ರಾಜ್ಯದಲ್ಲಿ 19,510 ಉದ್ಯೋಗ ಸೃಷ್ಟಿ: 3,829 ಕೋಟಿ ರೂ.ಬಂಡವಾಳ ಹೂಡಿಕೆ
ಒಟ್ಟು 61ಯೋಜನೆಗಳಿಗೆ ಅನುಮೋದನೆ : ಸಚಿವ ಮುರುಗೇಶ್ ಆರ್. ನಿರಾಣಿ
Team Udayavani, Jul 29, 2022, 6:45 PM IST
ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ವಿಶೇಷ ಗಮನ ಹರಿಸುತ್ತಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಅವರು, 3829.46 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯ ಒಟ್ಟು 61 ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ.
ಶುಕ್ರವಾರ ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ 133ನೇ ಏಕಗವಾಕ್ಷಿ ಸಮಿತಿಯ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.
ಒಟ್ಟು 61 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, 3829. 46 ಕೋಟಿ ರೂ. ಮೊತ್ತದ ಹೊಡಿಕೆ ಮಾಡುವುದರಿಂದ ರಾಜ್ಯದಲ್ಲಿ ಸುಮಾರು 19150 ಉದ್ಯೋಗಗಳು ಸೃಷ್ಡಿಯಾಗಲಿವೆ ಎಂದು ಸಚಿವ ಮುರುಗೇಶ್ ಆರ್. ನಿರಾಣಿ ಅವರು ತಿಳಿಸಿದ್ದಾರೆ.
50 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ ಒಟ್ಟು 13 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದೆ. ಇದರಿಂದ ಅಂದಾಜು 2979.35 ಕೋಟಿ ರೂ ಹೂಡಿಕೆಯಾಗಿ 16158 ಉದ್ಯೋಗ ಸೃಜನೆಯಾಗಲಿವೆ ಎಂದು ಹೇಳಿದರು.
ಇದೇ ವೇಳೆ 15 ಕೋಟಿಯಿಂದ 50 ಕೋಟಿ ಒಳಗಿನ 42 ಯೋಜನೆಗೆ ಹಸಿರು ನಿಶಾನೆಯನ್ನು ನೀಡಲಾಗಿದೆ. 774.51 ಕೋಟಿ ರೂ ಹೂಡಿಕೆಯೊಂದಿಗೆ 3352 ಉದ್ಯೋಗ ಲಭಿಸಲಿವೆ.
ಹೆಚ್ಚುವರಿ ಬಂಡವಾಳ ಹೂಡಿಕೆಯ ಒಟ್ಟು 6 ಯೋಜನೆಯಿಂದ 75. 60 ಕೋಟಿ ರೂ ಹೂಡಿಕೆಯಾಗಲಿದೆ.
ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಬಂದು ಎಲ್ಲಾ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರುಕಳಿಸಿರುವುದರಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯತ್ತ ಸಚಿವ ನಿರಾಣಿ ಅವರು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ.
ಉದ್ಯಮಿಗಳ ಆಕರ್ಷಣೆ , ಕೈಗಾರಿಕೆಗಳ ಪುನಶ್ಚೇತನ, ಬಂಡವಾಳ ಹೂಡಿಕೆ ಮಾಡುವವರಿಗೆ ವಿಶ್ವ ದರ್ಜೆಯ ಮೂಲಭೂತ ಸೌಕರ್ಯ ಸೇರಿದಂತೆ ಕೈಗಾರಿಕಾ ವಲಯದಲ್ಲಿ ಅಮೂಲಾಗ್ರ ಬದಲಾವಣೆ ಮುನ್ನುಡಿ ಬರೆಯುತ್ತಿದ್ದಾರೆ.
ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಮಣರೆಡ್ಡಿ, ಇಲಾಖೆಯ ಆಯುಕ್ತೆ, ಗುಂಜನ್ ಕೃಷ್ಣ , ಕೆಐಎಎಡಿಬಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಶಂಕರ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
ಅನುಮೋದನೆ ನೀಡಿರುವ ಯೋಜನೆಗಳು
ಟೊಯೋಟಾ ಕಿರ್ಲೋಸ್ಕರ್ ಆಟೋ ಪಾಟ್ಸ್೯ 445 ಕೋಟಿ ರೂ ಹೂಡಿಕೆ, 1198 ಉದ್ಯೋಗ ಸೃಷ್ಟಿ
ಮೈಕ್ರಾನ್ ಟೆಕ್ನಾಲಜಿ ಆಪರೇಷನ್ ಇಂಡಿಯಾ ಎಲ್ ಎಲ್ ಪಿ. 397 ಕೋಟಿ ರೂ. ಹೂಡಿಕೆ ಹಾಗೂ 797 ಉದ್ಯೋಗ
ಸೀತಾರಾಮಂ ಇಸ್ಟಾಟ್ ಪ್ರೈ. ಲಿ. 376 ರೂ. ಕೋಟಿ ಹೂಡಿಕೆ. 400 ಉದ್ಯೋಗ
ಜಿಂದಾಲ್ ಇಂಡಸ್ಟ್ರೀಸ್ ಹೀಸಾರ್ ಪ್ರೈ. ಲಿ, 340ರೂ ಕೋಟಿ ಹೂಡಿಕೆ, 310 ಉದ್ಯೋಗ
ಸೂರಾಜ್ ಆಗ್ರೋ ಡಿಸ್ಡೀಲಿಸ್ ಲಿ 185 ಕೋಟಿ ರೂ ಹೂಡಿಕೆ, 170 ಉದ್ಯೋಗ
ನಹಾರಾಸ್ ಎಂಜಿನಿಯರಿಂಗ್ ಇಂಡಿಯಾ ಪ್ರೈ.ಲಿ 120 ಕೋಟಿ ರೂ ಹೂಡಿಕೆ, 353 ಉದ್ಯೋಗ
ಶ್ರೀ ಬ್ರಮ್ಮೇಶ್ವರಿ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಮಾಗೂರ್, 112 ಕೋಟಿ ರೂ ಹೂಡಿಕೆ, 80 ಉದ್ಯೋಗ
ಲೂಜಾನ್ ಫಾರ್ಮಾ ಪ್ರೈ.ಲಿ. ₹97.50 ಕೋಟಿ ಹೂಡಿಕೆ, 246 ಉದ್ಯೋಗ
ಎನ್.ಎಸ್.ಪಿ. ಡಿಸ್ಟಿಲರಿ ಪ್ರೈ.ಲಿ 64.64 ಕೋಟಿ ರೂ. ಹೂಡಿಕೆ,116 ಉದ್ಯೋಗ
ಸ್ಟ್ರೀಂಗ್ ಬಯೋ ಪ್ರೈ. ಲಿ 75 ಕೋಟಿ ರೂ. 48 ಉದ್ಯೋಗ
ಋಷಿಲ್ ಡೆಕೋರ್ ಲಿ 72.76 ಕೋಟಿ ರೂ. ಹೂಡಿಕೆ, 310 ಉದ್ಯೋಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.