ರಾಜ್ಯದಲ್ಲಿ 2 ಭೀಕರ ಅಪಘಾತಗಳು : 14 ಮಂದಿ ದಾರುಣ ಸಾವು
Team Udayavani, Mar 23, 2019, 2:14 AM IST
ವಿಜಯಪುರ/ಸಿಂದಗಿ: ಸಾವಿನ ಹೆದ್ದಾರಿ ಎಂದೇ ಕುಖ್ಯಾತಿ ಪಡೆದಿರುವ ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿ-218ರ ಚಿಕ್ಕಸಿಂದಗಿ ಬಳಿ ಶುಕ್ರವಾರ ನಸುಕಿನ ಜಾವ ಕ್ರೂಸರ್ ಹಾಗೂ ಕ್ಯಾಂಟರ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, 6 ಜನರು ಗಂಭೀರ ಗಾಯಗೊಂಡಿದ್ದಾರೆ.
ಗೋವಾ ಪ್ರವಾಸ ಮುಗಿಸಿ ಮರಳಿ ಕಲಬುರಗಿ ಜಿಲ್ಲೆಯ ಚಿತ್ತಾಪುರಕ್ಕೆ ಹೊರಟಿದ್ದ ಪ್ರವಾಸಿಗರಿದ್ದ ಕ್ರೂಸರ್ ಹಾಗೂ ವಿಜಯಪುರ ಕಡೆಗೆ ಹೊರಟಿದ್ದ ಕ್ಯಾಂಟರ್ ಮಧ್ಯೆ ಶುಕ್ರವಾರ ಬೆಳಗ್ಗೆ 5:30ಕ್ಕೆ ಚಿಕ್ಕಸಿಂದಗಿ ಹೊರ ವಲಯದಲ್ಲಿ ಮುಖಾಮುಖೀ ಆಪಘಾತ ಸಂಭವಿಸಿದೆ. ಆಪಘಾತದ ಭೀಕರತೆಗೆ ಕ್ರೂಸರ್‌ನಲ್ಲಿದ್ದ 8 ಜನರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾರೆ. ಕಬ್ಬಿಣದ ಸರಳುಗಳ ಮಧ್ಯೆ ಸಿಕ್ಕಿಕೊಂಡಿದ್ದ ಹಲವರ ಶವಗಳನ್ನು ಪ್ರಯಾಸದಿಂದ ಹೊರ ತೆಗೆಯಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಓರ್ವ ಮೃತಪಟ್ಟಿದ್ದಾನೆ.
ಮೃತರೆಲ್ಲರೂ ಚಿತ್ತಾಪುರ ಪಟ್ಟಣದ ಕ್ರೂಸರ್ ಚಾಲಕ ಶ್ರೀನಾಥ ಈಶ್ವರಪ್ಪ ನಾಲವಾರ (25), ಅಂಬರೀಷ್ ಲಕ್ಷ್ಮಣ ದೊರೆ (30), ಯೂನುಸ್ ಸರ್ವರಪಟೇಲ್ ಕಡಬೂರ (25), ಸಾಗರ ಶಂಕ್ರಪ್ಪ ದೊಡಮನಿ (22), ಚಾಂದ ಮಶ್ಯಾಕಸಾಬ ಮುಜಾವರ (24), ಗುರುರಾಜ ಸಾಬಣ್ಣ ಹಕೀಂ (35), ಶಾಕೀರ್ ಅಬ್ದುಲ್ ರಹೀಮ್ ಶೇಖ (27), ಅಜೀಮ್ ಅಬ್ದುಲ್ ರಹೀಂ ಶೇಖ (35) ಹಾಗೂ ಮೂನ್ಸುಫ್ ಸರ್ವರ ಪಟೇಲ್ ಕಡಬೂರ (28) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಂಜೂರ ಸರ್ವರಸಾಬ ಕಡಬೂರ (32), ಆಕಾಶ ಲಕ್ಷ್ಮಣ ದೊರೆ (20), ಮಲ್ಲಿಕಾರ್ಜುನ ಬಸವರಾಜ ಜಮಾದಾರ (29), ಸದ್ದಾಂ (25) ಹಾಗೂ ಕ್ಯಾಂಟರ್ ಚಾಲಕ ಸೀಮಾಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡಪಲ್ಲಿಗುಡಂನ ಸೋಪೇಠಿ ಆನಂದ ನಾಗೇಶ್ವವರರಾವ್ (25) ಹಾಗೂ ಕ್ಲೀನರ್ ಸಾಜೀದ್ ಇಸ್ಮಾಯಿಲ್ ಖದರಬಾಬು (22) ಅವರನ್ನು ಸಿಂದಗಿ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
5 ಮಂದಿ ಸಾವು
ನಾಗಮಂಗಲ: ಪ್ಯಾಸೆಂಜರ್ ಆಟೋಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಸುಂಕನಹಳ್ಳಿ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಈ ದುರ್ಘಟನೆಯಲ್ಲಿ ಪ್ಯಾಸೆಂಜರ್ ಆಟೋ ಚಾಲಕ ಸತೀಶ್, ಕಾಳೇನಹಳ್ಳಿ ಅರಸಮ್ಮ, ಕಾಂತಾಪುರದ ಬೋರಲಿಂಗ, ಸುರೇಶ್ ಹಾಗೂ ಸುಖಧರೆ ಗ್ರಾಮದ ಕುಮಾರ ಎಂಬವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬಸವಶೆಟ್ಟಿ, ಪುಟ್ಟ ಸೇರಿದಂತೆ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸಮೀಪದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗಮಂಗಲ ಕಡೆಯಿಂದ ಬೋಗಾದಿ ಕಡೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೋಗೆ ನಾಗಮಂಗಲ ಕಡೆಗೆ ಬರುತ್ತಿದ್ದ ಬಾಲಾಜಿ ಕನ್‌ಸ್ಟ್ರಕ್ಷನ್‌ಗೆ ಸೇರಿದ ಟಿಪ್ಪರ್‌ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಅಪ ಘಾತಕ್ಕೊಳಗಾದ ಲಾರಿಯನ್ನು ರಸ್ತೆಯಿಂದ ತೆರವುಗೊಳಿ ಸುವ ಪ್ರಯತ್ನಕ್ಕೆ ಪೊಲೀಸರು ಮುಂದಾದರಾದರೂ, ಸ್ಥಳೀಯರು ಅವಕಾಶ ನೀಡಲಿಲ್ಲ. ಸ್ಥಳದಲ್ಲಿ ಪ್ರತಿಭಟನೆ
ನಡೆಸುತ್ತಿರುವುದರಿಂದ ಬಿಗುವಿನ ವಾತಾವರಣ ನೆಲೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.