ಕಾರ್ಡ್ ವಿತರಣೆಗೆ ಯಾವುದೇ ರೀತಿಯಲ್ಲಿ ವಿಳಂಬವಾಗದಂತೆ ಎಚ್ಚರಿಕೆ ವಹಿಸಿ, ಹೆಚ್ಚುವರಿ ಸಿಬ್ಬಂದಿ ಸಹ ನಿಯೋಜಿಸಲಾಗಿದೆ ಎಂದರು. ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಕಾಯಿಲೆ ಇದ್ದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯ. ತುರ್ತಾಗಿ ಕಾರ್ಡ್ ಬೇಕಾದರೆ ಆಹಾರ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಹೋಗಿ ಆದಾಯ ಪ್ರಮಾಣ ಪತ್ರ ಕೊಟ್ಟು ತಕ್ಷಣ ಪಡೆಯಬಹುದಾಗಿದೆ. ರಾಜ್ಯದಲ್ಲಿರುವ 20,412 ಪಡಿತರ ವಿತರಣೆ ಮಳಿಗೆಗಳಿಗೆ ಪಾಯಿಂಟ್ ಆಫ್ ಸೇಲ್ ಯಂತ್ರ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಒಂದೊಮ್ಮೆ ಯಂತ್ರ ಅಳವಡಿಕೆ ಮಾಡಿಕೊಳ್ಳದಿದ್ದರೆ ಅಂತಹ ಭಾಗದಲ್ಲಿ ಕೂಪನ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಕಮೀಷನ್ ಕಡಿತ ಸಹ ಮಾಡಲಾಗುವುದು ಎಂದು ಹೇಳಿದರು.
ಪಾಯಿಂಟ್ ಆಫ್ ಸೇಲ್ ಯಂತ್ರಕ್ಕೆ 15 ರಿಂದ 20 ಸಾವಿರ ರೂ.ಆಗಲಿದೆ. ಅದನ್ನು ಅಳವಡಿಸಿಕೊಳ್ಳಲು ಇಂಟರ್ ನೆಟ್ ಸಮಸ್ಯೆ ಇದೆ ಎಂದಾದರೆ ಇಲಾಖೆಯ ತಂತ್ರಜ್ಞರು ಹೋಗಿ ವ್ಯವಸ್ಥೆ ಮಾಡಿಕೊಡಲಿದ್ದಾರೆ. ಸಮಸ್ಯೆ ಇಲ್ಲದಿದ್ದರೂ ಅಳವಡಿಸಿಕೊಳ್ಳಲು ನಿರಾಕರಿಸಿದರೆ ಅದು ಬೇಕಂತಲೇ ದುರುಪಯೋಗಕ್ಕಾಗಿ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬ್ಯಾಗ್ನಲ್ಲಿ ಪಡಿತರ
ಕಾರ್ಡ್ದಾರರಿಗೆ ಬ್ಯಾಗ್ನಲ್ಲೇ ಪಡಿತರ ಕೊಡುವ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಕಾರ್ಡ್ನ ಪ್ರತಿ ಸದಸ್ಯನಿಗೆ 7 ಕೆಜಿಯ ಪಡಿತರ ಬ್ಯಾಗ್ ಸಿದ್ಧಪಡಿಸಿ ನೀಡಲಾಗುವುದು. ಇದರಿಂದ ಮೋಸ ತಪ್ಪಿಸಬಹುದು. ಇದಕ್ಕೆ ಹೆಚ್ಚುವರಿಯಾಗಿ 10 ಕೋಟಿ ರೂ.ಬೇಕಾಗಿದೆ. ಪ್ರಸ್ತುತ
ಯೋಜನೆಗೆ 120 ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ಸಚಿವ ಖಾದರ್ ಹೇಳಿದರು.
ಬಿಪಿಎಲ್ ಕಾರ್ಡ್ಗಳನ್ನು ಇದೇ ಮೊದಲ ಬಾರಿಗೆ ಆಧಾರ್ ಕಾರ್ಡ್ ಮಾದರಿಯಲ್ಲಿ ಮುದ್ರಿಸಲಾಗುತ್ತಿದೆ. ಕೇಂದ್ರದ ಯುಪಿಎ ಸರ್ಕಾರ ಆಧಾರ್ ಕಾರ್ಡ್ ಮುದ್ರಣಕ್ಕೆ ಕರ್ನಾಟಕದ ಮಣಿಪಾಲ್ ಪ್ರಿಂಟಿಂಗ್ ಪ್ರಸ್ನ್ನು ಆಯ್ಕೆ ಮಾಡಿತ್ತು. ಡೇಟಾ ಗೌಪ್ಯತೆ, ಕಡಿಮೆ ದರದಲ್ಲಿ ಮುದ್ರಣ ಮತ್ತಿತರ ಕಾರಣಗಳಿಂದಾಗಿ ರಾಜ್ಯ ಸರ್ಕಾರ ಕೂಡ ಮಣಿಪಾಲ್ ಪ್ರಸ್ಗೆ ಮುದ್ರಣಕ್ಕಾಗಿ ನೀಡಿದೆ. ಪ್ರತಿ ಬಿಪಿಎಲ್ ಕಾರ್ಡ್ ಮುದ್ರಣಕ್ಕೆ ಕೇವಲ 2 ರೂ. ವೆಚ್ಚ ಭರಿಸಲಾಗುತ್ತಿದೆ. ಆಧಾರ್ ಕಾರ್ಡ್ನ್ನು ಕೂಡ ಇದೇ ವೆಚ್ಚದಲ್ಲಿ ಮುದ್ರಿಸಲಾಗಿದೆ. ದಿನವೊಂದಕ್ಕೆ 1 ಲಕ್ಷ ಕಾರ್ಡ್ ಮುದ್ರಿಸುವ ಸಾಮರ್ಥ್ಯವನ್ನು ಮುದ್ರಣಾಲಯ ಹೊಂದಿದೆ. ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಉದ್ಭವವಾಗದಂತೆ ನಕಲು ಮಾಡಲು ಸಾಧ್ಯವಿಲ್ಲದಂತೆ ಸಿದ್ಧಪಡಿಸಲಾಗಿದೆ.
ಯು.ಟಿ.ಖಾದರ್, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.